HOSANAGARA ; ಇಲ್ಲಿನ ಜೆಸಿಎಂ ರಸ್ತೆಯ ತಮ್ಮ ಸ್ವಂತ ಕಟ್ಟಡದಲ್ಲಿ 2007ರಂದು ಸ್ಥಾಪಿಸಲಾಗಿರುವ ಸಂಘಗಳಲ್ಲಿಯೇ ಪ್ರತಿಷ್ಠೆ ಪಡೆದಿರುವ ಶ್ರೀ ವೀರಶೈವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ವರಕೋಡು ಈಶ್ವರಪ್ಪ ಗೌಡರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಸುಮಾರು ವರ್ಷಗಳಿಂದ ಈ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ವಕೀಲ ಪಿ ನಂಜುಂಡಪ್ಪನವರು ತಮ್ಮ ಸ್ವಇಚ್ಛೆಯಿಂದ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ವೀರಶೈವ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಚುನಾವಣೆ ನಡೆದಿದು ಚುನಾವಣೆಯಲ್ಲಿ ವರಕೋಡು ಈಶ್ವರಪ್ಪಗೌಡ 6 ಮತಗಳು ಹಾಗೂ ಪ್ರತಿಸ್ಪರ್ದಿ ಸಿದ್ದವೀರಪ್ಪಗೌಡರವರಿಗೆ 5ಮತಗಳು ಲಬಿಸಿದ್ದು ಒಂದು ಮತಗಳ ಅಂತರದಿಂದ ವರಕೋಡು ಈಶ್ವರಪ್ಪ ಗೌಡರವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಶಿವಮೊಗ್ಗ ಸಹಕಾರಿ ಅಭಿವೃದ್ಧಿ ಅಧಿಕಾರಿ ವೆಂಕಟಚಲ ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯನ್ನು ಸ್ಥಾಪಿಸಿ ನಿರ್ದೆಶಕರಾಗಿರುವ ಹರತಾಳು ನಾಗರಾಜ್, ಮಾಜೀ ಅಧ್ಯಕ್ಷರಾದ ಪಿ. ನಂಜುಂಡಪ್ಪ, ಮಾವಿನಕಟ್ಟೆ ಶಿವಾನಂದ, ಕುಮಾರಗೌಡ, ಮಂಜಪ್ಪ, ಡಿ.ವಿ.ಆರ್ ಷೋರೂಂ ಮಾಲೀಕರಾದ ಮಲ್ಲಿಕಾ, ಶೇಖರಪ್ಪ, ಸಿದ್ಧವೀರಪ್ಪ, ರಾಜಪ್ಪ ಗೌಡ, ಜ್ಯೋತಿ ಪ್ರಶಾಂತ್, ಕಂಕಳಲೆ ಜಯಕುಮಾರ್, ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಗೀತಾ ಗಿರೀಶ್, ಸಿಬ್ಬಂದಿಗಳಾದ ಅರ್ಪಿತ, ಲೋಕೇಶ್, ನಿರಂಜನ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.