Accident ಚಿಕ್ಕಮಗಳೂರು

ಚಿಕಿತ್ಸೆ ಪಡೆಯಲು ಬಂದ ವೃದ್ಧೆ ಮೇಲೆ ನಿಲ್ದಾಣದಲ್ಲಿ ಸಾರಿಗೆ ಬಸ್ ಹರಿದು ಸಾವು !

CHIKKAMAGALURU | ವೃದ್ಧೆಯೊಬ್ಬರ ಮೇಲೆ ಸಾರಿಗೆ ಬಸ್ ಹರಿದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ಕೆ.ಎಸ್‌.ಆರ್‌.ಟಿ.ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದ ಪುಟ್ಟಮ್ಮ (80) ಬಸ್ ಹರಿದು ಸಾವನ್ನಪ್ಪಿರುವ ವೃದ್ಧೆ. ಕೊಪ್ಪದಿಂದ ಚಿಕ್ಕಮಗಳೂರಿನ ಬಸ್‌ ನಿಲ್ಲಾಣ ಪ್ರವೇಶಿಸು ಸಮಯದಲ್ಲಿ ಪುಟ್ಟಮ್ಮ ಬಸ್‌ ಅನ್ನು ಗಮನಿಸದೆ ನಿಲ್ಲಾಣದ ಇನ್ನೊಂದು ಭಾಗಕ್ಕೆ ತೆರಳುತ್ತಿರುವಾಗ ಬಸ್ಸಿನ ಎಡಭಾಗ ತಗುಲಿ ಬಿದ್ದ ಕಾರಣ ಮುಂಭಾಗದ ಚಕ್ರ ವೃದ್ಧೆಯ ಹೊಟ್ಟೆಯ ಮೇಲೆ ಹರಿದ ಪರಿಣಾಮ ಹೊಟ್ಟೆಯಿಂದ ಕರುಳು ಹೊರಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಕೂಡಲೇ ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ.

inshot_20241113_1244126082570235561405245372.jpg

ಚಿಕಿತ್ಸೆ ಪಡೆಯಲು ಪುಟ್ಟಮ್ಮ ಚಿಕ್ಕಮಗಳೂರಿನ ಆಸ್ಪತ್ರೆಗೆ ಬಂದಿದ್ದರು. ವಾಪಾಸ್ ಗ್ರಾಮಕ್ಕೆ ತೆರಳಲು ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದಿದ್ದಾಗ ಈ ಒಂದು ದುರಂತ ಸಂಭವಿಸಿದೆ.

ಘಟನೆ ಕುರಿತಂತೆ ಚಿಕ್ಕಮಗಳೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment