RIPPONPETE ; ಇಲ್ಲಿನ ಗ್ರಾಮ ಪಂಚಾಯತಿ ಅಧ್ಯಕ್ಷೆ ವಿರುದ್ಧ ಆಧಾರ ರಹಿತವಾದ ಆರೋಪವನ್ನು ಮಾಡಿ ರಾಜಕೀಯ ಪ್ರೇರಿತವಾಗಿ ಬಿಜೆಪಿ ಪ್ರತಿಭಟನೆಗೆ ಇಳಿದರೆ ನಾವು ಸಹಿತ ಬಿಜೆಪಿ ಮುಖಂಡರ ವಿರುದ್ಧ ಆಧಾರ ಸಹಿತವಾಗಿ ಪ್ರತಿಭಟಿಸುತ್ತೇವೆ ಎಂದು ಹೊಸನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಹೇಳಿದರು.
ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಧನಲಕ್ಷ್ಮಿ ಗ್ರಾಮ ಪಂಚಾಯತಿಯ ಅಧ್ಯಕ್ಷೆಯಾದ ನಂತರ ಮಹಿಳೆಯಾಗಿದ್ದರೂ ಭ್ರಷ್ಟಾಚಾರ ರಹಿತವಾದ ಸಮರ್ಥ ಆಡಳಿತವನ್ನು ನೀಡುತ್ತಿದ್ದಾರೆ. ಗ್ರಾ.ಪಂ.ಸದಸ್ಯ ಗಣಪತಿ ಮೇಲೆ ಕ್ಷುಲ್ಲಕ ಕಾರಣವನ್ನು ಇಟ್ಟುಕೊಂಡ ಬಿಜೆಪಿ ಮುಖಂಡರು ಸುಳ್ಳು ಆಪಾದನೆಗಳನ್ನು ಮಾಡುತ್ತ ರಾಜಕೀಯ ಮಾಡುತ್ತಿದ್ದಾರೆ. ಇದು ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಏಳಿಗೆಯನ್ನು ಸಹಿಸದೆ ತಮ್ಮ ತಪ್ಪುಗಳನ್ನು ಮರೆಮಾಚುವ ಉದ್ದೇಶದ ಕುತಂತ್ರ ನಡೆಸುತ್ತಿದ್ದಾರೆ. ಹುರುಳಿಲ್ಲದ ಆರೋಪಗಳಿಂದ ರಾಜೀನಾಮೆ ನೀಡಬೇಕಾದ ಅಗತ್ಯವಿಲ್ಲ. ಮತ್ತೆ ಮತ್ತೆ ಅನಾವಶ್ಯಕವಾಗಿ ಸಾರ್ವಜನಿಕರನ್ನು ದಾರಿ ತಪ್ಪಿಸುವ ವ್ಯವಸ್ಥೆಗೆ ಮುಂದಾದರೆ ಬಿಜೆಪಿ ನಾಯಕರುಗಳ ಭ್ರಷ್ಟಾಚಾರ ಹಾಗೂ ಮಹಿಳೆಯರ ಬಗ್ಗೆ ಕೀಳು ಅಭಿರುಚಿಯಲ್ಲಿ ಮಾತನಾಡಿರುವ ದಾಖಲಾತಿಗಳು ನಮ್ಮ ಬಳಿಯೂ ಇದ್ದು ನಾವು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿ ನಿಮ್ಮ ಸಾಚತನವನ್ನು ಬಟಾಬಯಲು ಮಾಡುತ್ತೇವೆ. ಈಗಿನ ತಾಂತ್ರಿಕ ಯುಗದಲ್ಲಿ ಯಾರ ಧ್ವನಿಯನ್ನು ಯಾರು ಬೇಕಾದರೂ ಅಣುಕು ಮಾಡಬಹುದು, ನಿಮಗೆ ಉತ್ತರ ನೀಡಲು ಪಕ್ಷ ತಯಾರಿದೆ, ಅಂಜುವ ಅಗತ್ಯವಿಲ್ಲ. ನಿಮ್ಮ ವರ್ತನೆ ಹೀಗೆಯೇ ಮುಂದುವರೆದರೆ ಬಿಜೆಪಿಯವರ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷರಿಂದ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಂಡಿ ರಾಮಚಂದ್ರ, ಅಮೀರ್ ಹಂಜ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ. ಪರಮೇಶ, ಕೆಂಚನಾಲ ಗ್ರಾ.ಪಂ. ಅಧ್ಯಕ್ಷ ಉಬೇದುಲ್ಲಾ ಷರೀಫ್, ಸದಸ್ಯರಾದ ಆಸಿಫ್, ಪ್ರಕಾಶ್ ಪಾಲೇಕರ್, ಗಣಪತಿ, ನಿರುಪಮಾ, ಎನ್. ಚಂದ್ರೇಶ್, ಮಧುಸೂದನ್ ಡಿ.ಈ., ಫ್ಯಾನ್ಸಿ ರಮೇಶ್, ಶ್ರೀಧರ ಇನ್ನಿತರರಿದ್ದರು.
ಉಪಚುನಾವಣೆಯಲ್ಲಿ ಜಯಭೇರಿ, ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ
RIPPONPETE ; ವಿಧಾನಸಭಾ ಉಪಚುನಾವಣೆಯಲ್ಲಿ ಶಿಗ್ಗಾಂವ್, ಚನ್ನಪಟ್ಟಣ, ಸಂಡೂರು ಎಲ್ಲಾ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿದ ಹಿನ್ನೆಲೆಯಲ್ಲಿ ಪಟ್ಟಣದ ವಿನಾಯಕ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಚಂದ್ರಮೌಳಿ ಬಿ.ಜಿ., ಮುಖಂಡರಾದ ಬಿ.ಪಿ. ರಾಮಚಂದ್ರ, ಅಮೀರ್ ಹಂಜ, ಆಸಿಫ್, ಗಣಪತಿ, ನೇಮಣ್ಣ, ಜಾಕೀರ್, ಮಳವಳ್ಳಿ ವಿಜಯ, ರಮೇಶ, ನೂರುಲ್ಲಾ, ಕೆರೆಹಳ್ಳಿ ನವೀನ, ಗಣೇಶರಾವ್, ಮೊಯಿದ್ದೀನ್, ಡಿ.ಈ. ಮಧುಸೂದನ್, ಪ್ರಕಾಶ, ಎನ್. ಚಂದ್ರೇಶ, ಕಲೀಲ್ ಇನ್ನಿತರರಿದ್ದರು.