HOSANAGARA ; ಸ್ವಾತಂತ್ರ್ಯ ಭಾರತಕ್ಕೆ ಸಂವಿಧಾನ ರಚಿಸಿ ಅದನ್ನು ಅಂಗೀಕರಿಸಿ ವ್ಯವಸ್ಥಿತವಾಗಿ ಜಾರಿಗೊಳಿಸಿ ಅತ್ಯಂತ ಶಕ್ತಿ ಶಾಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕೀರ್ತಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ರವರಿಗೆ ಸಲ್ಲುತ್ತದೆ ಎಂದು ಹೊಸನಗರ ತಾಲ್ಲೂಕು ಬಿಜೆಪಿ ಅಧ್ಯಕ್ಷ ನಿಟ್ಟೂರು ಸುಬ್ರಹ್ಮಣ್ಯ ಹೇಳಿದರು.
ಪಟ್ಟಣದ ಅಂಬೇಡ್ಕರ್ ಕಾಲೋನಿಯಲ್ಲಿರುವ ಕೃಷ್ಣಪ್ಪನವರ ಮನೆಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಎಸ್.ಸಿ, ಎಸ್.ಟಿ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ರಾಮುರವರು ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಕಾರ್ಯಕ್ರದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹೆಚ್.ಎನ್ ಶ್ರೀಪತಿರಾವ್, ಎನ್.ಆರ್ ದೇವಾನಂದ್, ಜಿಲ್ಲಾ ಓ.ಬಿ.ಸಿ ಮೋರ್ಚದ ಅಧ್ಯಕ್ಷರಾದ ಎಂ.ಎನ್ ಸುಧಾಕರ್, ಟೌನ್ ಶಕ್ತಿ ಕೇಂದ್ರದ ಅಧ್ಯಕ್ಷ ಸತ್ಯನಾರಾಯಣ ವಿ, ಕಾವೇರಿ ವಿಜಯ, ಮಹಿಳಾ ಪ್ರಮುಖರಾದ ರಾಜೇಶ್ವರಿ, ಪಟ್ಟಣ ಪಂಚಾಯತಿ ಸದಸ್ಯರಾದ ಗಾಯಿತ್ರಿ ನಾಗರಾಜ್, ಕೃಷ್ಣವೇಣಿ, ಅಲ್ಪ ಸಂಖ್ಯಾತ ಘಟಕ ಮೂರ್ಚದ ಖಾಸಿಂ, ನಾರಾಯಣಮೂರ್ತಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಉಮೇಶ್ ಹಾಗೂ ಬಿಜೆಪಿ ಘಟಕದ ಎಲ್ಲ ಅಧ್ಯಕ್ಷ ಸದಸ್ಯರು ಮಹಿಳಾ ಸದಸ್ಯರುಗಳು ಉಪಸ್ಥಿತರಿದ್ದರು.
ಆರವ್ ಸೂರ್ಯ – ಆಶುಭಾಷಣದಲ್ಲಿ ಪ್ರಥಮ
HOSANAGARA ; ಇತ್ತೀಚೆಗೆ ಪಟ್ಟಣದ ಹೋಲಿ ರಿಡೀಮರ್ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಾವಿಕೈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಆರವ್ ಸೂರ್ಯ ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾನೆ.
ಶಿಕ್ಷಕ ದಂಪತಿಗಳಾದ ಅಂಜುಬೇಬಿ ಹಾಗೂ ವಿ.ಡಿ. ನಾಗರಾಜ ಪುತ್ರನಾದ ಈತನ ಸಾಧನೆಗೆ ಶಾಲಾ ಭೋದಕ ವರ್ಗ ಪ್ರಶಂಸೆ ವ್ಯಕ್ತಪಡಿಸಿದೆ.
ಆಶುಭಾಷಣ ಸ್ಪರ್ಧೆಯಲ್ಲಿ ಅರ್ಜುನ್ ರಾಜ್ ಜಿಲ್ಲಾ ಮಟ್ಟಕ್ಕೆ ಆಯ್ಕೆ
HOSANAGARA ; ಇಲ್ಲಿನ ಹೋಲಿ ರಿಡೀಮರ್ ಶಾಲೆಯಲ್ಲಿ ಆಯೋಜಿಸಿದ್ದ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಪ್ರತಿಭೆ ಕಾರಂಜಿಯಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫ್ರೌಡಶಾಲಾ ವಿಭಾಗದ 9ನೇ ತರಗತಿ ವಿದ್ಯಾರ್ಥಿ ಅರ್ಜುನ್ ರಾಜ್ ಆಶು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾನೆ.
ಇವನು ಶಿಕ್ಷಕ ದಂಪತಿ ವಿ.ಡಿ.ನಾಗರಾಜ್ ಹಾಗು ಅಂಜುಬೇಬಿ ಅವರ ಪುತ್ರ.