SHIVAMOGGA ; ಅ. 10 ರಂದು ರಾತ್ರಿ 7.20 ಕ್ಕೆ ನಗರದ ಸಾಗರ ರಸ್ತೆ ಹೆಲಿಪ್ಯಾಡ್ ಸರ್ಕಲ್ ಬಳಿ ಶಶಿಕುಮಾರ್ ಎಂಬುವವರ ದ್ವಿಚಕ್ರ ವಾಹನದ ಹಿಂಭಾಗಕ್ಕೆ ಅನಾಮಧೇಯ ವ್ಯಕ್ತಿಯೋರ್ವರು ಮೋಟಾರ್ ಬೈಕ್‌ನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾರೆ.
ಗಾಯಾಳುಗಳಾದ ಶಶಿಕುಮಾರ್ ಹಾಗೂ ಶಫಿ ಅಹ್ಮದ್ ಈ ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಬೈಕಿನಿಂದ ಡಿಕ್ಕಿ ಹೊಡೆಸಿದ ಅನಾಮಧೇಯ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಮಾತನಾಡಿಸಿಕೊಂಡು ಹೋಗಿರುತ್ತಾನೆ. ಆದರೆ ಅಪರಿಚಿತ ಬೈಕ್ ಸವಾರ ಮತ್ತು ಬೈಕಿನ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಈ ಭಾವಚಿತ್ರದಲ್ಲಿರುವ ವ್ಯಕ್ತಿಯನ್ನು ನೋಡಿದವರು ಪಿ.ಎಸ್.ಐ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಮೊ.ನಂ. 9480803346 ಮತ್ತು ದೂ.ಸಂ. 08182 261417 ಮಾಹಿತಿ ನೀಡುವಂತೆ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.