ಹೊಸನಗರ ತಾಲೂಕು ಕಸಾಪ ನೂತನ ಅಧ್ಯಕ್ಷರಾಗಿ ನಾಗರಕೊಡಿಗೆ ಗಣೇಶಮೂರ್ತಿ ಅವಿರೋಧ ಆಯ್ಕೆ

Written by malnadtimes.com

Published on:

HOSANAGARA ; ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ನಾಗರಕೊಡಿಗೆ ಗಣೇಶಮೂರ್ತಿ ಅವಿರೋಧ ಆಯ್ಕೆಯಾದರು.

WhatsApp Group Join Now
Telegram Group Join Now
Instagram Group Join Now

ಇಂದು ಪಟ್ಟಣದ ಶ್ರೀರಾಮ ಕಾಂಪ್ಲೆಕ್ಸ್ ನಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ ಮಂಜುನಾಥ್ ಸಭೆಯಲ್ಲಿ ಚಿಂತನ ಮಂಥನ ನಡೆದ ನಂತರ ನಾಗರಕೊಡಿಗೆ ಗಣೇಶಮೂರ್ತಿ ಅವರ ಹೆಸರನ್ನು ಪ್ರಕಟಿಸಿದರು.

ಈ ಸಭೆಯಲ್ಲಿ ಹಿರಿಯ ಚಿಂತಕರು ಸಾಹಿತ್ಯ ಅಭಿಮಾನಿಗಳು ಲೇಖಕರಾದ ಡಾ. ಶಾಂತರಾಮ ಪ್ರಭು, ಡಾ. ಶ್ರೀಪತಿ ಹಳಗುಂದ, ನಿಕಟಪೂರ್ವ ಅಧ್ಯಕ್ಷರುಗಳಾದ ತ.ಮ. ನರಸಿಂಹ, ಕೆ ಇಲಿಯಾಸ್, ಮಾರ್ಷಲ್ ಶರಾಂ, ಕೆ.ಕೆ ಅಶ್ವಿನಿ ಕುಮಾರ್, ಮಂಜುನಾಥ ಕಾಮತ್, ಎಂ.ಕೆ ವೆಂಕಟೇಶಮೂರ್ತಿ, ಕೆ.ಜಿ ನಾಗೇಶ್, ಕುಬೇಂದ್ರಪ್ಪ, ಜಿ.ಎನ್ ಬಸಪ್ಪಗೌಡ, ಎನ್ ವಿಜೇಂದ್ರ ಶೇಟ್, ಎಸ್.ಎಚ್ ನಿಂಗಮೂರ್ತಿ, ಎಸ್.ಎನ್ ರಾಜಮೂರ್ತಿ, ಎನ್.ವಿ ಲಲಿತಾ, ಕೆ. ಸುರೇಶ್ ಕುಮಾರ್, ಗರ್ತಿಕೆರೆ ಬಷೀರ್ ಅಹಮ್ಮದ್, ನಗರ ರಾಘವೇಂದ್ರ, ವಾಸಪ್ಪಗೌಡ, ಈಶ್ವರಪ್ಪ ಗೌಡ, ನವೀನ್ ಕುಮಾರ್, ಪ್ರಶಾಂತ ಮೊದಲಾದವರು ಉಪಸ್ಥಿತರಿದ್ದು ಸೂಕ್ತ ಸಲಹೆ ಮಾಹಿತಿ ನೀಡಿದರು.

Leave a Comment