ಪ್ರಧಾನಮಂತ್ರಿಯಾಗಿ ವಾಜಪೇಯಿ ಜನಹಿತ ಕೆಲಸ ಮಾಡಿದ್ದಾರೆ ; ಹರತಾಳು ಹಾಲಪ್ಪ

Written by malnadtimes.com

Published on:

HOSANAGARA ; 65 ವರ್ಷಗಳ ರಾಜಕೀಯ ಜೀವನ ಆರಂಭಿಸಿ ಜನಪರ ಕೆಲಸ ಮಾಡಿ ದೇಶದ ಶ್ರೇಷ್ಠ ನಾಯಕರುಗಳಲ್ಲಿ ಒಬ್ಬರಾಗಿದ್ದರೂ ಪ್ರಧಾನ ಮಂತ್ರಿಯಾಗಿ ಕೇವಲ 9 ವರ್ಷ ಆಡಳಿತ ನಡೆಸಿದ್ದರೂ 9 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಪರ್ವವನ್ನೇ ಕೊಡುಗೆಯಾಗಿ ನೀಡಿದವರು ದಿವಗಂತ ಅಟಲ್ ಬಿಹಾರಿ ವಾಜಪೇಯಿಯವರು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಬಿಜೆಪಿ ಕಛೇರಿಯಲ್ಲಿ ವಾಜಪೇಯಿಯವರ 100ನೇ ವರ್ಷದ ಜನ್ಮ ದಿನಾಚರಣೆಯನ್ನು ಸುಶಾಸನ ದಿನಾಚರಣೆಯನ್ನಾಗಿ ಆಚರಿಸಲಾಗಿದ್ದು ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದರು.

ಮನುಷ್ಯನ ದೇಹದಲ್ಲಿ ಎಷ್ಟು ನರನಾಡಿಗಳಿರುತ್ತಾವೆಯೋ ಅಷ್ಟು ಭಾರತ ದೇಶದಲ್ಲಿ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಕಾಣಬೇಕೆಂಬ ಕನಸುಗಳನ್ನು ಇಟ್ಟುಕೊಂಡು ರಸ್ತೆಗಳ ನಿರ್ಮಾಣದಿಂದಲೇ ದೇಶವನ್ನು ಅಭಿವೃದ್ಧಿ ಪಥದತ್ತಾ ತೆಗೆದುಕೊಂಡು ಹೋದವರು ವಾಜಪೇಯಿಯವರು ಎಂದರು.

ರಾಜ್ಯದಲ್ಲೀಗ ದಶ್ಯಾಸನ ಆಡಳಿತ ನಡೆಯುತ್ತಿದೆ :

ಸುಶಾಸನ ಎಂದರೆ ಎಲ್ಲರನ್ನು ಸಮನಾಗಿ ಕಾಣುವುದು ಹಾಗೂ ದೇಶವನ್ನು ಅಭಿವೃದ್ಧಿ ಪಡಿಸುವುದು ಅಬಿವೃದ್ಧಿ ಪಡಿಸಿದ ವ್ಯಕ್ತಿಯನ್ನು ನೆನೆಯುವುದು ಆದರೇ ಈಗ ಕರ್ನಾಟಕ ರಾಜ್ಯದಲ್ಲಿ ಸುಶಾಸನ ಆಡಳಿತದ ಬದಲಾಗಿ ದುಶ್ಯಾಸನ ಆಡಳಿತ ನಡೆಸುತ್ತಿದ್ದು ಮುಂದಿನ ದಿನದಲ್ಲಿ ಎಲ್ಲದಕ್ಕೂ ತೆರೆ ಬೀಳಲಿದೆ ಎಂದರು.

ಭಾರತ ದೇಶದಲ್ಲಿ ವಾಜಪೇಯಿ ಹಾಗೂ ಇಂದು ಕೇಂದ್ರ ಸಚಿವರಾಗಿರುವ ಗಡ್ಕರಿಯವರು ದೇಶದ ಉದ್ದಗಲಕ್ಕೂ ಉತ್ತಮ ರೀತಿಯ ರಸ್ತೆ ನಿರ್ಮಿಸಿ ದೇಶದ ಇತಿಹಾಸವನ್ನೆ ಬದಲಾಯಿಸಿದವರು ಇವರ ಇಂತಹ ಕಾರ್ಯದಿಂದ ಭಾರತ ದೇಶ ಅಭಿವೃದ್ಧಿ ಹಂತಕ್ಕೆ ತಲುಪಿದೆ ಎಂದರು.

ಅವರವರ ಮಾತಿನಿಂದ ಅವರ ವ್ಯಕ್ತಿತ್ವ ತೋರಿಸುತ್ತದೆ :

ಹೊಸನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿ.ಟಿ ರವಿಯವರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಸಿ.ಟಿ ರವಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಏಕವಚನದಲ್ಲಿ ನಿಂದಿಸಿದ್ದು ಸರಿಯಲ್ಲ ಅವರ ಮಾತು ನಡತೆ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಹೊಸನಗರ ತಾಲ್ಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಚಿದಂಬರಗೆ ಟಾಂಗ್ ನೀಡಿದರು.

ಹೊಸನಗರ ತಾಲ್ಲೂಕಿನ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿದೆ
ಹೊಸನಗರ ತಾಲ್ಲೂಕಿನಲ್ಲಿ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಕಾಂಗ್ರೇಸ್ ಪಕ್ಷದ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿದೆ ಅತೀ ಶೀಘ್ರವಾಗಿ ಹೋರಾಟ ನಡೆಸುವ ಅಗತ್ಯವಿದ್ದು ಮುಂದಿನ ದಿನದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಬಿಜೆಪಿ ಕಾರ್ಯಕರ್ತರಿಗೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗೆ ಅಂದು ಉತ್ತರ ನೀಡುತ್ತೇವೆಂದರು.

ಹೊಸನಗರ ತಾಲ್ಲೂಕು ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ವಾಜಪೇಯಿಯವರ ಆಡಳಿತದ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಗಣಪತಿ ಬೆಳಗೋಡು, ಓ.ಬಿ.ಸಿ ಜಿಲ್ಲಾಧ್ಯಕ್ಷ ಎಂ.ಎನ್ ಸುಧಾಕರ್, ಮುಖಂಡರುಗಳಾದ ಎ.ವಿ ಮಲ್ಲಿಕಾರ್ಜುನ್, ಮಹಾಶಕ್ತಿ ಕೆಂದ್ರದ ಅಧ್ಯಕ್ಷರಾದ ಶ್ರೀಪತಿರಾವ್ ಹಾಗೂ ಉಮೇಶ್ ಹಾಲಗದ್ದೆ, ಪ್ರವೀಣ್, ಮಂಡಾನಿ ಮೋಹನ್, ಬಸವರಾಜ್ ಭೋಜಪ್ಪ, ಪ್ರವೀಣ್. ಗಣೇಶ್ ಹಿರೇಮಣತಿ, ಹೇಮಂತ್, ಸತ್ಯನಾರಾಯಣ, ವಿಜಯಕುಮಾರ್ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Leave a Comment