ಹೊಸನಗರ ; ಪಟ್ಟಣದ ಆರಕ್ಷಕ ಠಾಣೆಯಲ್ಲಿ ಗುರುವಾರ ಹುತಾತ್ಮರ ದಿನದ ಆಚರಣೆಯನ್ನು ಎಎಸ್ಐ ಸತೀಶ್ ರಾಜ್ ನೇತೃತ್ವದಲ್ಲಿ ಸಿಬ್ಬಂದಿ ವರ್ಗದವರು ಹುತಾತ್ಮರಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಎಎಸ್ಐ ನಿರಂಜನ್, ಎಎಸ್ಐ ರತ್ನಾಕರ್ ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ವಿಶ್ವಕ್ಕೆ ಸತ್ಯ ಮತ್ತು ಅಹಿಂಸಾ ಮಾರ್ಗ ತೋರಿದ ಹಾಗೂ ಭಾರತಕ್ಕೆ ತಮ್ಮ ಪ್ರಾಣ ತೆತ್ತು ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಕನಸನ್ನು ನನಸಾಗಿಸಲು ಎಲ್ಲರೂ ಪಣ ತೊಡಬೇಕೆಂದರು.

ಹುತಾತ್ಮರ ಮೇಲೆ ಕೇವಲ ಗಾಂಧೀಜಿಯವರಷ್ಟೇ ಅಲ್ಲ ರಾಷ್ಟ್ರಕ್ಕಾಗಿ ಮಡಿದ ಎಲ್ಲ ದಿವ್ಯತ್ಮರ ಸೇವೆಯನ್ನು ಮಹಾತ್ಮ ಗಾಂಧೀಜಿ ಮಡಿದ ಜನವರಿ 30ರಂದು ಸ್ಮರಿಸುವ ದಿನವಾಗಿದೆ ಎಂದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





