ಹೊಸನಗರ ; ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಕಾಲೇಜಿನ ವಾಣಿಜ್ಯಶಾಸ್ತ್ರ ಹಾಗೂ ನಿರ್ವಹಣಾ ಶಾಸ್ತ್ರ ವೇದಿಕೆ ಆಶ್ರಯದಲ್ಲಿ ವಿದ್ಯಾರ್ಥಿಗಳು ನಾಲ್ಕೈದು ಜನರ ತಂಡವನ್ನು ರಚಿಸಿ ಮಲೆನಾಡಿನ ವಿವಿಧ ಸವಿರುಚಿಗಳನ್ನು ರಚಿಸಿ ವೇದಿಕೆ ಏರ್ಪಡಿಸಿದ ಆಹಾರ ಬೆಳೆಯಲ್ಲಿ ರುಚಿ ರುಚಿಯಾದ ಆಹಾರ ಪದಾರ್ಥಗಳನ್ನು ಪೇಯಗಳನ್ನು ತಯಾರಿಸುವ ಮೂಲಕ ಎಲ್ಲರ ಗಮನ ಸೆಳೆದರು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/18t3Fp96cZ/
ವಿದ್ಯಾರ್ಥಿಗಳೇ ರೂಪಿಸಿದ ಆಹಾರ ಮೇಳದಲ್ಲಿ ಮಲೆನಾಡಿನ ಸವಿರುಚಿಗಳಾದ ಕೊಟ್ಟೆ ಕಡಬು, ಅರಿಶಿಣದ ಎಲೆ ಕಡಬು, ತೊಡೆದೇವು, ಅವುಗ, ಕೆಂಡಕಡ್ಬು, ಬಸಳೆ ಸೊಪ್ಪು, ಮಿರ್ಚಿ ಬೋಂಡಾ, ಚಪಾತಿ ರೋಲ್, ಗೋಲ್ಗುಪ್ಪ, ಪಾನಿಪುರಿ, ಮಸಾಲಪುರಿ, ಮಸಾಲೆ ಮಂಡಕ್ಕಿ, ಗೋಬಿ, ಮಂಚೂರಿ, ಪೊಟಾಟೋ ಕೆಎಫ್ಸಿ, ಸಾಫ್ಟ್ ಬ್ರೆಡ್, ಡೆಸೋರ್ಟ್, ಬಟಾಟೆ ರೋಲ್, ಜಾಕ್ ಫ್ರೂಟ್ ಕಬಾಬ್, ಸುವರ್ಣ ಗಡ್ಡೆ ಕಬಾಬ್, ಮೋಜಿಟೊ, ಮಸಾಲಾ ಮಜ್ಜಿಗೆ, ರಾಗಿಹಾಲು, ಪೊಟಾಟೋ ಟ್ರಿಯನ್ಗ್ಲೇಹುಗ್ಗಿಸ್ ಹಾಗೂ ವಿವಿಧ ಬಗೆಯ ತಂಪು ಪಾನಿಯಗಳನ್ನ ತಯಾರಿಸಿ ಮಾರಾಟ ಮಾಡುವ ಮೂಲಕ ನಾವು ಯಾರಿಗೆ ಏನು ಕಮ್ಮಿ ಇಲ್ಲ ಎಂಬುದನ್ನು ಸಾಬೀತುಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಕೆ ಉಮೇಶ್ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹಾಗೂ ವೇದಿಕೆ ಸಂಚಾಲಕ ಎಸ್ ಗೌತಮ್ ಹಾಗೂ ಇತರ ಸಹೋದ್ಯೋಗಿ ಉಪನ್ಯಾಸಕರು ಆಹಾರಮೇಳದಲ್ಲಿ ಪಾಲ್ಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.