ಹೊಸನಗರ ತಾಲೂಕಿನಾದ್ಯಂತ ನಿಲ್ಲದ ವರುಣನ ಅಬ್ಬರ ; ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ಗೊತ್ತಾ ?
ಹೊಸನಗರ : ತಾಲೂಕಿನಾದ್ಯಂತ ಪುಷ್ಯ ಮಳೆಯಬ್ಬರ ಮುಂದುವರೆದಿದ್ದು ಇಂದು ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಮೂರೂವರೆ ಅಡಿ ನೀರು ಸಂಗ್ರಹವಾಗಿ ಜಲಾಶಯದ ನೀರಿನ ಮಟ್ಟ 1782.30 ಅಡಿ ತಲುಪಿದ್ದು ಜಲಾಶಯಕ್ಕೆ 68645 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 1798.25 ಅಡಿ ದಾಖಲಾಗಿತ್ತು. ಜಲಾಶಯದ ಗರಿಷ್ಠ ಮಟ್ಟ 1819 ಅಡಿ ಆಗಿದೆ.
ಬುಧವಾರ ಬೆಳಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸಾವೇಹಕ್ಲುವಿನಲ್ಲಿ 140 ಮಿ.ಮೀ. ಮಳೆಯಾಗಿದೆ. ಉಳಿದಂತೆ ಹುಲಿಕಲ್ 138, ಮಾಣಿ 132, ಮಾಸ್ತಿಕಟ್ಟೆ ಹಾಗೂ ಯಡೂರಿನಲ್ಲಿ 117, ಚಕ್ರಾನಗರ 112 ಕಾರ್ಗಲ್ (ಸಾಗರ) 108 ಮತ್ತು ಹೊಸನಗರದಲ್ಲಿ 78 ಮಿಲಿ ಮೀಟರ್ ಮಳೆ ದಾಖಲಾಗಿರುತ್ತದೆ.