ನಗರ ; ನಗ-ನಾಣ್ಯ ದೋಚಿ ಪರಾರಿಯಾಗಿದ್ದ ಆರೋಪಿ ಬಂಧನ

Written by Mahesha Hindlemane

Updated on:

ಹೊಸನಗರ ; ನಗ-ನಾಣ್ಯ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಮಾ.03 ರಂದು ತಾಲೂಕಿನ ಮತ್ತಿಕೈ ಗ್ರಾಮದ ದೊಡ್ಡಮನೆ ವಾಸಿ ಪರಮೇಶ್ವರಯ್ಯ ಬಿನ್ ಶಿವರಾಮಯ್ಯ ಸಂಬಂಧಿಕರ ಮನೆಯಲ್ಲಿ ಉಪನಯನ ಕಾರ್ಯಕ್ರಮವಿದ್ದರಿಂದ ಮಧ್ಯಾಹ್ನ 12-30ಕ್ಕೆ ತೆರಳಿದ್ದು ಕಾರ್ಯಕ್ರಮ ಮುಗಿಸಿ ಮನೆಗೆ ವಾಪಾಸ್ ಬಂದಾಗ ಮನೆಯ ಬಾಗಿಲು ತೆರೆದಿದ್ದು ಮರದ ಕಪಾಟಿನಲ್ಲಿದ್ದ ಸುಮಾರು 60 ಸಾವಿರ ರೂ. ಮೌಲ್ಯದ 12 ಗ್ರಾಂ ತೂಕದ ಚಿನ್ನದ ಸರ ಹಾಗೂ 15 ಸಾವಿರ ರೂ. ನಗದು ಕಳ್ಳತನವಾಗಿದ್ದು ಆರೋಪಿ ಹಾಗೂ ಮಾಲು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ 303(3)305(ಎ)ಬಿ.ಎನ್.ಎಸ್ -2023 ರೀತ್ಯಾ ಪ್ರಕರಣ ದಾಖಲಾಗಿತ್ತು.

ಮಾ.20 ರಂದು ಪ್ರಕರಣದ ಆರೋಪಿ ಕಟ್ಟಿನಹೊಳೆ ಗ್ರಾಮದ ಚಾಲಕ ಕೆ.ಆರ್ ಶರತ್ ಬಿನ್ ರವೀಶ (26) ಈತನನ್ನು ಬಂಧಿಸಿ ಆರೋಪಿಯಿಂದ ಅಂದಾಜು 1 ಲಕ್ಷ ರೂ. ಮೌಲ್ಯದ 12 ಗ್ರಾಂ ತೂಕದ ಬಂಗಾರದ ಸರ  ಹಾಗೂ ಕೃತ್ಯಕ್ಕೆ ಬಳಸಿದ್ದ ಅಂದಾಜು 65 ಸಾವಿರ ರೂ. ಮೌಲ್ಯದ ಬೈಕ್ ಅನ್ನು ಅಮಾನತು ಪಡಿಸಿಕೊಂಡಿದ್ದಾರೆ‌.

ಎಸ್ಪಿ ಮಿಥುನ್ ಕುಮಾರ್ ಜಿ.ಕೆ., ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮತ್ತು ಎಎಸ್ಪಿ 2 ಕಾರಿಯಪ್ಪ ವಿ.ಜಿ ರವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಅರವಿಂದ ಎನ್ ಕಲಗುಜ್ಜಿ ಹಾಗೂ ಹೊಸನಗರ ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ ಮೇಲ್ವಿಚಾರಣೆಯಲ್ಲಿ ಆರೋಪಿ ಪತ್ತೆ ಮತ್ತು ಬಂಧನ ಕಾರ್ಯ ನಡೆಸಲಾಗಿದ್ದು, ಪತ್ತೆ ಕಾರ್ಯದಲ್ಲಿ ನಗರ ಪಿಎಸ್ಐ ಶಿವಾನಂದ ಕೋಳಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಈ ತನಿಖಾ ತಂಡದ ಉತ್ತಮ ಕಾರ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

Leave a Comment