ಹೊಸನಗರ ; ಮನಃಪೂರ್ವಕವಾಗಿ ದೇವರಿಗೆ ನೀಡುವ ಸಂಪತ್ತು ಇದ್ದರೆ, ಅದು ಭಜನೆ ಮಾತ್ರ ಎಂದು ಮಾಜಿ ಶಾಸಕ ಬಿ.ಸ್ವಾಮಿರಾವ್ ಹೇಳಿದರು.
ತಾಲೂಕಿನ ಸೊನಲೆ ಗ್ರಾಮದ ಶ್ರೀರಾಮೇಶ್ವರ ದೇವಸ್ಥಾನದ 18ನೇ ವರ್ಧ್ಯಂತ್ಯುತ್ಸವ ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಜನೆಯಿಂದ ಆತ್ಮಶುದ್ಧಿ ಹಾಗೂ ಸಾಮಾಜಿಕ ಸಂಘಟನೆ ಗಟ್ಟಿಗೊಳ್ಳುವುದೇ ಅಲ್ಲದೇ, ಭಗವಂತನ ಸಾಕ್ಷಾತ್ಕಾರಕ್ಕೆ ಸಹಕಾರಿಯಾಗಲಿದೆ. ಭಜನೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಯುವಪೀಳಿಗೆ ಮುಂದಾಗಬೇಕು. ಮಕ್ಕಳಿಗೆ ಭಜನೆ ಕಲಿಕೆಗೆ ಉತ್ತೇಜಿಸಬೇಕೆಂದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪಟೇಲ್ ಗರುಡಪ್ಪಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಗ್ರಾಮ ಪಂಚಾಯಿತಿ ಸದಸ್ಯ ತಟ್ಟಿಕೇವಿ ಸತೀಶ್, ಅರ್ಚಕ ನಾಗರಾಜ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಂಬಾರು ಸತೀಶ್, ರಾಮೇಶ್ವರ ಭಜನಾ ಮಂಡಳಿಯ ವೆಂಕಟರಮಣ, ಪ್ರಮುಖರಾದ ಕಗ್ಲಿ ರಾಜಶೇಖರ್, ಹೊಸಗದ್ದೆ ರವಿ, ಈಶ್ವರ ಭಂಡಾರಿ, ಕೊಳಗಿ ಭೋಜಶೆಟ್ಟಿ, ಸುಬ್ರಮಣ್ಯ ಶೆಟ್ಟಿ, ಮುಂಬಾರು ತಿಮ್ಮಪ್ಪ ಮತ್ತಿತರರು ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.