ಗುತ್ತಿಗೆದಾರರಿಂದ ಶಿಕಾರಿಪುರ ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ ; ಯಾಕೆ ಗೊತ್ತಾ ?

0 46

ಶಿಕಾರಿಪುರ : ತಾಲ್ಲೂಕಿನ ಮೆಸ್ಕಾಂ ಗುತ್ತಿಗೆದಾರರಿಂದ ವಿವಿಧ ರೀತಿಯ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೆಸ್ಕಾಂ ಕಛೇರಿ ಎದುರು ಧರಣಿ ನಡೆಸುವುದರ ಮೂಲಕ ಭ್ರಷ್ಟ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಲಾಯಿತು.

ಮೆಸ್ಕಾಂ ಗುತ್ತಿಗೆದಾರರ ಹಲವು ಬೇಡಿಕೆಗಳಾದ 1 ರಿಂದ 5 ಲಕ್ಷದವರೆಗಿನ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು, ಬೆಳಕು ಮತ್ತು ಎಲ್ ಸಿ ಬಿಲ್ಲುಗಳನ್ನು ವಿಭಾಗೀಯ ಕಚೇರಿಯಲ್ಲಿ ವಿಳಂಬವಾಗದಂತೆ ತ್ವರಿತವಾಗಿ ವಿಲೇವಾರಿ ಮಾಡಬೇಕು, ಉಗ್ರಾಣದಲ್ಲಿ ಸಾಮಗ್ರಿಗಳನ್ನು ಮತ್ತು ಪರಿವರ್ತನೆಗಳನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು, ಶೀಘ್ರ ಸಂಪರ್ಕ ಯೋಜನೆಯಡಿ ಗ್ರಾಹಕರಿಗೆ ಟಿ ಸಿ (ಟ್ರಾನ್ಸ್‌ಫಾರ್ಮರ್) ಯನ್ನು ಸ್ವಂತ ಖರ್ಚಿನಿಂದ ಖರೀದಿಸುವಂತೆ ಸೂಚಿಸುತ್ತಿರುವ ಬಗ್ಗೆ, ಲೈನ್‌ ಮ್ಯಾನ್‌ಗಳು ಮತ್ತು ಅಧಿಕಾರಿಗಳು ದೀರ್ಘಕಾಲದಿಂದ ಒಂದೇ ಕಡೆ ಕಾರ್ಯನಿರ್ವಹಿಸುತ್ತಿದ್ದು ಇಲಾಖೆ ಕೆಲಸ ಬಿಟ್ಟು ಗುತ್ತಿಗೆದಾರರಂತೆ ಕೆಲಸ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕೆಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಈ ಹಿಂದಿನ ನೀರಾವರಿ ಪಂಪಸೆಟ್‌ನ ಡಿಫೆರೆಂಟ್ ಡಿಪಾಸಿಟ್, ಹಣವನ್ನು ಗುತ್ತಿಗೆದಾರರಿಂದ ಭರಿಸುವಂತೆ ಕೇಳಲಾಗುತ್ತಿದೆ ಇದನ್ನು ಸರಿಯಾದ ರೀತಿಯಲ್ಲಿ ಪರಿಗಣಿಸಬೇಕು. ಲೈಟಿಂಗ್ ವಿದ್ಯುತ್‌ ಸಂಪರ್ಕಕ್ಕೆ NOC ಕಡ್ಡಾಯಗೊಳಿಸಲಾಗಿದೆ ಮತ್ತು ಶಿರಾಳಕೊಪ್ಪ ಉಪ ವಿಭಾಗದಲ್ಲಿ ಹೆಚ್ಚುವರಿ ವಿದ್ಯುತ್‌ ಸಂಪರ್ಕಕ್ಕೆ NOC ಕೇಳುತ್ತಿರುವುದು, ಇಲಾಖೆ ಕಾಮಗಾರಿಗಳನ್ನು ಸಂಭಂಧಿಸಿದ ಅಧಿಕಾರಿಗಳು ತಮಗೆ ಬೇಕಾದ ಗುತ್ತಿಗೆದಾರರಿಗೆ ನೀಡುತ್ತಿರುವುದು ಸರಿಯಲ್ಲ. ವರ್ಕ ಯುನಿಟಿನಲ್ಲಿ ಗುತ್ತಿಗೆದಾರರ ಗಮನಕ್ಕೆ ಬಾರದಂತೆ ಇಂಡೆಂಟಗಳು ಮತ್ತು ಬಿಲ್‌ಗಳು ಪಾಸ್ ಆಗುತ್ತಿರುತ್ತಿದೆಯಲ್ಲದೆ, ಕಾಮಗಾರಿ ಮುಗಿಸಿದ ನಂತರ ಯುಟಿಲೈಜೇಷನ್ ನೀಡದೇ, ಕಾಮಗಾರಿಗಳನ್ನು ಸರಿಯಾಗಿ ಹಂಚಿಕೆ ಮಾಡಿಕೊಡದೇ ಅಧಿಕಾರಿಗಳು ಸ್ವತಃ ತಾವೇ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಹಾಗಾದರೆ ಗುತ್ತಿಗೆದಾರರಾಗಿ ನಾವೇಕೆ ಇರುವುದು ಎಂದು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಅನೇಕ ಗುತ್ತಿಗೆದಾರರು ಭಾಗವಹಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

Leave A Reply

Your email address will not be published.