ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ಧ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

0 44

ರಿಪ್ಪನ್‌ಪೇಟೆ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿಗೆ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ಹಾಲಿ ಅಧ್ಯಕ್ಷ
ಮಹಾಬಲೇಶ್ವರ ಹೆಗಡೆ ಅವರ ನೇತೃತ್ವದ ಎಲ್ಲಾ 17 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಸಾಮಾನ್ಯ ವರ್ಗದ 11 ಸ್ಥಾನಗಳಿಗೆ ಮಹಾಬಲೇಶ್ವರ ಹೆಗಡೆ, ತಿಮ್ಮಪ್ಪ ಎಂ.ಎಸ್.,‌ ಪುಟ್ಟಪ್ಪ ಕೆ.ವಿ., ಸತೀಶ ರಾಮಕೃಷ್ಣ ಹೆಗಡೆ,‌ ಆನಂದ್ ಎಂ.ಸಿ., ಶ್ರೀಕಾಂತ್ ಎಸ್., ಕರಿಬಸಯ್ಯ‌ ಕೆ.ಎಂ., ಆಂಜನೇಯ ಬಿ., ಬಾಲಚಂದ್ರ ಗಜಾನನ‌ ಭಟ್ಟ, ಕೆರಿಯಪ್ಪ ಹೆಚ್., ಜಗದೀಶ್ ಎಸ್., ಇವರ ಆಯ್ಕೆ ನಡೆದಿದೆ.


ಪರಿಶಿಷ್ಟ ಜಾತಿ ಸ್ಥಾನದಿಂದ ಎಸ್.ವಿ. ವಿಜಯ.ಕುಮಾರ ಸ್ವಾಮಿ, ಪರಿಶಿಷ್ಟ ಪಂಗಡದಿಂದ ಜಿ.‌ಪಾಲಯ್ಯ, ಬಿಸಿಎಂ ಎ ವರ್ಗದಿಂದ ಅಲ್ತಾಫ್‌ಹುಸೇನ್ ಬೆನಕನಕೋಡ, ಬಿಸಿಎಂ ಬಿ ವರ್ಗದಿಂದ ಜಗದೀಶ್ ಕಾಗಿನೆಲ್ಲಿ, ಮಹಿಳಾ ಮೀಸಲು
ಸ್ಥಾನದಿಂದ ಲಲಿತಾ ಹೆಗಡೆ ಮತ್ತು ಹೆಚ್.ಜಿ.‌ ಆಶಾ ಆಯ್ಕೆಯಾಗಿದ್ದಾರೆ.


ಈ ಸೌಹಾರ್ದ ಸಹಕಾರ ಮಂಡಳಿಗೆ ಆಗಸ್ಟ್ 13ರಂದು ಚುನಾವಣೆ ನಿಗಧಿಯಾಗಿತ್ತು. ನಾಮಪತ್ರ ಸಲ್ಲಿಕೆಗೆ ಶನಿವಾರ ಕೊನೆಯ‌ ದಿನವಾಗಿದ್ದು 27 ಮಂದಿ ನಾಮಪತ್ರ
ಸಲ್ಲಿಸಿದ್ದರು. 10 ಮಂದಿ ಸ್ಪರ್ಧಾಕಾಂಕ್ಷಿಗಳು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯು 17 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕ ಎನ್.ಜಿ. ರುದ್ರಪ್ಪ ಚುನಾವಣಾಧಿಕಾರಿಯಾಗಿ‌ ಕಾರ್ಯನಿರ್ವಹಿಸಿದರು.

Leave A Reply

Your email address will not be published.

error: Content is protected !!