ನೆಮ್ಮದಿಯಿಂದ ಬದುಕಬೇಕಾದರೆ ಮೋದಿಯವರ ಕೈ ಬಲಪಡಿಸಿ ; ನಿಟ್ಟೂರು ಸುಬ್ರಹ್ಮಣ್ಯ

0 347

ಹೊಸನಗರ: ನಮ್ಮ ಬಾರತ ದೇಶ ಅಭಿವೃದ್ಧಿ ಹೊಂದಬೇಕಾದರೇ ಅಕ್ಕ-ಪಕ್ಕದ ದೇಶದಿಂದ ಯಾವುದೇ ಅಡ್ಡಿ ಆತಂಕಗಳು ಬರದಂತೆ ಇರಬೇಕಾದರೇ ನಮ್ಮ ಬಾರತ ದೇಶದ ಪ್ರಜೆಗಳು ಸೈನಿಕರು ಸುರಕ್ಷಿತವಾಗಿರಬೇಕಾದರೆ ಈ ದೇಶಕ್ಕೆ ನರೇಂದ್ರ ಮೋದಿಯವರು ಪ್ರಧಾನಿಯಾದರೇ ಮಾತ್ರ ನಾವು ನೆಮ್ಮದಿಯ ಜೀವನ ಸಾಗಿಸಬಹುದು ಎಂದು ತಾಲ್ಲೂಕು ಬಿಜೆಪಿ ಮಂಡಳದ ಅಧ್ಯಕ್ಷ ನಿಟ್ಟೂರು ಸುಬ್ರಹ್ಮಣ್ಯ ಹೇಳಿದರು.

ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಟೌನ್ ಘಟಕದ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 60. ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದೇಶದ ಅಭಿವೃದ್ಧಿಯಲ್ಲಾಗಲಿ ಅಥವಾ ದೇಶದ ಸುರಕ್ಷತೆಗಾಗಿ ಯಾವುದೇ ಒತ್ತು ನೀಡದೇ ಭಾರತ ದೇಶದ ಪ್ರಜೆಗಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದರು. ಸೈನಿಕರಿಗೆ ಯಾವುದೇ ಮದ್ದುಗುಂಡುಗಳನ್ನು ನೀಡದೆ ಹೋರಾಟ ನಡೆಸಲು ಸಲಹೆ ನೀಡುತ್ತಿದ್ದರು ಆದರೆ ಕೇವಲ ಹತ್ತು ವರ್ಷಗಳಲ್ಲಿ ನಮ್ಮ ದೇಶದ ಸೈನಿಕರು ಯಾವುದೇ ಶತ್ರು ರಾಷ್ಟವನ್ನು ಎದುರಿಸುವ ಸಾಮರ್ಥ್ಯವನ್ನು ದೇಶದ ಪ್ರಧಾನಿ ನೀಡಿದ್ದಾರೆ. ನಾವು ಅಭಿವೃದ್ಧಿ ಪಥದಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನಕ್ಕೆನಕ್ಕೆ ಹೆಜ್ಜೆ ಇಟ್ಟಿದ್ದೇವೆ‌. ಇಂಥವರು ಪ್ರಧಾನಮಂತ್ರಿಯಾಗಬೇಕು‌. ಇವರ ಪ್ರಧಾನಮಂತ್ರಿಯಾಗಬೇಕಾದರೆ ಶಿವಮೊಗ್ಗ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರರವರನ್ನು ಗೆಲ್ಲಿಸುವುದಷ್ಟೇ ಅಲ್ಲ ಅತೀ ಹೆಚ್ಚು ಅಂತರದಿಮದ ಗೆಲ್ಲಿಸಿ ಲೋಕಸಭೆಗೆ ಕಳುಹಿಸಬೇಕೆಂದರು.

ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು; ಶ್ರೀಪತಿರಾವ್
ಭಾರತ ದೇಶದಲ್ಲಿ ಸುಮಾರು ಹತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಆದರೆ ಅದನ್ನು ಜನರಿಗೆ ತಿಳಿಸುವ ಕಾರ್ಯ ನಡೆಯುತ್ತಿಲ್ಲ ನಾವು ಮಾಡಿರುವ ಅಭಿವೃದ್ಧಿ ಕಾರ್ಯ ನಮ್ಮ ಕಾರ್ಯಕರ್ತರು ತಿಳಿಸದೇ ಹೋದರೆ ಬೇರೆಯವರು ಅದರ ಲಾಭ ಪಡೆದುಕೊಳ್ಳುತ್ತಾರೆ. ಪ್ರತಿಯೊಬ್ಬ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ಮೋದಿಯವರು ಜಾರಿಗೆ ತಂದಿರುವ ಜನಪರ ಕಾರ್ಯಕ್ರಮ ಹಾಗೂ ನಮ್ಮ ಶಿವಮೊಗ್ಗ ಸಂಸದರಾದ ರಾಘವೇಂದ್ರರವರು ಶಿವಮೊಗ್ಗ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ರಸ್ತೆ ನಿರ್ಮಾಣ, ಸೇತುವೆ ನಿರ್ಮಾಣ ವಿಮಾನ ಹಾರಾಟ, ರೈಲುಗಳ ಓಡಾಟದ ಅಭಿವೃದ್ಧಿಯನ್ನು ಜನರಿಗೆ ತಿಳಿಸುವ ಕಾರ್ಯ ಮಾಡಿರಿ ಎಂದು ಟೌನ್ ಘಟಕದ ಬಿಜೆಪಿ ಅಧ್ಯಕ್ಷ ಶ್ರೀಪತಿರಾವ್‌ರವರು ಹೇಳಿದರು.

ಕಡಿಮೆ ಮತ ಬಂದ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿ: ಆಲವಳ್ಳಿ ವೀರೇಶ್
2014ನೇ ಲೋಕಸಭೆ ಚುನಾವಣೆಯಿಂದ ಎರಡು ವಿಧಾನಸಭೆ ಚುನಾವಣೆ ನಡೆದಿದೆ. ಹೊಸನಗರ ಕ್ಷೇತ್ರದ ಯಾವ ಬೂತ್‌ಗಳಲ್ಲಿ ಬಿಜೆಪಿಗೆ ಕಡಿಮೆ ಮತ ಬಂದಿದೆ ಹಾಗೂ ಕಡಿಮೆ ಮತದಾನವಾಗಿದೆ ಆ ಕ್ಷೇತ್ರಗಳಿಗೆ ಹೋಗಿ ನಮ್ಮ ಬಿಜೆಪಿ ಪಕ್ಷದ ಪ್ರಣಾಳಿಕೆಗಳನ್ನು ಹೇಳಬೇಕು ಹಾಗೂ ನಾವು ಮಾಡಿರುವ ಅಭಿವೃದ್ಧಿಯನ್ನು ಅಲ್ಲಿನ ಮತದಾರರಿಗೆ ತಿಳಿಸುವ ಕಾರ್ಯಕ್ಕೆ ಬಿಜೆಪಿ ಕಾರ್ಯಕರ್ತರು ಮುಂದಾಗಬೇಕು ಇನ್ನೂ ಚುನಾವಣೆಗೆ ಕೇವಲ 25 ದಿನ ಉಳಿದಿದ್ದು ಕಾರ್ಯಕರ್ತರು ನಿದ್ದೆ ಮಾಡದೇ ಚುನಾವಣೆ ಕಾರ್ಯದಲ್ಲಿ ತೊಡಗಬೇಕೆಂದು ಹೇಳಿ, ಎಲ್ಲಿ ಮತದಾನ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ ಎಂದು ತಿಳಿದು ಆ ಬೂತ್‌ಗಳಿಗೆ ಭೇಟಿ ನೀಡಿ ಮತದಾನ ಮಾಡುವಂತೆ ತಿಳಿಸಬೇಕೆಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆಲವಳ್ಳಿ ವೀರೇಶ್‌ ಹೇಳಿದರು.

ಈ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಹಿರಿಯರಾದ ಎನ್.ಆರ್ ದೇವಾನಂದ್, ಎ.ವಿ. ಮಲ್ಲಿಕಾರ್ಜುನ್, ಹೆಚ್.ಎಸ್. ಶ್ರೀಪತಿರಾವ್, ನಿಶಾಂತ್, ಪ್ರಧಾನ ಕಾರ್ಯದರ್ಶಿ ಕಾಲಸಸಿ ಸತೀಶ್, ಸತ್ಯನಾರಾಯಣ ವಿ, ಎಸ್.ಹೆಚ್. ನಿಂಗಮೂರ್ತಿ, ಎನ್ ಶ್ರೀಧರ ಉಡುಪ, ಆರ್ ಗುರುರಾಜ್, ಮಂಡಾನಿ ಮೋಹನ್, ಚಿಕ್ಕಮಣತಿ ಶಿವಾನಂದ, ಮಂಜುನಾಥ್ ಸಂಜೀವ, ಗಣಪತಿ ಬಿಳಗೋಡು, ಸುರೇಶ್ ಸ್ವಾಮಿರಾವ್, ಎನ್ ಶ್ರೀಧರ ಉಡುಪ, ಮಿಲ್ ಈಶ್ವರಪ್ಪ ಗೌಡ, ಜಿ.ಟಿ ಈಶ್ವರಪ್ಪ ಗೌಡ, ಮುರುಳಿಧರ, ದಿವಾಕರ್ ಶೆಟ್ಟಿ, ಮಾವಿನಕೊಪ್ಪ ತಿಮ್ಮಪ್ಪ, ಕೃಷ್ಣವೇಣಿ, ಗುಲಾಬಿ ಮರಿಯಪ್ಪ, ಗಾಯಿತ್ರಿ ನಾಗರಾಜ್, ಕಾವೇರಿ ವಿಜಯ, ರಾಜೇಶ್ವರಿ, ಕಾಸಿಂ, ಕೋಣೆಮನೆ ಶಿವಕುಮಾರ್ ಇನ್ನೂ ಮುಂತಾದ ಸುಮಾರು ಮೂನ್ನೂರಕಿಂತ ಹೆಚ್ಚು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!