Hosanagara | ಆರ್‌ಎಂಎಂ ನಿವಾಸಗಳ ಮೇಲೆ E.D. ದಾಳಿಗೆ ಖಂಡನೆ | ಹೆದರಿಸುವುದರಿಂದ ಏನೂ ಪ್ರಯೋಜನವಿಲ್ಲ

0 402


ಹೊಸನಗರ : ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅವರ ಮನೆ ಹಾಗೂ ಕಛೇರಿ ಮೇಲೆ ನಡೆದ ಇ.ಡಿ ದಾಳಿಯನ್ನು ಶಿಮುಲ್ ನಿರ್ದೇಶಕ ಎಚ್.ಎನ್.ವಿದ್ಯಾಧರ್ ಗುರುಶಕ್ತಿ ಖಂಡಿಸಿದ್ದಾರೆ.


ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಮಂಜುನಾಥಗೌಡರ ತೇಜೋವಧೆ ಮಾಡುವ ಉದ್ದೇಶದಿಂದ ನಡೆದ ರಾಜಕೀಯ ಪ್ರೇರಿತ ದಾಳಿ ಇದಾಗಿದೆ. ಈ ರೀತಿ ಹೆದರಿಸುವುದರಿಂದ ವಿರೋಧಿಗಳಿಗೆ ಏವೂ ಪ್ರಯೋಜನವಿಲ್ಲ ಎಂದು ಆರೋಪಿಸಿದರು.


ಐದಾರು ವರ್ಷಗಳ ಹಿಂದೆ ನಡೆದ ಹಗರಣದ ತನಿಖೆ ಈಗಾಗಲೇ ನಡೆದು, ಮಂಜುನಾಥಗೌಡರು ಆರೋಪಗಳಿಂದ ಮುಕ್ತರಾಗಿದ್ದಾರೆ. ಈ ಹಿಂದೆ ಸಹಾ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಈಗ ಅವರು ಮತ್ತೆ ಅಧ್ಯಕ್ಷರಾಗುತ್ತಿದ್ದಂತೆ ಅವರ ಏಳಿಗೆ ಸಹಿಸದ ರಾಜಕೀಯ ವಿರೋಧಿಗಳು ತನಿಖೆ ಸಂಸ್ಥೇಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಪಾದನೆ ಮಾಡಿದರು.


ಕಳೆದ 3 ವರ್ಷ ಮಂಜುನಾಥಗೌಡರು ಡಿಸಿಸಿ ಬ್ಯಾಂಕ್‌ನ ಯಾವುದೇ ಹುದ್ದೆಯಲ್ಲಿರಲಿಲ್ಲ. ಅಗತ್ಯವಿದ್ದರೆ ಆಗ ತನಿಖೆ ನಡೆಸಬಹುದಿತ್ತು. ಈಗ ಅನಗತ್ಯ ಗೊಂದಲ ಉಂಟು ಮಾಡುವ ಯತ್ನ ನಡೆಯುತ್ತಿದೆ ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ದಾಳಿ ನಡೆದಿದೆ ಎಂದು ಅವರು ದೂರಿದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್ ಮಾತನಾಡಿ, ಬಿಜೆಪಿ ಪಕ್ಷ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಹೊಸದೇನಲ್ಲ. ಸಹಕಾರಿ ಕ್ಷೇತ್ರವನ್ನು ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದರು.


ತುಂಗಾ ಅಡಿಕೆ ಸೌಹಾರ್ಧ ಸಂಘದ ಅಧ್ಯಕ್ಷ ಡಿ.ಆರ್.ವಿನಯಕುಮಾರ್, ಡಿಸಿಸಿ ಬ್ಯಾಂಕ್‌ ಅಭಿವೃದ್ಧಿ ಹೊಂದುವಲ್ಲಿ ಮಂಜುನಾಥಗೌಡರ ಪಾತ್ರ ಹಿರಿದಾದದ್ದು. ಅವರ ಕೊಡುಗೆಯನ್ನು ಕಡೆಗಣಿಸಿ, ಅವರ ತೇಜೋವಧೆ ಮಾಡುವುದು, ಆತ್ಮಸ್ಥೈರ್ಯ ಕುಂಠಿತಗೊಳಿಸುವ ಕೆಲಸಕ್ಕೆ ಕೈಹಾಕಿರುವುದು ಅವರ ಅಭಿಮಾನಿಗಳು ಹಾಗೂ ಸಹಕಾರಿ ಕ್ಷೇತ್ರದ ಸದಸ್ಯರು ಸಹಿಸುವುದಿಲ್ಲ ಮಂಜುನಾಥ ಗೌಡರು ಎಂಥಹ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಾಗಿದ್ದು ಇವರ ತೇಜೋವಧೆ ಮುಂದುವರೆದರೇ ಮುಂದಿನ ದಿನದಲ್ಲಿ ಹೊಸನಗರ ತಾಲ್ಲೂಕಿನಲ್ಲಿ ದೊಡ್ಡ ಹೋರಾಟ ಅನಿವಾರ್ಯವಾಗುತ್ತದೆ ಎಂದರು.


ವಿವಿಧ ಸಹಕಾರಿ ಕ್ಷೇತ್ರದ ಪ್ರಮುಖರಾದ ವಿನಾಯಕ ಚಕ್ಕಾರು. ಗುಬ್ಬಿಗ ರವಿ, ಲೇಖನಮೂರ್ತಿ, ಎರಗಿ ಉಮೇಶ್, ಟೀಕಪ್ಪ, ಜಯನಗರಗುರು ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!