ಶಿವಮೊಗ್ಗ ; ಡಿಸಿ ಕಚೇರಿ ಮುಂಭಾಗದ ಜಾಗವನ್ನ ಪಾಲಿಕೆಗೆ ನೀಡಬೇಕು, ಅಕ್ರಮ ಖಾತೆ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬೇಲಿ ಹಾಕಿ ಬೇಲಿ ತೆಗೆದು ಎಸ್ಪಿ, ಡಿಸಿ ಅವರು ಮೈದಾನ ವಿವಾದ ಸುಖಾಂತ್ಯ ಅಂತ ಹೇಳಿದ್ದಾರೆ. ಅಕ್ರಮವಾಗಿ ಆಗಿರುವ ಖಾತೆ ಬಗ್ಗೆ ಆಯುಕ್ತರಿಗೆ ಡಿಸಿಯವರಿಗೆ ಮನವರಿಕೆ ಮಾಡಿದ್ದೇವೆ. ಗೆಜೆಟ್ ನೋಟಿಪಿಕೇಷನ್ ನಲ್ಲಿ ಸಹ ಅಪ್ಪ-ಅಮ್ಮ ಇಲ್ಲ, ಡಿಸಿ ಅವರು ಕೋರ್ಟ್‌ನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದಿದ್ದಾರೆ. ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳಿ ಎಂದರೆ ಡಿಸಿಯಾಗಿ ನೀವು ಯಾಕೇ ಇರಬೇಕು? ಎಂದು ಈಶ್ವರಪ್ಪ ಪ್ರಶ್ನೆ ಮಾಡಿದರು. ಡಿಸಿಯವರು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ, ಡಿಸಿ ಕೋರ್ಟ್‌ಗೆ ಹೋಗಿ ಎಂದಿರುವುದೇ ಅಕ್ಷ್ಯಮ್ಯ ಅಪರಾಧ ಎಂದರು.

ಇನ್ನು ಲೋಕಾಯುಕ್ತರ ಬಳಿ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳನ್ನ ಭೇಟಿ ಮಾಡಿ ದೂರು ನೀಡುತ್ತೇವೆ. ರೈಲ್ವೆ ಇಲಾಖೆಯ ಕಂಬಿಗಳನ್ನು ತಂದು ಅಕ್ರಮವಾಗಿ ಬೇಲಿ ಹಾಕಿದ್ದವರ ಬಗ್ಗೆ ಕ್ರಮ ಕೈಗೊಂಡಿಲ್ಲ, ಎಸ್ಪಿಯವರು ನಮಗೆ ಯಾರು ದೂರು ಕೊಟ್ಟಿಲ್ಲ ಅನ್ನುತ್ತಾರೆ, ಬಾಂಗ್ಲಾದೇಶದ ಹಿಂದೂಗಳ ಮೇಲೆನ ದೌರ್ಜನ್ಯ ಖಂಡಿಸಿ ಭಾಷಣ ಮಾಡಿದಕ್ಕೆ ನನ್ನ ಮೇಲೆ ಸುಮೋಟೋ ಯಾಕೇ ಹಾಕಿದ್ರಿ? ಆಟದ ಮೈದಾನದಲ್ಲಿ ಬೇಲಿ ಹಾಕಿದ್ದೇ ಕಾನೂನು ಬಾಹಿರ ಕೂಡಲೇ ಕ್ರಮ ಕೈಗೊಳ್ಳಬೇಕು. ದಾಖಲೆ ಕೊಟ್ಟರು ಡಿಸಿ ದಾಖಲೆ ನೋಡಿಲ್ಲ ಕಣ್ಣು ಕಾಣಿಸಲ್ಲ ಅನಿಸುತ್ತೆ, ಡಿಸಿಯವರ ಹಿಂದೆ ಪ್ರಭಾವಿಗಳಿದ್ದಾರೆ ಪಕ್ಷ ಇದೆ ಅವರನ್ನ ತೃಪ್ತಿಪಡಿಸಲು ಡಿಸಿ ಹೋಗಿದ್ದಾರೆ ಎಂದರು.