ರಿಪ್ಪನ್‌ಪೇಟೆ ; 2025-26ನೇ ಸಾಲಿನ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿಗೆ ರಿಪ್ಪನ್‌ಪೇಟೆಯ ಲೇಖನಾ ಜಿ.ನಾಯ್ಕ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ಮತ್ತು ಸುವರ್ಣ ಚಾರಿಟೇಬಲ್ ಟ್ರಸ್ಟ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಕರ್ನಾಟಕ ಗ್ಯಾಸ್ ವೆಂರ‍್ಸ್ ವೆಲ್‌ಫೇರ್ ಆಸೋಸಿಯೇಷನ್ ಇವರ ಸಹಯೋಗದಲ್ಲಿ ಏಪ್ರಿಲ್ 20 ಭಾನುವಾರ ಬೆಂಗಳೂರು ಯಲಹಂಕ ನ್ಯೂಟೌನ್ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ‘ಸುವರ್ಣ ಕನ್ನಡಿಗ’ ಸಮಾಜ ಸೇವೆ ಹೆಸರಿನಲ್ಲಿ ಕೊಡಮಾಡುವ ರಾಜ್ಯ ಪ್ರಶಸ್ತಿಗೆ ರಿಪ್ಪನ್‌ಪೇಟೆಯ ಲೇಖನಾ ಜಿ.ನಾಯ್ಕ್ ಆಯ್ಕೆಯಾಗಿದ್ದಾರೆ.
ಸಿದ್ದಿವಿನಾಯಕ ಸ್ವಾಮಿ ಅನ್ನಪೂರ್ಣೇಶ್ವರಿ ಆಮ್ಮನವರ ಜಾತ್ರಾಮಹೋತ್ಸವ
ರಿಪ್ಪನ್‌ಪೇಟೆ ; ಇಲ್ಲಿನ ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ಹಾಗೂ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಏಪ್ರಿಲ್ 21 ರಿಂದ 24 ವರೆಗೆ ಶ್ರೀಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ಹಾಗೂ ಅನ್ನಪೂರ್ಣೇಶ್ವರಿ ಆಮ್ಮನವರ ಶ್ರೀಮನ್ಮಹಾರಥೋತ್ಸವ ಮತ್ತು ಜಾತ್ರೋತ್ಸವ ವಿವಿಧ ಧಾರ್ಮಿಕ ಪೂಜಾಕೈಂಕರ್ಯಗಳು ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿಯ ಧರ್ಮದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 21 ರಂದು ಸೋಮವಾರ ಬೆಳಗ್ಗೆ ಶ್ರೀಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ಹಾಗೂ ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಫಲನ್ಯಾಸ ಪೂರ್ವಕ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ಗ್ರಹಯಾಗ ನಾಂದಿ, ಕೌತುಕ ಬಂಧನ, ಅಂಕುರಾರ್ಪಣೆ, ಧ್ವಜಾರೋಹಣ, ಬಲಿ, ಸಂಜೆ ಭೇರಿತಾಡನ, ಅಧಿವಾಸ ಹೋಮ, ಬಲಿ ಪೂಜಾದಿಗಳು ರಂಗಪೂಜೆ.
ಏಪ್ರಿಲ್ 22 ರಂದು ಮಂಗಳವಾರ ಬೆಳಗ್ಗೆ ರಥಾದಿವಾಸ ಹೋಮ, ರಥಪೂಜಾ, ಬಲಿ, ಮಹಾಪೂಜೆ, ಪೂರ್ವಕ ಉತ್ಸವ ಬಲಿ,12.20 ಕ್ಕೆ ಶ್ರೀಮನ್ಮಹಾರಥೋತ್ಸವಕ್ಕೆ ಚಾಲನೆ. ರಾತ್ರಿ 8 ಗಂಟೆಗೆ ರಥಾವರೋಹಣ, ಮಹಾಮಂಗಳಾರತಿ ಭೂತಬಲಿ, ಶಯನೋತ್ಸವ.
ಏಪ್ರಿಲ್ 23 ರಂದು ಬುಧವಾರ ಬೆಳಗ್ಗೆ ಪ್ರಭೋದೋತ್ಸವ. ತೀರ್ಥಯಾತ್ರ ಅವಭೃತ, ಕೌತುಕ ವಿಸರ್ಜನ, ಧ್ವಜಾರೋಹಣ, ಮಹಾಪೂಜೆ, ಮಂತ್ರಾಕ್ಷತೆ, ತೀರ್ಥಪ್ರಸಾದ ವಿತರಣೆ ನಡೆಯಲಿದೆ.
ಏಪ್ರಿಲ್ 24 ರಂದು ಗುರುವಾರ ಬೆಳಗ್ಗೆ ಗಣಪತಿ ಮತ್ತು ಅಮ್ಮನವರಿಗೆ ಕುಂಭಾಭಿಷೇಕ ಮಹಾಪೂಜೆ ತೀರ್ಥಪ್ರಸಾದ ವಿತರಣೆ ನಂತರ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ ಎಂದು ದೇವಸ್ಥಾನ ಸೇವಾಸಮಿತಿಯ ಧರ್ಮದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.