ಹುಬ್ಬಳ್ಳಿ ಪಿಎಸ್‌ಐ ಅನ್ನಪೂರ್ಣರ ದಿಟ್ಟ ತನಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಮೆಚ್ಚುಗೆ

Written by malnadtimes.com

Published on:

ರಿಪ್ಪನ್‌ಪೇಟೆ ; ಇತ್ತಿಚೆಗೆ ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಬಾಲಕಿಯ ಸಾವಿಗೆ ಕಾರಣವಾದ ಆರೋಪಿಗೆ ಗುಂಡು ಹಾರಿಸಿದ ಹುಬ್ಬಳ್ಳಿಯ ಪಿಎಸ್‌ಐ ಅನ್ನಪೂರ್ಣರವರ ಈ ದಿಟ್ಟತನಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶಂಸಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಟ್ಟ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ ಎಸಗಿ ಕೊಲೆ ಮಾಡುವ ಮೂಲಕ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದ ದುರುಳನನ್ನು ಪೊಲೀಸರು ಗುಂಡಿಕ್ಕಿದ ಮಹಿಳಾ ಪಿಎಸ್‌ಐ ಅನ್ನಪೂರ್ಣರವರ ಗಟ್ಟಿತನಕ್ಕೆ ನನ್ನದೊಂದು ಸೆಲ್ಯೂಟ್ ಎಂದು ಹೇಳಿ, ಇಂತಹ ನೀಚ ಕೃತ್ಯ ಎಸಗುವವರಿಗೆ ಎಚ್ಚರಿಕೆಯ ಗಂಟೆಯನ್ನು ಸಹ ನೀಡಿದ್ದಾರೆಂದು ಹೇಳಿದ ಅವರು ನಾನು ಈ ಹಿಂದಿನಿಂದಲೂ ಹೇಳಿಕೊಂಡು ಬಂದವನ್ನು ಅದನ್ನು ಸಮರ್ಥವಾಗಿ ನಿರ್ವಹಿಸಿದ ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಹ ಇಂತಹ ನೀಚ ಕೃತ್ಯದಲ್ಲಿ ಭಾಗಿಯಾದವರನ್ನು ಸದೆಬಡಿಯುವಲ್ಲಿ ಸಹ ಯಶಸ್ವಿಯಾಗಿದೆ ಎಂದು ಹೇಳಿದರು.

28 ಕೋಟಿ ರೂ. ಅಭಿವೃದ್ದಿ ಕಾಮಗಾರಿ ಪ್ರಗತಿಯಲ್ಲಿದೆ ;

ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಡೆಹಳ್ಳಿಯಿಂದ-ರಿಪ್ಪನ್‌ಪೇಟೆ ಆರ್.ಎಂ.ಸಿ.ಯಾರ್ಡ್ ವರಗೆ ರಸ್ತೆ ಅಗಲೀಕರಣದೊಂದಿಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ 20 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಟೆಂಡರ್ ಮುಗಿದು ಕಾಮಗಾರಿ ಭರದಿಂದ ಸಾಗಿದ್ದು ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಮುಕ್ತಗೊಳ್ಳಲಿದೆ.

ರಿಪ್ಪನ್‌ಪೇಟೆಯ ಪ್ರಥಮ ದರ್ಜೆ ಕಾಲೇಜ್ ಬಳಿಯಿಂದ ತೀರ್ಥಹಳ್ಳಿ ರಸ್ತೆಯ ಎರಡು ಕಿ.ಮೀ. ದ್ವಿಪಥ ರಸ್ತೆ ಕಾಮಗಾರಿಗೆ 5.35.ಕೋಟಿ ರೂ ವೆಚ್ಚದ ಬಾಕ್ಸ್ ಚರಂಡಿ ಮತ್ತು ಡಿವೈಂಡರ್ (ರಸ್ತೆ ವಿಭಜಕ) ನಿರ್ಮಾಣ ಮತ್ತು ರಸ್ತೆ ಅಗಲೀಕರಣದೊಂದಿಗೆ ಡಾಂಬರೀಕರಣ ಕಾಮಗಾರಿಯು ಪೂರ್ಣಗೊಂಡಿದೆ. ಇನ್ನೂ ವಿನಾಯಕ ವೃತ್ತದಲ್ಲಿ ಮತ್ತು ಹೊಸನಗರ ರಾಜ್ಯ ಹೆದ್ದಾರಿಯ ಒಂದು ಕಿ.ಮೀ.ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣಕ್ಕಾಗಿ 2.50 ಕೋಟಿ ರೂ. ಸರ್ಕಾರದ ಅಭಿವೃದ್ದಿ ಅನುದಾನ ಬಿಡುಗಡೆಯಾಗಿದ್ದು ಅತಿ ಶೀಘ್ರದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದೆಂದು ವಿವರಿಸಿ, ಈಗಾಗಲೇ ರಿಪ್ಪನ್‌ಪೇಟೆ ವ್ಯಾಪ್ತಿಗೆ 28 ಕೋಟಿ ರೂ. ಸರ್ಕಾರದ ಅಭಿವೃದ್ದಿ ಅನುದಾನವನ್ನು ತರುವ ಮೂಲಕ ಕಾಮಗಾರಿಗಳು ಪೂರ್ಣ ಹಂತ ತಲುಪಿವೆ ಶಾಸಕ ಗೋಪಾಲಕೃಷ್ಣ ಬೇಳೂರು ಈ ಹಿಂದೆ ಕುಕ್ಕಳಲೇ, ನೇರಲಮನೆ, ಗವಟೂರು, ವಡಗೆರೆ ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿ ಸಂಪೂರ್ಣ ಕಳಪೆಯಾಗಿ ಚಾಪೆ ಸುತ್ತುವಂತಾಗಿತು. ಅದನ್ನು ನಾವು ವಿರೋಧಿಸಿದಾಗ ಆಗಿನ ಶಾಸಕರು ಏನು ಹೇಳಿದರೂ ಈಗ ಸಾಗರ ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ತಲಾ ಎರಡು ಕಿ.ಮೀ. ರಸ್ತೆ ಕಾಮಗಾರಿ ಕಳೆಯಾಗಿದೆ ಎಂದು ಆರೋಪಿಸಿರುವ ಬಿಜೆಪಿ ಪಕ್ಷದವರಿಗೆ ಸವಾಲು ಹಾಕುವ ಮೂಲಕ ನಾನೇ ಗುದ್ದಲಿ, ಪಿಕಾಶಿ ಹಿಡಿದು ಅಗೆದು ತೋರಿಸುತ್ತೇನೆ. ಕಳಪೆಯಾದರೆ ಗುತ್ತಿಗೆದಾರನಿಂದಲೇ ಪುನಃ ಕಾಮಗಾರಿ ಮಾಡಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ಚರಪ್ಪಗೌಡ, ಗ್ರಾಮ ಪಂಚಾಯಿತ್ ಸದಸ್ಯರಾದ ಡಿ.ಈ.ಮಧುಸೂದನ್, ಎನ್.ಚಂದ್ರೇಶ್, ಆಸಿಫ್‌ಭಾಷಾ, ಆರ್.ವಿ.ನಿರೂಪ್ ಕುಮಾರ್, ಪ್ರಕಾಶ ಪಾಲೇಕರ್, ಉಮಾಕರ್ ರವೀಂದ್ರ ಕೆರೆಹಳ್ಳಿ, ಪರಮೇಶ, ರಮೇಶ ಫ್ಯಾನ್ಸಿ, ಪಿಯೂಸ್ ರೋಡ್ರಿಗಸ್, ಸಣ್ಣಕ್ಕಿ ಮಂಜು, ಶಿವಪ್ಪ ವಡಾಹೊಸಳ್ಳಿ, ಹೆಚ್.ಎನ್.ಉಮೇಶ್, ಮುಸ್ತಾಫ್, ವಿಜಯಕುಮಾರ್ ಮಳವಳ್ಳಿ, ಇನ್ನಿತರರು ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.

Leave a Comment