ಶಿವಮೊಗ್ಗ ; ಭದ್ರಾವತಿ ತಾಲೂಕಿನ ಮಜ್ಜಿಗೆನಹಳ್ಳಿ ಗ್ರಾಮದ ಸಮೀಪ ನಿರ್ಮಾಣ ಮಾಡಲು ನಿರ್ಧರಿಸಿರುವ ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ (IAP) ಶಿವಮೊಗ್ಗ ಜಿಲ್ಲಾ ಶಾಖೆಯ ಭವನ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು.
ಮಕ್ಕಳ ಆರೋಗ್ಯದ ಪೋಷಣೆಗೆ ಹಾಗೂ ಆರೈಕೆಗೆ ಶ್ರಮಿಸುತ್ತಿರುವ ಜಿಲ್ಲೆಯ ಮಕ್ಕಳ ತಜ್ಞ ವೈದ್ಯರ ಸಮೂಹ ಈ ನೂತನ ಭವನದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ. ಮುಂದೆ ಈ ಭವನ ನಿರ್ಮಾಣವಾದ ಮೇಲೆ ಇಲ್ಲಿ ಶಿಕ್ಷಣ ಮತ್ತು ತರಬೇತಿ ಕಾರ್ಯಗಳು, ಲಸಿಕೆಗಳ ಬಗ್ಗೆ ಜಾಗೃತಿ ಶಿಬಿರಗಳು, ಮಕ್ಕಳ ಆರೋಗ್ಯ ಮತ್ತು ಭದ್ರತೆಯ ಬಗ್ಗೆ ತರಬೇತಿ, ಶಾಲಾ ಮಕ್ಕಳಿಗಾಗಿ ಯುವ ಆರೋಗ್ಯ ನಾಯಕತ್ವ ಕಾರ್ಯಗಾರ, ಶಾಲಾ ಆರೋಗ್ಯ ಶಿಕ್ಷಣ, ಪ್ರಥಮ ಚಿಕಿತ್ಸೆ ತರಬೇತಿ ಸೇರಿದಂತೆ ಆರೋಗ್ಯ ಸಂಬಂಧಿತ ವಿವಿಧ ಕಾರ್ಯ ಚಟುವಟಿಕೆಗಳು ನಡೆಯುತ್ತವೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ, ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ ಶಿವಮೊಗ್ಗ ಜಿಲ್ಲಾ ಶಾಖೆ ಅಧ್ಯಕ್ಷರಾದ ಡಾ. ಯತೀಶ ಬಿ.ಎಲ್, ಕಾರ್ಯದರ್ಶಿಗಳಾದ ಡಾ. ರಾಜಾರಾಮ್ ಯು.ಹೆಚ್, ಖಜಾಂಚಿಗಳಾದ ಡಾ. ವಿನೋದ್ ಕುಮಾರ್ ಎಂ.ಕೆ, ಪ್ರಮುಖರಾದ ಡಾ. ಕೊಟ್ರೇಶ್, ಡಾ. ಗಣೇಶ್ ಬಿದರಿಕೊಪ್ಪ, ಡಾ. ಜಗದೀಶ್ ವೈದ್ಯ, ಡಾ.ಮಲ್ಲಿಕಾರ್ಜುನ್ ಸಾಲೆಯರ್, ಡಾ. ದೀಪಕ್ ಕುಮಾರ್, ಡಾ. ನಿತಿನ್, ಡಾ. ಶಂಭುಲಿಂಗ ಬಂಕವಳ್ಳಿ, ಡಾ.ಅಜಯ್, ಡಾ.ವಿನಾಯಕ ಹೆಗಡೆ, ಡಾ.ಅಂಜನಾ ರಾವ್, ಡಾ. ಮಲ್ಲಿಕಾರ್ಜುನ್, ಸೇರಿದಂತೆ ಹಿರಿಯ ಸದಸ್ಯರು, ವೈದ್ಯರು ಉಪಸ್ಥಿತರಿದ್ದರು.