SSLC ; ಕಟ್ಟೆಹಕ್ಲು ಶಾಲೆಗೆ ಶೇ. 97.77 ಫಲಿತಾಂಶ

Written by malnadtimes.com

Updated on:

ತೀರ್ಥಹಳ್ಳಿ ; ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ತಾಲೂಕಿನ ಕಟ್ಟೆಹಕ್ಲು ಪ್ರೌಢ ಶಾಲೆಯು ಶೇ. 97.77 ರಷ್ಟು ಫಲಿತಾಂಶವನ್ನು ಪಡೆದಿದೆ‌.

WhatsApp Group Join Now
Telegram Group Join Now
Instagram Group Join Now

ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 45 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ‌. ಆಂಗ್ಲ ಮಾಧ್ಯಮದಲ್ಲಿ ಶೇ‌.100 ಫಲಿತಾಂಶ ಹಾಗೂ ಕನ್ನಡ ಮಾಧ್ಯಮದಲ್ಲಿ ಶೇ.96 ಫಲಿತಾಂಶ ಪಡೆದಿದೆ.

ಶಾಲೆಯ ಟಾಪರ್ ಆಗಿ ಮಾನಸ 615/625, ಶ್ರವಣ್ 606/625 ಮತ್ತು ತ್ರಿಶಾ ಎಚ್ 598/625 ಅಂಕಗಳನ್ನು ಪಡೆದು ಮೊದಲ ಮೂರು ಸ್ಥಾನದಲ್ಲಿದ್ದಾರೆ. ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಹೇಮಂತ 581/625 ಅಂಕಗಳನ್ನು ಪಡೆದಿದ್ದಾರೆ.

ಗುಣಾತ್ಮಕ ಫಲಿತಾಂಶದಲ್ಲಿ ಶೇ. 88.10 ಪಡೆದು A ಗ್ರೇಡ್ ಅನ್ನು ಗಳಿಸಿ ತಾಲೂಕಿನಲ್ಲಿ ಶಾಲೆಯು 7ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ, 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ನಾಲ್ಕು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕನ್ನಡದಲ್ಲಿ ತ್ರಿಶಾ ಎಚ್ 125 ಅಂಕಗಳು, ಇಂಗ್ಲಿಷ್ ವಿಷಯದಲ್ಲಿ ಮಾನಸ 100, ಅಂಕಗಳು, ಹಿಂದಿ ವಿಷಯದಲ್ಲಿ ಶ್ರವಣ್, ಅಭಿಶ್ರೀ ಮತ್ತು ಉಜ್ವಲ್ 100 ಅಂಕಗಳು, ಗಣಿತದಲ್ಲಿ ಮಾನಸ ಮತ್ತು ಉಜ್ವಲ್ 100 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ತೀರ್ಥಹಳ್ಳಿಯ ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯು ಪ್ರತಿ ವರ್ಷವೂ ಉತ್ತಮ ಗುಣಾತ್ಮಕ ಫಲಿತಾಂಶವನ್ನು ನೀಡುತ್ತಾ ಬಂದಿದೆ.

ಈ ಶೈಕ್ಷಣಿಕ ಸಾಧನೆ‌ ಮಾಡಿದ ವಿದ್ಯಾರ್ಥಿಗಳಿಗೆ, ಸಹಕರಿಸಿದ ಪೋಷಕರಿಗೆ, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ, ಅಧ್ಯಕ್ಷರು ಮತ್ತು ಸದಸ್ಯರು ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರು ಅಭಿನಂದಿಸಿ ಶುಭ ಹಾರೈಸಿದ್ದಾರೆ‌‌.

Leave a Comment