ಹೊಸನಗರದಲ್ಲಿ ಎಹೆಚ್ ಚಿಟ್ಸ್ ಶುಭಾರಂಭ

Written by Mahesha Hindlemane

Published on:

ಹೊಸನಗರ ; ಪಟ್ಟಣದ ಬಸ್ ನಿಲ್ದಾಣದ ಸಮೀಪ ಇರುವ ಕಾರ್ಗಲ್ ಕಾಂಪ್ಲೆಕ್ಸ್ ಮೇಲ್ಮಹಡಿಯಲ್ಲಿ ಎಹೆಚ್ ಚಿಟ್ಸ್ ನ ಗ್ರಾಹಕರ ಸೇವಾ ಕೇಂದ್ರಕ್ಕೆ ಮಾಜಿ ಶಾಸಕ ಬಿ.ಸ್ವಾಮಿರಾವ್ ಚಾಲನೆ ನೀಡಿದರು.

WhatsApp Group Join Now
Telegram Group Join Now
Instagram Group Join Now

ಅಗತ್ಯ ಸಮಯದಲ್ಲಿ ನಾವು ಹೂಡಿದ ಹಣವೇ ಆಪತ್ಕಾಲದಲ್ಲಿ ವರವಾಗಿ ನಮ್ಮ ಸೇರುತ್ತದೆ. ಇದಕ್ಕೆ ಎಹೆಚ್ ಚಿಟ್ಸ್ ಸೇವಾಕೇಂದ್ರ ಉತ್ತಮ ಉದಾಹರಣೆ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ವೇಳೆ ಪ್ರಮುಖರಾದ ಎನ್.ಆರ್. ದೇವಾನಂದ್, ಉದ್ಯಮಿ ಪೂರ್ಣೇಶ್ ಮಲೇಬೈಲ್, ಆಡಿಟರ್ ಮಧುಸೂದನ್ ನಾವಡ ಸೇರಿದಂತೆ ಹಲವರು ಹಾಜರಿದ್ದು ಮಾತನಾಡಿ ಶುಭ ಕೋರಿದರು.

ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ತೀರ್ಥಹಳ್ಳಿ ತಾಲ್ಲೂಕು ಬಿಜೆಪಿ ಕಾರ್ಯದರ್ಶಿ ನವೀನ್ ಹೆದ್ದೂರ್, ಪೂರ್ಣೇಶ್ ಕೋಣಂದೂರು, ಅಂಜೂರ ಕುಡುಮಲ್ಲಿಗೆ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರೀಶ್, ದಿನೇಶ್ ಕುಂಟಿಗೆ ಉಪಸ್ಥಿತರಿದ್ದರು.

1 thought on “ಹೊಸನಗರದಲ್ಲಿ ಎಹೆಚ್ ಚಿಟ್ಸ್ ಶುಭಾರಂಭ”

Leave a Comment