ರಿಪ್ಪನ್‌ಪೇಟೆ ; ಬೇಸಿಗೆ ರಜಾ ದಿನಗಳಲ್ಲಿ ಮಕ್ಕಳು ಅಜ್ಜ-ಅಜ್ಜಿಯರ ಮನೆಗಳಿಗೆ ಹೋಗಿ ಮಜಾ ಮಾಡುವ ಬದಲು ಬೇಸಿಗೆ ಶಿಬಿರಗಳ ಮೂಲಕ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಗ್ರಂಥಾಲಯದಲ್ಲಿನ ದಿನಪತ್ರಿಕೆ ಮತ್ತು ಹಲವು ದಾರ್ಶನಿಕರ, ಕವಿಗಳ ಸಣ್ಣ-ಪುಟ್ಟ ನೀತಿ ಕಥೆಗಳ ಅಧ್ಯಯನ ಮಾಡಿಸಿ ಜ್ಞಾನದಾಸೋಹವನ್ನು ಕೊಡಿಸುವ ಕೆಲಸ ಮಾಡುವ ಮೂಲಕ ಪ್ರತಿಭಾವಂತರನ್ನಾಗಿ ಮಾಡಲು ಬೇಸಿಗೆ ಶಿಬಿರಗಳು ಪೂರಕವಾಗಲಿದೆ ಎಂದು ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಹೇಳಿದರು.
ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಗ್ರಂಥಾಲಯದವರು ಆಯೋಜಿಸಲಾದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಬೇಸಿಗೆ ಶಿಬಿರದ ಮೂಲಕ ಮಕ್ಕಳಿಗೆ ಸಾಂಸ್ಕೃತಿಕ ಹಾಗೂ ಸಂಸ್ಕಾರವನ್ನು ನೀಡಿ ಸುಸಂಸ್ಕೃತರನ್ನಾಗಿ ಮಾಡಲು ಉತ್ತಮ ವೇದಿಕೆಯಾಗಿದೆ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಯೊಂದಿಗೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಆದ್ಯತೆ ಕಲ್ಪಿಸುವ ವೇದಿಕೆಯಾಗಿದೆ ಎಂದರು.
ಗ್ರಾಮ ಪಂಚಾಯಿತ್ ಸದಸ್ಯ ಗಣಪತಿ ಗವಟೂರು, ಜಿ.ಡಿ.ಮಲ್ಲಿಕಾರ್ಜುನ, ಪಿಡಿಒ ನಾಗರಾಜ್, ಕಾರ್ಯದರ್ಶಿ ಮಧುಶ್ರೀ, ಡಾಟಾ ಆಪರೇಟರ್ ಲಕ್ಷ್ಮಿ ನಾಗರಾಜ್, ಪಂಚಾಯತ್ ಸಿಬ್ಬಂದಿ ವರ್ಗ ಹಾಜರಿದ್ದರು.