ರಿಪ್ಪನ್‌ಪೇಟೆ : ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇವಾ ಸಮಿತಿ ವತಿಯಿಂದ ಆಚರಿಸಲಾಗುತ್ತಿರುವ 59ನೇ ವರ್ಷದ ಗಣೇಶೋತ್ಸವದ ಅಂಗವಾಗಿ, ಗಣಪತಿ ಮೂರ್ತಿಯನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.
ಶಿವಮೊಗ್ಗ ರಸ್ತೆಯಲ್ಲಿರುವ ವಿದ್ಯಾನಗರದಿಂದ ಆರಂಭವಾದ ಪ್ರತಿಷ್ಠಾಪನಾ ಮೂರ್ತಿಯ ಭವ್ಯ ಮೆರವಣಿಗೆಯು ಡೊಳ್ಳು ವಾದ್ಯಗಳ ನಾದದೊಂದಿಗೆ ವಿನಾಯಕ ವೃತ್ತದ ಮಾರ್ಗವಾಗಿ ಸಾಗಿತು. ಗಣೇಶನ ಮೆರವಣಿಗೆಯು ವಿನಾಯಕ ವೃತ್ತವನ್ನು ತಲುಪುತ್ತಿದ್ದಂತೆಯೇ, ಸಮಿತಿಯ ಮಾಜಿ ಅಧ್ಯಕ್ಷ ಭೀಮರಾಜ್ ಅವರು ಹಿಂದೂ ಭಗವಾಧ್ವಜವನ್ನು ಹಾರಿಸಿ, ಗೌರವ ವಂದನೆ ಸ್ವೀಕರಿಸಿದರು.
ಈ ಸಂಭ್ರಮದ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುಧೀಂದ್ರ ಪೂಜಾರಿ ಹಾಗೂ ಕಾರ್ಯದರ್ಶಿ ಎನ್.ಎಂ. ನವೀನ್ ಉಪಸ್ಥಿತರಿದ್ದರು.

ಅಲ್ಲದೆ, ಸಮಿತಿಯ ಪ್ರಮುಖರಾದ ಎಂ.ಬಿ. ಮಂಜುನಾಥ, ಎಂ. ಸುರೇಶ್ ಸಿಂಗ್, ಪಿ. ಸುಧೀರ್, ಮುರುಳಿಧರ ಕೆರೆಹಳ್ಳಿ, ಎ. ನವೀನ್, ಕೆರೆಹಳ್ಳಿ ರವೀಂದ್ರ, ರಾಮಚಂದ್ರ ಬಳೆಗಾರ್, ಬೇಕರಿ ನಾರಾಯಣ, ಆರ್.ಇ. ಭಾಸ್ಕರ್, ವಾಸುಶೆಟ್ಟಿ ಗವಟೂರು, ಕೆ. ಗಣೇಶಪ್ರಸಾದ್, ಸುಂದರೇಶ, ನಿರೂಪ್ ಕುಮಾರ್, ಗುಂಡಪ್ಪ, ಆರ್. ರಾಘವೇಂದ್ರ, ಚಂದ್ರ ಮಲ್ಲಾಪುರ, ನಾಗರಾಜ ಕೆದಲುಗುಡ್ಡೆ, ಚಂದ್ರಕುಮಾರ್, ಸೂರ್ಯಗೌಡ, ಮಂಜುನಾಥ, ಚಿಪ್ಪಳಿ ರಾಘವೇಂದ್ರ, ರವಿಚಂದ್ರ, ಎಸ್. ಸತೀಶ, ಸುಹಾಸ್, ಲಕ್ಷ್ಮಣ ಆಟೋ, ರಂಜನ್, ದೇವರಾಜ್ ಪವಾರ್, ಆರ್.ಹೆಚ್. ಶ್ರೀನಿವಾಸ್ ಆಚಾರ್, ನಿರಂಜನ್, ಡಿ.ಇ. ರವಿಭೂಷಣ, ಲಿಂಗರಾಜ್, ಶ್ರೀನಿವಾಸ್ ಆಚಾರ್, ಹೆಚ್.ಎನ್. ಚೋಳರಾಜ್, ತೀರ್ಥೇಶ್ ಅಡಿಕಟ್ಟು, ಉಮೇಶ್ ಹೆಚ್.ಎನ್. ಸೇರಿದಂತೆ ಸಂಘಟನೆಯ ಹಲವು ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.

