ತೀರ್ಥಹಳ್ಳಿ ; ಕಳೆದ 06 ದಿನದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರು ಗ್ರಾಮದಲ್ಲಿ ಇಂದು ನಡೆದಿದೆ.
ಮಾಳೂರು ಗ್ರಾಮದ ಮಂಜುಳಾ (25) ಸಾವನ್ನಪ್ಪಿರುವ ಮೃತ ಬಾಣಂತಿ. ಹೆರಿಗೆಯಾಗಿ ಆರು ದಿನದ ನಂತರ ಚಿಕಿತ್ಸೆ ಫಲಕಾರಿಯಾಗದೆ ಬಾಣಂತಿ ಮಂಜುಳಾ ಮೃತಪಟ್ಟಿದ್ದಾರೆ.
ಕಳೆದ ವರ್ಷ 2024 ರಲ್ಲಿ ಮದುವೆಯಾಗಿದ್ದ ಸೀಗೆಹಳ್ಳದ ನಿವಾಸಿ ಮಂಜುಳಾ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ಹೆರಿಗೆ ಹಿನ್ನಲೆಯಲ್ಲಿ ದಾಖಲಾಗಿದ್ದರು. ಗಂಡು ಮಗುವಿಗೆ ಜನ್ಮ ನೀಡಿದ ಬಾಣಂತಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಲೀವರ್, ಕಿಡ್ನಿ ವೈಫಲ್ಯತೆ ಕಂಡು ಇಂದು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಜೆಸಿ ಆಸ್ಪತ್ರೆಯಲ್ಲಿ ಫೆ.9 ರಂದು ದಾಖಲಾಗಿದ್ದ ಮಂಜುಳಾಗೆ ಅಂದೇ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಫೆ.14 ರವರೆಗೆ ಅಲ್ಲೇ ಚಿಕಿತ್ಸೆ ನೀಡಲಾಗಿತ್ತು. ಫೆ.14ರಿಂದ ನಂತರ ಇವತ್ತಿನವರೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ತಂದು ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಬಾಣಂತಿ ಸಾವನ್ನಪ್ಪಿದ್ದಾರೆ. ಈ ಸಾವಿಗೆ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಎಂಬುದು ಕುಟುಂಬಸ್ಥರ ಆರೋಪವಾಗಿದೆ.
‘ಮಹಿಳೆಗೆ ಹೆರಿಗೆ ವೇಳೆ ಗರ್ಭಕೋಶ ಹಿಗ್ಗದೆ ಇರುವ ಕಾರಣ ಸಾವಾಗಿದೆ. ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದೆ. ಯಾವುದೇ ಕಾರಣಕ್ಕೂ ವೈದ್ಯರ ನಿರ್ಲಕ್ಷ್ಯ ತೋರಿಲ್ಲ. ಕೊನೆ ಹಂತದವರೆಗೂ ಮಹಿಳೆಯನ್ನ ಬಜಾವ್ ಮಾಡಿಕೊಳ್ಳುವ ಪ್ರಯತ್ನ ನಡೆದಿತ್ತು.’
– ಡಾ.ನಟರಾಜ್, ಡಿಹೆಚ್ಒ