ಹೊಸನಗರದಲ್ಲಿ ದಾಖಲೆಯ 134 ಯೂನಿಟ್ ರಕ್ತ ಸಂಗ್ರಹ : ವಿಶಿಷ್ಟ ದಾಖಲೆ ಬರೆದ ಶಿಬಿರ

Written by Mahesha Hindlemane

Published on:

ಹೊಸನಗರ ; 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಸ್ಥಳೀಯ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಜ್ಯ ಸರಕಾರಿ ನೌಕರರ ಸಂಘದ  ತಾಲೂಕು ಘಟಕ, ಜೇಸಿಐ ಹೊಸನಗರ ಕೊಡಚಾದ್ರಿ,ತಾಲೂಕು ವರ್ತಕರ ಸಂಘ, ಸಾರ್ವಜನಿಕ ಆಸ್ಪತ್ರೆ,  ಪ್ಯಾರ ಮಿಲಿಟರಿ ಮಾಜಿ ಯೋಧರ ತಾಲೂಕು ಸಂಘ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ದಾನಿಗಳು ಪೈಪೋಟಿ ಮೂಲಕ ರಕ್ತದಾನ ಮಾಡುವ ಮೂಲಕ ತಾಲ್ಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ 134 ಯೂನಿಟ್ ರಕ್ತ ಸಂಗ್ರಹಕ್ಕೆ ಸಾಕ್ಷೀಕರಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಬೆಳಗ್ಗೆ 10 ಗಂಟೆಗೆ ಆರಂಭದವಾದ ಶಿಬಿರದಲ್ಲಿ ಹಲವರು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗುವ ಮೂಲಕ ಜಾಗೃತಿ ಮೂಡಿಸಿದ್ದು, ರಕ್ತದಾನದ ಮಹತ್ವ ಸಾರುವ ಕಾರ್ಯಕ್ಕೆ ಕೈಜೋಡಿಸಿದರು. ಈ ನಡುವೆ ನೂರಾರು ಮಂದಿ ರಕ್ತ ಗುಂಪು ತಪಾಸಣೆಗೆ ಒಳಪಟ್ಟಿದ್ದು ವಿಶೇಷ.

ಅಗತ್ಯ ಹಾಗು ಅನಿವಾರ್ಯ ಸಂದರ್ಭಗಳಲ್ಲಿ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವವೊಂದರ ಉಳಿವಿಗೆ ಸಹಕಾರಿಸುವ ಮಾನವೀಯತೆ ಎಂದು 65ನೇ ಬಾರಿ ರಕ್ತದಾನ ಮಾಡಿದ ಜೆಸಿಐ ಬಿ.ಎಸ್.ಸುರೇಶ್ ತಿಳಿಸಿದರು.

ಈ ವೇಳೆ ಪರಿಸರ ಪ್ರೇಮಿ, 46 ಬಾರಿ ರಕ್ತದಾನ ಮಾಡಿರುವ ಭದ್ರಾವತಿ ಸಂಚಾರಿ ವಿಭಾಗದ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಹಾಲೇಶಪ್ಪ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಉದ್ಯಮಿ ಪೂರ್ಣೇಶ್ ಮಳೆಬೈಲು, ರಾಧಾಕೃಷ್ಣ ಪೂಜಾರಿ ಸೇರಿದಂತೆ ಹಲವರು ಹಾಜರಿದ್ದರು.

Leave a Comment