ರಿಪ್ಪನ್‌ಪೇಟೆ ; ತಹಶೀಲ್ದಾರ್ ನೇತೃತ್ವದಲ್ಲಿ ದಿಢೀರ್ ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ

Written by malnadtimes.com

Published on:

RIPPONPETE ; ರಸ್ತೆ ಅಗಲೀಕರಣ ಕಾಮಗಾರಿಗೆ ಅಡ್ಡಿಯಾದ ಖಾಸಗಿ ಕಟ್ಟಡದ ತೆರವು ಕಾರ್ಯಾಚರಣೆ ಇಂದು ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ನೇತೃತ್ವದಲ್ಲಿ ದಿಢೀರ್ ಆರಂಭಗೊಂಡಿತು.

WhatsApp Group Join Now
Telegram Group Join Now
Instagram Group Join Now

ಕಳೆದ ಒಂದು ವರ್ಷದಿಂದ ಈ ಅನಧೀಕೃತ ಕಟ್ಟಡದಿಂದಾಗಿ ಸಾಗರ ರಸ್ತೆಯ ಒಂದು ಕಿ.ಮೀ.  ದ್ವಿಪಥ ರಸ್ತೆ ಕಾಮಗಾರಿ ಸ್ಥಗಿತಗೊಂಡು ವರ್ಷಗಳೇ ಕಳೆಯುತ್ತಾ ಒಂದಿದ್ದು ರಸ್ತೆ ಅಗಲೀಕರಣದಿಂದಾಗಿ ಶಾಲಾ, ಕಾಲೇಜ್ ಸೇರಿದಂತೆ ಸಾರ್ವಜನಿಕರು ಮಳೆಗಾಲದಲ್ಲಿ ಕಲುಷಿತ ನೀರಿನ ಅಭೀಷೇಕ ಮಾಡಿಕೊಳ್ಳುವ ಸ್ಥಿತಿ, ಈಗ ಬೇಸಿಗೆ ಕಾಲದ ಕಾರಣ ದೂಳು ತುಂಬಿ ವಾತಾವರಣ ಕಲುಷಿತಗೊಂಡು ಉಸಿರಾಟಕ್ಕೂ ತೊಂದರೆಯಾಗುವಂತಾಗಿದ್ದು ಸಾಕಷ್ಟು ದ್ವಿಚಕ್ರ ವಾಹನ ಸವಾರರು ಭಾರಿ ವಾಹನಗಳು ಹಿಂದೆ ದೂಳಿನ ಕಾರಣ ಕಣ್ಣು ಕಾಣದಂತಾಗಿ ಅಪಘಾತಗಳು ಸಂಭವಿಸಿರುವ ಘಟನೆಗಳು ನಡೆದಿದ್ದು ಈ ಬಗ್ಗೆ ಮಾಧ್ಯಮಗಳಲ್ಲಿ ಗಮನಸೆಳೆಯವಂತಹ ವರದಿಯಿಂದಾಗಿ ಇಂದು ತಹಶೀಲ್ದಾರ್ ರಶ್ಮಿ ಹಾಲೇಶ್ ನೇತೃತ್ವದಲ್ಲಿ ಕಾಮಗಾರಿಗೆ ಅಡ್ಡಿಯಾಗಿರುವ ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಮುಂದಾಗಿ ಸಾರ್ವಜನಿಕರ ಪ್ರಶಂಸೆಗೆ ಕಾರಣವಾದರು.

ಸ್ಪಂದಿಸಿದ ತಹಶೀಲ್ದಾರ್ ;

ಕಟ್ಟಡದ ಮಾಲೀಕ ಎಸ್.ಚಂದ್ರಪ್ಪ ಕಳೆದ ಒಂದು ವರ್ಷದಿಂದ ಈ ಕಟ್ಟಡಕ್ಕೆ ನ್ಯಾಯಾಲಯದ ತಡೆ ಅದೇಶವಿದೆ ಎಂದು ಹೇಳಿ ಬರುವ ಅಧಿಕಾರಿಗಳನ್ನು ದಿಕ್ಕು ತಪ್ಪಿಸಿ ಸಾಗು ಹಾಕುತ್ತಿದ್ದು ಇಂದು ನೇರವಾಗಿ ತಹಶೀಲ್ದಾರ್ ರಶ್ಮಿ ಹಾಲೇಶ್ ತಮ್ಮ ಸಿಬ್ಬಂದಿಗಳೊಂದಿಗೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಜೆಸಿಬಿ, ಹಿಟಾಚಿಯ ಸಹಾಯದೊಂದಿಗೆ ದಿಢೀರ್ ತೆರವು ಕಾರ್ಯಾಚರಣೆಗೆ ಮುಂದಾಗುತ್ತಿದ್ದಂತೆ ಕಟ್ಟಡದ ಮಾಲೀಕ ಯಂತ್ರಗಳ ಬಳಿ ತಡೆಯೊಡ್ಡಲು ಹೋಗಿ ಕೆಲಸಮಯ ಮಾತಿನ ಚಕಮಕಿ ನಡೆದು ಕೊನೆಗೆ ತಹಶೀಲ್ದಾರ್ ಮುಲಾಜಿಲ್ಲದೆ ಜೆಸಿಬಿಯವರಿಗೆ ತೆರವು ಕಾರ್ಯಾಚರಣೆ ನಡೆಸುವಂತೆ ಸೂಚಿಸಿ ತಡೆಮಾಡಿದ ಕಟ್ಟಡದ ಮಾಲೀಕ ಎಸ್.ಚಂದ್ರಪ್ಪ ಮತ್ತು ಆತನ ಪುತ್ರರ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸ್ ಸಬ್‌ಇನ್ಸ್ಪೆಕ್ಟರ್‌ಗೆ ಆದೇಶಿಸಿದರು.

ತಹಶೀಲ್ದಾರ್ ರಶ್ಮಿ ಹಾಲೇಶ್ ಈ ಕ್ರಮಕ್ಕೆ ಸಾರ್ವಜನಿಕರಲ್ಲಿ ಪ್ರಶಂಸೆ ಕಾರಣವಾಯಿತು.

Leave a Comment