ರಿಪ್ಪನ್‌ಪೇಟೆ ; ಲಕ್ಕವಳ್ಳಿ ದೊಡ್ಮನೆ ಎಲ್.ವೈ.ವೀರಭದ್ರಪ್ಪಗೌಡರಿಗೆ ನಾಗರೀಕರಿಂದ ನುಡಿನಮನ ಕಾರ್ಯಕ್ರಮವು ವೇ.ಪುಟ್ಟಣಯ್ಯ ನವರ ಆಧ್ಯಕ್ಷತೆಯಲ್ಲಿ ನೆರವೇರಿತು.
ಲಕ್ಕವಳ್ಳಿ ದೊಡ್ಮನೆ ವೀರಭದ್ರಪ್ಪಗೌಡರು ಜ್ಯೋತಿಷ್ಯಶಾಸ್ತ್ರ ಪಂಚಾಂಗವನ್ನು ಗ್ರಹ ನಕ್ಷತ್ರ ಸೇರಿದಂತೆ ಹಬ್ಬ ಹರಿದಿನಗಳ ಆಚರಣೆಯ ಕುರಿತು ಸಮಗ್ರವಾಗಿ ಗ್ರಾಮಸ್ಥರಿಗೆ ಮಾಹಿತಿ ನೀಡುತ್ತಿದ್ದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಗೌಡರ ಜನಹಿತೋಪದೇಶಗಳು ಮತ್ತು ಅವರ ಆದರ್ಶ ಗುಣಗಳನ್ನು ಇಂದಿನ ಯುವ ಜನಾಂಗ ಮೈಗೂಡಿಸಿಕೊಂಡಾಗ ಮಾತ್ರ ನಾವು ಅವರಿಗೆ ನೀಡುವ ಗೌರವ ಸಾರ್ಥಕವಾಗುವುದೆಂದ ಹೇಳುವುದರೊಂದಿಗೆ ‘ನಮ್ಮೂರ ಮುತ್ತು’ ಕಳೆದುಕೊಂಡು ನಾವು ನತದೃಷ್ಟರಾದಂತಾಗಿದ್ದೇವೆ ಎಂದು ಅಗಲಿದ ಗೌಡರಿಗೆ ನುಡಿನಮನ ಕಾರ್ಯಕ್ರಮದಲ್ಲಿ ತಿಳಿಸಿದರು.
ರಿಪ್ಪನ್‌ಪೇಟೆ ಬಸವೇಶ್ವರ ವೀರಶೈವ ಸಮಾಜದ ಉಪಾಧ್ಯಕ್ಷ ಜಿ.ಎಂ.ದುಂಡರಾಜಪ್ಪಗೌಡ, ಮಲಗೊಪ್ಪ ಗಂಗಾಧರಪ್ಪಗೌಡ, ಭದ್ರಪ್ಪಗೌಡ, ಎಲ್.ವೈ.ನಾಗೇಂದ್ರಪ್ಪಗೌಡ, ಕುಡಿಗೇರಮನೆ ಮಲ್ಲಿಕಾರ್ಜುನ, ದೇವೇಂದ್ರಪ್ಪಗೌಡ, ಹಲಿಗುಡ್ಡೇರಮನೆ ವರ್ತೇಶ್‌ಗೌಡ, ಸೋಮಶೇಖರ ಕಮದೂರು, ಶಿವಪ್ರಕಾಶ ಪಾಟೀಲ್ ಕಗ್ಗಲಿ, ದಿನೇಶ್ ಲಕ್ಕವಳ್ಳಿ, ಎಲ್.ಎಸ್,ಗಗನ, ಕೆ.ಎಂ.ನಿರ್ಮಾಲ ಕೆಂಚಾಪುರ, ಕವನ(ಪುಟಾಣಿ), ಇನ್ನಿತರರು ಮೃತ ವೀರಭದ್ರಪ್ಪಗೌಡರ ಸ್ಮರಿಸಿ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಟುಂಬದವರು ಮೊಮ್ಮಕ್ಕಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ನಿಧನವಾರ್ತೆ : ಶತಾಯಿಷಿ ಮಾಚಮ್ಮ
ರಿಪ್ಪನ್‌ಪೇಟೆ : ಇಲ್ಲಿನ ದೊಡ್ಡಿನಕೊಪ್ಪ ನಿವಾಸಿ ಶತಾಯಿಷಿ ಮಾಚಮ್ಮ (101) ತಮ್ಮ ಸ್ವಗೃಹದಲ್ಲಿ ಬುಧವಾರ ಸಂಜೆ ನಿಧನ ಹೊಂದಿದ್ದಾರೆ.
ಮೃತರು ನಾಲ್ವರು ಪುತ್ರಿಯರು, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ರಿಪ್ಪನ್‌ಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ಜರುಗಿತು.

