ಹಸು ಕಟ್ಟಲು ಹೋದ ರೈತನನ್ನು ಬಲಿ ಪಡೆದ ಕಾಡಾನೆ !

Written by malnadtimes.com

Published on:

ತರೀಕೆರೆ ; ಆನೆ ದಾಳಿಗೆ ರೈತ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗುರುಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ವೆಂಕಟೇಶ್ (58) ಮೃತಪಟ್ಟ ರೈತ. ವೆಂಕಟೇಶ್ ಮ‌ನೆ ಮುಂದೆ ತೋಟದಲ್ಲಿ ಹಸು ಕಟ್ಟುವಾಗ ಆನೆ ದಾಳಿ ನಡೆಸಿ ರೈತನನ್ನು ಸೊಂಡಿಲಿನಲ್ಲಿ ಸುತ್ತಿ ತೆಂಗಿನ ಮರಕ್ಕೆ ಹೊಡೆದಿದೆ.

ರೈತ ಮುಂಜಾನೆ ಕತ್ತಲಿದ್ದ ಕಾರಣ ಅಲ್ಲಿ ಕಾಡಾನೆ ಇದ್ದ ವಿಚಾರ ತಿಳಿಯದೇ ಮನೆ ಮುಂದೆ ಹಸು ಕಟ್ಟುತ್ತಿದ್ದರು. ಈ ವೇಳೆ ಆನೆ ಉಸಿರಾಡುವ ಸದ್ದು ಕೇಳಿ ಮೊಬೈಲ್‌ನಿಂದ ಟಾರ್ಚ್‌ ಲೈಟ್‌ ಹಾಕಿದ್ದಾರೆ. ಲೈಟ್‌ ಹಾಕಿದ ತಕ್ಷಣ ಆನೆ ಸೊಂಡಿಲಿನಿಂದ ರೈತನನ್ನು ಹಿಡಿದು ಮರಕ್ಕೆ ಹೊಡೆದಿದೆ. ಪರಿಣಾಮ ರೈತ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂಟಿ ಸಲಗದ ಕಾಟಕ್ಕೆ ಬೇಸತ್ತಿರೋ ಲಕ್ಕವಳ್ಳಿ ಹೋಬಳಿ ಜನರು, ಪರಿಹಾರ ಕೊಡುವುದರಿಂದ ಜೀವ ತರಲ್ಲ, ಆನೆಯನ್ನು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಸಾರ್ವಜನಿಕರು ಮನವಿ ಮಾಡಿದ್ದಾರೆ.

Leave a Comment