ತರೀಕೆರೆ ; ಆನೆ ದಾಳಿಗೆ ರೈತ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗುರುಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ವೆಂಕಟೇಶ್ (58) ಮೃತಪಟ್ಟ ರೈತ. ವೆಂಕಟೇಶ್ ಮನೆ ಮುಂದೆ ತೋಟದಲ್ಲಿ ಹಸು ಕಟ್ಟುವಾಗ ಆನೆ ದಾಳಿ ನಡೆಸಿ ರೈತನನ್ನು ಸೊಂಡಿಲಿನಲ್ಲಿ ಸುತ್ತಿ ತೆಂಗಿನ ಮರಕ್ಕೆ ಹೊಡೆದಿದೆ.
ರೈತ ಮುಂಜಾನೆ ಕತ್ತಲಿದ್ದ ಕಾರಣ ಅಲ್ಲಿ ಕಾಡಾನೆ ಇದ್ದ ವಿಚಾರ ತಿಳಿಯದೇ ಮನೆ ಮುಂದೆ ಹಸು ಕಟ್ಟುತ್ತಿದ್ದರು. ಈ ವೇಳೆ ಆನೆ ಉಸಿರಾಡುವ ಸದ್ದು ಕೇಳಿ ಮೊಬೈಲ್‌ನಿಂದ ಟಾರ್ಚ್ ಲೈಟ್ ಹಾಕಿದ್ದಾರೆ. ಲೈಟ್ ಹಾಕಿದ ತಕ್ಷಣ ಆನೆ ಸೊಂಡಿಲಿನಿಂದ ರೈತನನ್ನು ಹಿಡಿದು ಮರಕ್ಕೆ ಹೊಡೆದಿದೆ. ಪರಿಣಾಮ ರೈತ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂಟಿ ಸಲಗದ ಕಾಟಕ್ಕೆ ಬೇಸತ್ತಿರೋ ಲಕ್ಕವಳ್ಳಿ ಹೋಬಳಿ ಜನರು, ಪರಿಹಾರ ಕೊಡುವುದರಿಂದ ಜೀವ ತರಲ್ಲ, ಆನೆಯನ್ನು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.