ಲಿಂಗಭೇದ ತೊರೆದು ಶಿಕ್ಷಣಕ್ಕೆ ಮಾನ್ಯತೆ ನೀಡಿ ; ಬೃಹತ್ ಸೌಹಾರ್ದ ಸಂಗಮ ಸಮಾವೇಶದಲ್ಲಿ ಸ್ಪೀಕರ್ ಯು.ಟಿ.ಖಾದರ್ ಮುಸ್ಲಿಂ ಬಾಂಧವರಿಗೆ ಕಿವಿಮಾತು

Written by Mahesha Hindlemane

Published on:

ಹೊಸನಗರ ; ತಾಳ್ಮೆ ಪ್ರತಿಯೊಬ್ಬರ ಯಶಸ್ಸಿನ ಮೂಲ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಹಿಯುದ್ದೀನ್ ಜುಮ್ಮ ಮಸೀದಿ ಆವರಣದಲ್ಲಿ ಎಸ್‌ಎಸ್‌ಎಫ್, ಎಸ್‌ವೈಎಸ್ ಹಾಗೂ ಎಮ್‌ಜೆಎಮ್ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸೌಹಾರ್ದ ಸಂಗಮ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಬಾಲ್ಯದಿಂದಲೇ ಪ್ರತಿಯೊಬ್ಬರೂ ತಾಳ್ಮೆ, ಕ್ಷಮಗುಣ, ಅಗತ್ಯಕ್ಕೆ ತಕ್ಕಂತೆ ಮಾತನಾಡುವುದು, ಸಂಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ನೀಡುವುದು ರೂಡಿಸಿಕೊಂಡಲ್ಲಿ ಸಮಾಜದಲ್ಲಿ ನಿಮ್ಮ ಸ್ಥಾನಮಾನಗಳು ಉತೃಷ್ಟಮಟ್ಟದಲ್ಲಿದ್ದು, ಜನಮನ್ನಣೆ ಗಳಿಸಲು ಸಾಧ್ಯವಿದೆ ಎಂದರು.

ಉತ್ತಮ ವ್ಯಕ್ತಿತ್ವ ಹೊಂದಿ ಪ್ರತಿಯೊಬ್ಬರನ್ನು ಪ್ರೀತಿಸುವ ವ್ಯಕ್ತಿಯನ್ನು ಅಲ್ಲಾಹನು ಸಹ ಇಷ್ಟ ಪಡುತ್ತಾನೆ. ಉತ್ತಮ ಸಂಸ್ಕಾರ, ವ್ಯಕ್ತಿತ್ವ ಹೊಂದುವ ಯುವಜನತೆ ದೇಶದ ಹಾಗೂ ಕುಟುಂಬದ ಸಂಪತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡಬೇಕು. ಎಂತಹ ಕಠಿಣ ಸಮಸ್ಯೆಗಳೇ ಇರಲಿ, ಅದಕ್ಕೆ ಪರಿಹಾರ ಕಂಡುಕೊಳ್ಳಲು ಶೈಕ್ಷಣಿಕ ಕ್ಷೇತ್ರದಿಂದ ಮಾತ್ರವೇ ಸಾಧ್ಯವೆಂದರು.

ಯಾವುದೇ ಚುನಾಯಿತ ಜನಪ್ರತಿನಿಧಿಗಳು, ಸರ್ಕಾರಗಳು ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸ ಬಹುದೇ ವಿನಃ ಒಂದು ಕುಟುಂಬ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಅಂತಹ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಕುಟುಂಬದ ವಿದ್ಯಾವಂತ ಯುವಸಮೂಹದಿಂದ ಮಾತ್ರವೇ ಸಾಧ್ಯವೆಂದರು.

ಲಿಂಗಭೇದ ತೊರೆದು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ಕುಟುಂಬದಲ್ಲಿ ಶಾಂತಿ ಸೌರ್ಹಾದತೆ ನೆಲೆಸಿ ಉತ್ತಮ ನಾಗರೀಕರಾಗಲು ಶಿಕ್ಷಣ ಸಹಕಾರಿ ಆಗಲಿದೆ ಎಂದರು.

ರಿಪ್ಪನ್‌ಪೇಟೆಯ ಎಮ್‌ಜೆಎಮ್ ಖತೀಬರಾದ ಬಹು|| ಮುನೀರ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಸುನ್ನೀ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿ ಬಹು|| ಡಾ. ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಮುಖ್ಯ ಭಾಷಣ ನೆರವೇರಿಸಿದರು.

ಜಯನಗರ ಎಮ್‌ಜೆಎಮ್ ಅಧ್ಯಕ್ಷ ಬಹು|| ಅಬ್ದುಲ್ ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಖತೀಬರಾದ ಬಹು|| ಶಾಹುಲ್ ಹಮೀದ್ ಸಖಾಫಿ, ಬಹು|| ಉಮರುಲ್ ಫಾರೂಕ್ ಸಖಾಫಿ, ಎಸ್‌ಎಸ್‌ಎಫ್ ಅಧ್ಯಕ್ಷ ನಾಸೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಬಹು|| ಸಿದ್ದೀಖಾ ಹಾಜಿ, ಹೆಚ್. ಹಚಿಝ, ಮುಹಮ್ಮದ್ ಜೆ.ಎಂ. ಆಶ್ರಫ್ ಅಹ್ಮದ್, ಯಾಸೀರ್ ಅಹ್ಮದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave a Comment