ಅಪಘಾತದಲ್ಲಿ ಗಾಯಗೊಂಡಿದ್ದ ಯಕ್ಷಗಾನ ಭಾಗವತ ವೇಣುಗೋಪಾಲ ಇನ್ನಿಲ್ಲ !

Written by malnadtimes.com

Published on:

SAGARA | ಅಪಘಾತದಲ್ಲಿ ಗಾಯಗೊಂಡಿದ್ದ ಸಿಗಂದೂರು ಶ್ರೀ ಚೌಡಮ್ಮ ದೇವಿ ಕೃಪಾಪೋಷಿತ ಯಕ್ಷಗಾನ (Yakshagana) ಮೇಳದ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹೊಸನಗರ ತಾಲೂಕಿನ ಪುರಪ್ಪೆಮನೆ ಕೆಳಮನೆ ಗ್ರಾಮದ ಕೆ.ಜಿ. ವೇಣುಗೋಪಾಲ (44) ಸಾವನ್ನಪ್ಪಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಸೋಮವಾರ ರಾತ್ರಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಆನಂದಪುರ ಸಮೀಪದ ಗಡಿಕಟ್ಟೆಯಲ್ಲಿ ಹಸು ಅಡ್ಡ ಬಂದಿದ್ದು ಆಯತಪ್ಪಿ ಬೈಕ್‌ನಿಂದ ಬಿದ್ದು ತಲೆಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ.

ಮೃತರು ತಂದೆ, ಭಾಗವತ ಕೆ.ಜಿ.ರಾಮರಾವ್, ತಾಯಿ ಹಾಗೂ ಓರ್ವ ಸಹೋದರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಕಲಾವಿದರ ಕುಟುಂಬದ ಕುಡಿಯಾಗಿದ್ದ ವೇಣುಗೋಪಾಲ ಉಡುಪಿಯ ಕಲಾಕೇಂದ್ರದಲ್ಲಿ ಭಾಗವತಿಕೆ ಸೇರಿದಂತೆ ಯಕ್ಷಗಾನದ ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದರು. ಈ ಹಿಂದೆ ಸಾಲಿಗ್ರಾಮ, ಮಂದಾರ್ತಿ ಮೇಳದ ಭಾಗವತರಾಗಿಯೂ ಕೆಲಸ ಮಾಡಿದ್ದರು.

ಕೆಲಕಾಲ ಉಡುಪಿ ಕಲಾಕೇಂದ್ರದಲ್ಲಿ ಗುರುಗಳಾಗಿಯೂ ಕೆಲಸ ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿಗಂದೂರು ಮೇಳದಲ್ಲಿ ಭಾಗವತರ ತಂಡದಲ್ಲಿ ಕೆಲಸ ಮಾಡಿದ್ದರು.

ರಂಗ ಪ್ರದರ್ಶನ ಹಾಗೂ ಭಾಗವತಿಕೆಗಳೆರಡರಲ್ಲೂ ಅವರು ತಮ್ಮ ಛಾಪು ತೋರಿಸಿದ್ದರು. ಬಯಲಾಟದ ಪ್ರಸಂಗಗಳಿಗೂ ಭಾಗವತರಾಗಿ ಕಾರ್ಯ ನಿರ್ವಹಿಸುವ ಮೂಲಕ ಅವರು ಗಮನ ಸೆಳೆದಿದ್ದರು.

LED Bulb | ಎಲ್‌ಇಡಿ ಹೆಡ್‌ಲೈಟ್ ಅಳವಡಿಸಿಕೊಂಡ ವಾಹನಗಳ ಮಾಲೀಕರೇ ದಂಡ ಕಟ್ಟಲು ಸಜ್ಜಾಗಿ !

Leave a Comment