ಹೊಸನಗರ : ಕ್ಯಾಂಪ್ಕೋ ಸಂಸ್ಥೆಯಲ್ಲಿ ಸದಸ್ಯರಾದರೆ ಉತ್ತಮ ರೀತಿಯ ಸೌಲಭ್ಯ ನೀಡುವುದರ ಜೊತೆಗೆ ಅಡಿಕೆ, ಕಾಳುಮೆಣಸು ಕೋಕೋ ಮತ್ತು ರಬ್ಬರ್‌ಗಳನ್ನು ಉತ್ತಮ ರೀತಿಯಲ್ಲಿ ಖರೀದಿ ಮಾಡಲಾಗುವುದು ಎಂದು ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಹೆಚ್.ಎಂ.ಹೇಳಿದರು.
ಮುಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಡಿ.ತಿಮ್ಮಪ್ಪ ಎಂಬುವವರು ಆಕಸ್ಮಿಕ ಮರಣ ಹೊಂದಿದ್ದು ಅವರ ಕುಟುಂಬಕ್ಕೆ ಕ್ಯಾಂಪ್ಕೋ ಸಂಸ್ಥೆಯ ಸಾಂತ್ವನ ಯೋಜನೆಯಡಿಯಲ್ಲಿ 50 ಸಾವಿರ ರೂ. ಚೆಕ್ ಅನ್ನು ಅವರ ಮನೆಗೆ ತೆರಳಿ ವಿತರಿಸಿ ಮಾತನಾಡಿದರು.
ಉತ್ತಮ ಗುಣಮಟ್ಟದ ಕ್ಯಾಂಪ್ಕೋ ಬ್ರಾಂಡ್‌ನ ಮೈಲುತುತ್ತ ಸಿಗಲಿದ್ದು ಕಳೆದ ವರ್ಷ ಕ್ಯಾಂಪ್ಕೋದಲ್ಲಿ ಅಡಿಕೆ ವಿಕ್ರಯ ಮಾಡಿದವರಿಗೆ ಸಬ್ಸಿಡಿ ದರ 290 ರೂಪಾಯಿಗೆ ಲಭ್ಯವಿದೆ. ಕನಿಷ್ಟ 67 ಕೆ.ಜಿ ಅಡಿಕೆ ವಿಕ್ರಯ ಮಾಡಿದವರಿಗೆ 100 ಕೆ.ಜಿ ಸಬ್ಸಿಡಿಯ ಮೈಲುತುತ್ತ ಮತ್ತು ಹೆಚ್ಚು ಬೇಕಾದಲ್ಲಿ ಪ್ರತಿ ಕೆ.ಜಿ.ಗೆ 330 ರೂಪಾಯಿಗೆ ನೀಡಲಿದ್ದು ಸದಸ್ಯ ಕೃಷಿಕರು ಈ ಯೋಜನೆಯ ಸದುಪಯೋಗಪಡೆಸಿಕೊಳ್ಳಿ ಎಂದರು.

ಈ ಚೆಕ್ ವಿತರಿಸುವ ಸಂದರ್ಭದಲ್ಲಿ ಶಿವಮೊಗ್ಗ ಪ್ರಾಂತೀಯ ವ್ಯವಸ್ಥಾಪಕ ರತ್ನಾಕರ್, ಶಾಖಾ ವ್ಯವಸ್ಥಾಪಕ ಉಮೇಶ ಪಿ, ಸಿಬ್ಬಂದಿಗಳಾದ ಸೋಮಶೇಖರ, ಅಕ್ಷಯ್ ಕುಮಾರ್, ಸುಧಾಕರ್ ಶೇರ್ವೆಗಾರ್ ಇನ್ನೂ ಮುಂತಾದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.