ಸಾಗರದ ಖ್ಯಾತ ವಕೀಲ ರಾಜೇಶ್ ಮೇಲೆ ಹಲ್ಲೆ: ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶ!

Written by Koushik G K

Published on:

ಸಾಗರ :ಸಾಗರದ ಖ್ಯಾತ ವಕೀಲ ರಾಜೇಶ್ ಎಸ್.ಬಿ. ಅವರ ಮೇಲೆ 2019ರಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯವು ಕ್ರಮ ಕೈಗೊಂಡಿದ್ದು, ದೋಷಿ ಪೊಲೀಸ್ ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ನಿರ್ದೇಶನ ನೀಡಿದೆ.

WhatsApp Group Join Now
Telegram Group Join Now
Instagram Group Join Now

2019ರ ಫೆಬ್ರವರಿ 28ರಂದು ಸಾಗರ ಪೇಟೆಯ ಮಾರ್ಕೆಟ್ ರಸ್ತೆಯಲ್ಲಿ ನಡೆದ ಘಟನೆಯ ವೇಳೆ, ರಾಜೇಶ್ ಎಸ್.ಬಿ. ಅವರ ಮೇಲೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಇ.ಓ. ಮಂಜುನಾಥ್, ಪೇದೆ ಸೈನು ನದಾಫಾ ಮತ್ತು ಹೋಂ ಗಾರ್ಡ್ ಕೃಷ್ಣಪ್ಪ ಅವರಿಂದ ಹಲ್ಲೆ ನಡೆದಿದೆ ಎಂಬ ಆರೋಪವಿದೆ.

ವಕೀಲ ರಾಜೇಶ್ ಅವರು ಈ ಸಂಬಂಧ ಸಾಗರದ ಮಾನ್ಯ ಪಿ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ PCR ನಂ. 77/2019 ಮೂಲಕ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿ ನಂತರ ‘ಬಿ ವರದಿ’ ಸಲ್ಲಿಸಲಾಗಿತ್ತು.

ಆದರೆ ಪ್ರಕರಣದ ತನಿಖೆ ನಡೆಸಿದ ನ್ಯಾಯಾಧೀಶ ಮಾದೇಶ್ ಎಂ.ವಿ. ಅವರು ಈ ಬಿ ವರದಿಯನ್ನು ತಳ್ಳಿ ಹಾಕಿ, ಆರೋಪಿಗಳಿಗೆ ವಿರುದ್ಧ ಈ ಕೆಳಗಿನ ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶ ನೀಡಿದ್ದಾರೆ:ಈ ಪೊಲೀಸ್ ಅಧಿಕಾರಿಗಳ ವಿರುದ್ಧ IPC ಸೆಕ್ಷನ್ 193, 323, 337, 341, 342, 352, 355, 357, 504, 506, 34 ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶ ನೀಡಿದ್ದಾರೆ.ಪಿರ್ಯಾದುದಾರರ ಪರ ಖ್ಯಾತ ವಕೀಲರಾದ ರಮೇಶ್ ಹೆಚ್.ಬಿ‌. ಶಿರವಾಳ ಇವರು ವಾದಿಸಿದ್ದರು.

Leave a Comment