ಹೊಸನಗರ ; ಅಗಲಿದ ಮಲೆನಾಡಿನ ವೀರ ಯೋಧ ಇಂದು ಪಂಚ ಭೂತಗಳಲ್ಲಿ ಲೀನನಾಗಿದ್ದಾನೆ.

ಆಗ್ರಾದಲ್ಲಿ ಪ್ಯಾರಾಚೂಟ್ ತರಬೇತಿ ವೇಳೆ ಅವಘಢದಲ್ಲಿ ಇಹಲೋಕ ತ್ಯಜಿಸಿದ ಏರ್‌ಫೋರ್ಸ್ ಅಧಿಕಾರಿ ಮಂಜುನಾಥ್ ಪಾರ್ಥಿವ ಶರೀರ ಹುಟ್ಟೂರಿಗೆ ಇಂದು ಬೆಳಗ್ಗೆ ಆಗಮಿಸಿದ್ದು, ಸೇನಾಧಿಕಾರಿ ನಿವಾಸದ ಪಕ್ಕದಲ್ಲೇ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಕುಶಾಲತೋಪುಗಳನ್ನು ಸಿಡಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.

ಪ್ಯಾರಾಚೂಟ್ ದುರಂತದಲ್ಲಿ ಮಡಿದ ಸೈನಿಕ ಮಂಜುನಾಥ್ ಪಾರ್ಥೀವ ಶರೀರ ಶಿವಮೊಗ್ಗ ತಲುಪಿದ್ದು, ಅಂತ್ಯಕ್ರಿಯೆ ನೆರವೇರಿಸಲಾಯಿತು. ಇಂದು ಬೆಳಿಗ್ಗೆ ಶಿವಮೊಗ್ಗದ ಹೊಳೆ ಬಸ್ ಸ್ಟಾಪ್ ಬಳಿ ಪಾರ್ಥೀವ ಶರೀರವನ್ನು ಬರಮಾಡಿಕೊಂಡ ಶಿವಮೊಗ್ಗ ಜನತೆ, ಅಮರ್ ರಹೆ, ಅಮರ್ ರಹೇ ಮಂಜುನಾಥ್ ಅಮರ್ ರಹೇ ಎಂದು ಘೋಷಣೆ ಕೂಗಿದರು. ಸೈನ್ಯದ ವಾಹನದಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮಂಜುನಾಥ್ ಪಾರ್ಥೀವ ಶರೀರವನ್ನು ಸೇನಾಧಿಕಾರಿಗಳು ತಂದಿದ್ದು, ಮೆರವಣಿಗೆ ಮೂಲಕ ಹುಟ್ಟೂರಾದ ಹೊಸನಗರಕ್ಕೆ ರವಾನೆ ಮಾಡಲಾಯಿತು.

ಈ ವೇಳೆ ಮೃತ ಯೋಧನ ಪತ್ನಿಗೆ ಶಾಸಕ ಚನ್ನಬಸಪ್ಪ ಹಾಗೂ ಸಂಸದ ಬಿ ವೈ ರಾಘವೇಂದ್ರ ಸಾಂತ್ವನ ಹೇಳಿದರು. ನಗರದ ನಾಗರಿಕರಿಂದ ಬೆಕ್ಕಿನ ಕಲ್ಮಠದ ಬಳಿಯಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಲಾಯಿತು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1A3zaiURcB/
ಯೋಧನ ಮೃತ ದೇಹಕ್ಕೆ ಪುಷ್ಪ ನಮನ ಸಲ್ಲಿಸಿ ಅಂತಿಮ ವಿದಾಯ ಹೇಳಲಾಯಿತು. ಬಳಿಕ ಯೋಧ ಮಂಜುನಾಥ್ ಹುಟ್ಟೂರಾದ ಹೊಸನಗರಕ್ಕೆ ಸೇನಾ ವಾಹನ ಆಗಮಿಸುತ್ತಿದ್ದಂತೆ, ವೀರ ಮರಣವನ್ನಪ್ಪಿದ ಯೋಧನಿಗೆ ಪುಷ್ಪ ನಮನದ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ದಾರಿ ಯುದ್ದಕ್ಕೂ ಅಗಲಿದ ಯೋಧನಿಗೆ ಮಲೆನಾಡಿನ ಜನತೆ ಅಶ್ರುಕಂಬನಿ ಮಿಡಿದರು. ಈ ವೆಳೆ, ತನ್ನ ಪತಿ ಮೃತ ದೇಹ ನೋಡುತ್ತಿದ್ದಂತೆ ಮಂಜುನಾಥ್ ಪತ್ನಿ ಕಲ್ಪಿತಾ ಕಣ್ಣೀರು ಹಾಕಿ ಪತಿಯ ಹಣೆಗೆ ಮುತ್ತಿಟ್ಟಿದ್ದು ಮಾತ್ರ ಕರುಳು ಕಿವುಚುವಂತಾಗಿತ್ತು.

ಬಳಿಕ ಹುಟ್ಟೂರಾದ ಸಂಕೂರಿನಲ್ಲಿ ಯೋಧ ಮಂಜುನಾಥ್’ಗೆ ಕಣ್ಣೀರ ವಿದಾಯ ಹೇಳಲಾಯಿತು. ಮೊದಲು ರಾಜ್ಯ ಪೊಲೀಸ್ ತಂಡ ಮೂರು ಸುತ್ತು ಕುಶಾಲತೋಪು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರೆ, ಬಳಿಕ ವಾಯುಸೇನೆಯಿಂದ 3 ಸುತ್ತು ಕುಶಾಲ ತೋಪು ಹಾರಿಸುವ ಮೂಲಕ ಸೇನಾ ಗೌರವ ನೀಡಲಾಯಿತು. ಮೃತ ಯೋಧನ ಪತ್ನಿ ಕಲ್ಪಿತಾಗೆ ಸಮವಸ್ತ್ರ ಹಾಗೂ ರಾಷ್ಟ್ರಧ್ವಜ ಹಸ್ತಾಂತರಿಸಿದ ಬಳಿಕ ಮಂಜುನಾಥ್ ಹೋದರ ಯುವರಾಜ್ ನಿಂದ ಯೋಧನ ಚಿತೆಗೆ ಅಗ್ನಿಸ್ಪರ್ಶ ಮಾಡಲಾಯಿತು. ಈ ವೇಳೆ ಸಾವಿರಾರು ಜನರು ಯೋಧ ಮಂಜುನಾಥ್ ನಿಗೆ ಕಣ್ಣೀರ ವಿದಾಯ ಹೇಳಿದರು. ಈಡಿಗ ಸಂಪ್ರದಾಯದಂತೆ ಮನೆ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಒಟ್ಟಾರೆ, ಅಂತ್ಯಕ್ರಿಯೆ ವೇಳೆ, ತಾಲೂಕು ಆಡಳಿತಾಧಿಕಾರಿಗಳು ಪಾಲ್ಗೊಂಡಿದ್ದು ಸಕಲ ಸರ್ಕಾರಿ ಗೌರವದ ಮೂಲಕ ಯೋಧ ಮಂಜುನಾಥ್ ಪಂಚಭೂತಗಳಲ್ಲಿ ಲೀನಾವಾದರು.

ಏನೇಯಾಗಲಿ, ತರಬೇತಿ ನೀಡುವ ವೇಳೆ ತರಬೇತುದಾರ ಸೈನಿಕನೇ ಪ್ಯಾರಾಚೂಟ್ ಸರಿಯಾದ ಸಮಯಕ್ಕೆ ತೆರೆದುಕೊಳ್ಳದ ಪರಿಣಾಮ, ದುರಂತ ಅಂತ್ಯ ಕಂಡಿದ್ದು ಮಾತ್ರ ವಿಷಾಧನೀಯ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/malnadtimes/videos/1153595713028852/?mibextid=uSdriS

