ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಕಿವಿ, ಮೂಗಿದಂತೆ ; ಧನಂಜಯ ಸರ್ಜಿ

Written by malnadtimes.com

Published on:

HOSANAGARA | ಈ ದೇಶದಲ್ಲಿ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಒಬ್ಬರು ಕಿವಿಯಾದರೆ ಇನ್ನೊಬ್ಬರು ಮೂಗಿದಂತೆ ಕೋವಿಡ್ ಕಾಲದಲ್ಲಿ ಇವರ ಸೇವೆ ಅಮೋಘವಾಗಿದ್ದು ಸಾಕಷ್ಟು ಜನರ ಜೀವ ಉಳಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ (Dr. Dhananjaya Sarji) ಹೇಳಿದರು.

WhatsApp Group Join Now
Telegram Group Join Now
Instagram Group Join Now

SHIVAMOGGA | ಬೆಳ್ಳಂಬೆಳಗ್ಗೆ ರೌಡಿಶೀಟರ್ ಕಾಲಿಗೆ ಗುಂಡೇಟು !

ಪಟ್ಟಣದ ಮಕ್ಕಳ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಆವರಣದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾಟ್ ಫೋನ್ ವಿತರಿಸಿ ಮಾತನಾಡಿದರು‌.

ನಾವು ನಿಮ್ಮೊಂದಿಗಿದ್ದೇವೆ :

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ನಾವು ನಿಮ್ಮೊಂದಿಗಿದ್ದೇವೆ. ಇಂದಿನ ಯುಗದಲ್ಲಿ ಪೇಪರ್, ಪೆನ್ ಕಡಿಮೆಯಾಗುತ್ತಿದ್ದು ತಕ್ಷಣ ಮಾಹಿತಿ ನೀಡಲು ಸ್ಮಾಟ್ ಫೋನ್‌ಗಳನ್ನು ವಿತರಿಸಲಾಗುತ್ತಿದೆ ಇದರಿಂದ ನಿಮಗೆ ಅನುಕೂಲಕರವಾಗಿದ್ದು ನಿಮ್ಮ ಯಾವುದೇ ಬೇಡಿಕೆಗಳಿಗೂ ನಾವು ಮತ್ತು ನಮ್ಮ ಸರ್ಕಾರ ನಿಮ್ಮ ಜೊತೆಗಿರುತ್ತೇವೆ ಎಂದರು.

ಈ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ತಹಶೀಲ್ದಾರ್ ರಶ್ಮಿ ಹಾಲೇಶ್, ಶಿಶು ಅಭಿವೃದ್ಧಿ ಸಹಾಯಕ ನಿರ್ದೆಶಕ ಸುರೇಶ್, ಕಛೇರಿ ಅಧಿಕಾರಿ ರಾಜು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Dengue | ಮಹಾಮಾರಿ ಡೆಂಗ್ಯೂಗೆ ರಿಪ್ಪನ್‌ಪೇಟೆ ಮಹಿಳೆ ಬಲಿ !

Leave a Comment