ಹೊಸನಗರ ; ತಾಲೂಕಿನ ಹುಂಚ ಗ್ರಾಮದ ಮಾರ್ನಮಿಬೈಲು ನಿವಾಸಿ ಧನುಷ್ ಎನ್.ಡಿ (25) ಎಂಬ ಯುವಕ ಜ.19 ರಂದು ಬೆಳಗ್ಗೆ ಮನೆಯಿಂದ ಶಿವಮೊಗ್ಗದ ಮಹೇಂದ್ರ ಶೋರೂಮ್ಗೆ ತೆರಳುವುದಾಗಿ ಹೇಳಿ ಹೊರಟು ಹೋಗಿದ್ದು ಈವರೆಗೂ ಮನೆಗೆ ಹಿಂದಿರುಗದೆ ಕಾಣೆಯಾಗಿರುವ ಘಟನೆ ನಡೆದಿದೆ.
ಧನುಷ್ ಶಿವಮೊಗ್ಗಕ್ಕೆ ತೆರಳಿದ ಬಳಿಕ ಕಾಣೆಯಾಗಿದ್ದು, ಸಂಬಂಧಿಕರು ಹಾಗೂ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಕಾಣೆಯಾದ ಯುವಕನ ತಂದೆ ದಿನೇಶ್ ಮರಗಿ ರಿಪ್ಪನ್ಪೇಟೆ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾಣೆಯಾದ ಯುವಕನ ಚಹರೆ ;
ಹೆಸರು : ಧನುಷ್ ಎನ್.ಡಿ ಬಿನ್ ದಿನೇಶ್ ಮರಗಿ
ವಯಸ್ಸು : 25 ವರ್ಷ
ಎತ್ತರ : ಸುಮಾರು 5 ಅಡಿ 7 ಇಂಚು
ಮೈಬಣ್ಣ : ಎಣ್ಣೆಗೆಂಪು
ಮುಖ : ಕೋಲು ಮುಖ
ಮೈಕಟ್ಟು : ಸಾಧಾರಣ
ಭಾಷೆ : ಕನ್ನಡ
ಉದ್ಯೋಗ : ಟಿಕ್ನಿಷಿಯನ್
ಈತನ ಬಗ್ಗೆ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕೆಳಕಂಡ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ:
ಪೊಲೀಸ್ ಉಪನಿರೀಕ್ಷಕರು ರಿಪ್ಪನ್ಪೇಟೆ ಪೊಲೀಸ್ ಠಾಣೆ 9480803365, ಪೊಲೀಸ್ ನಿರೀಕ್ಷಕರು, ಹೊಸನಗರ ವೃತ್ತ 9480803337, ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪವಿಭಾಗ 9480803340 ಇವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





