ಅಡಿಕೆ ಹಾಳೆ ತಟ್ಟೆಗೆ ಅಮೆರಿಕದಲ್ಲಿ ನಿಷೇಧ : ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ತೆರವುಗೊಳಿಸಿ!

Written by Koushik G K

Published on:

ಅಡಿಕೆ ಹಾಳೆ ತಟ್ಟೆಗಳಲ್ಲಿ ಅಲ್ಕಲೈಡ್ ಎಂಬ ಹಾನಿಕಾರಕ ವಸ್ತು ಇರುವದು ಕ್ಯಾನ್ಸರ್‌ ಗೆ ಕಾರಣವಾಗಬಹುದು ಎಂದು ಯುಎಸ್‌ಎ ಎಫ್‌ ಡಿಐ ಮಾಹಿತಿ ನೀಡಿ ಅಡಿಕೆ ಹಾಳೆ ತಟ್ಟೆಗಳನ್ನು ನಿಷೇಧಿಸಿದೆ .ಈ ಹಿನ್ನೆಲೆಯಲ್ಲಿ, ಭಾರತದಿಂದ ಆಮದಿಯಾಗುತ್ತಿರುವ ಅಡಿಕೆ ಹಾಳೆ ತಟ್ಟೆಗಳನ್ನು ನಿಷೇಧ ತೆರವು ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಸ್ಥಿಕೆ ವಹಿಸಲು ಜಿಲ್ಲಾ ಅಡಿಕೆ ಹಾಳೆ ತಟ್ಟೆ ತಯಾರಕರ ಮತ್ತು ವ್ಯಾಪಾರಿಗಳ ಸಂಘವು ಒತ್ತಾಯಿಸಿದೆ.

WhatsApp Group Join Now
Telegram Group Join Now
Instagram Group Join Now

ಯುಎಸ್ಎ ಎಫ್‌ಡಿಎ ಈ ಹಿಂದೆ ಮಾಡಿದ ಮಾರ್ಗದರ್ಶನವನ್ನು ಅನುಸರಿಸಿ, ಕರ್ನಾಟಕದ ಮಲೆನಾಡು ಭಾಗದಲ್ಲಿ ಅಡಿಕೆಮರದ ಹಾಳೆಯಿಂದ ತಟ್ಟೆಗಳ ತಯಾರಿಕೆಗೆ ಕಳೆದ 15 ವರ್ಷಗಳಿಂದ ತಯಾರು ಮಾಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ
ತಿಳಿಸಿದರು.

ಎಫ್‌ಡಿಎ ಆಮದು ನಿಷೇಧ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಅಡಿಕೆಹಾಳೆ ತಯಾರಕರಿಗೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಲಿದೆ. ಇತರ ಉತ್ಪನ್ನಗಳ ಲಾಭಕ್ಕಾಗಿ ಮತ್ತು ಭಾರತದ ವಿರುದ್ಧದ ವ್ಯಾಪಾರ ಯುದ್ಧದ ಫಲವಾಗಿ ಈ ಆಮದು ನಿಷೇಧವು ವೈಜ್ಞಾನಿಕ ದೃಷ್ಟಿಯಿಂದ ತಪ್ಪಾಗಿದೆ ಎಂದು ಅವರು ಹೇಳಿದರು.

ಅಡಿಕೆಹಾಳೆ ತಟ್ಟೆಗಳನ್ನು ರಫ್ತಿನಿಂದ ದೇಶೀಯವಾಗಿ ವಾರ್ಷಿಕ 3500 ಕೋಟಿ ರೂ. ವ್ಯಾಪಾರ ನಡೆಯುತ್ತಿದೆ. 17 ದೇಶಗಳು ಅಡಿಕೆಹಾಳೆ ತಟ್ಟೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದವು. ಎಫ್‌ಡಿಎ ನಿಷೇಧವನ್ನು ಹೇರಿದ ಪರಿಣಾಮ, ಉಳಿದ ರಾಷ್ಟ್ರಗಳು ಸಹ ಆಮದು ಮಾಡಿಕೊಳ್ಳಲು ಹಿಂದೆ
ಸರಿಯುತ್ತಿವೆ.

ಅಡಿಕೆಹಾಳೆ ತಟ್ಟೆ ತಯಾರಕರಿಗೆ ನಿರ್ಗತಿಕರಾಗುವ ಆತಂಕವು ಹೆಚ್ಚಾಗಿದೆ. ಜಿಲ್ಲಾ ಕೈಗಾರಿಕಾ ಸಂಘದ ಕಾರ್ಯದರ್ಶಿ ಎಸ್. ವಿಶ್ವೇಶ್ವರಯ್ಯ ಅವರು ಮಾತನಾಡಿದಂತೆ, ಜಿಲ್ಲೆಯಲ್ಲಿರುವ ಸುಮಾರು 2000ಕ್ಕೂ ಹೆಚ್ಚು ಅಡಿಕೆಹಾಳೆ ತಟ್ಟೆ ತಯಾರಿಕಾ ಘಟಕಗಳಲ್ಲಿ 60,000ಕ್ಕೂ ಹೆಚ್ಚು ಉದ್ಯೋಗಿಗಳು ಈ ಉದ್ಯೋಗವನ್ನು ಆಶ್ರಯಿಸಿದ್ದಾರೆ. ಆಮದುನಿಷೇಧವು ಈ ಘಟಕಗಳಿಗೆ ಭಾರಿ ನಷ್ಟವನ್ನು ಉಂಟುಮಾಡುವುದು ಖಚಿತವಾಗಿದೆ. ಉದ್ಯೋಗಿಗಳು ತಮ್ಮ ಉದ್ಯೋವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಅಡಿಕೆಹಾಳೆ ತಟ್ಟೆ ತಯಾರಿಕೆ ಸ್ಥಗಿತಗೊಂಡರೆ, ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಬೀದಿಗೆ ಬರಲಿದ್ದಾರೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಈ ನಿಷೇಧವನ್ನು ತೆರವುಗೊಳಿಸುವಂತೆ ಮನವಿ ಮಾಡಿಕೊಂಡರು.

Read More

ಗ್ರಾಮೀಣ ಪ್ರದೇಶದ ಲಕ್ಷಾಂತರ ಅನಧಿಕೃತ ಆಸ್ತಿದಾರರಿಗೆ ಗುಡ್ ನ್ಯೂಸ್!

ಹೊಸ ಹಣಕಾಸು ನೀತಿಯಿಂದ ನಿವೃತ್ತ ಸರ್ಕಾರಿ ನೌಕರರಿಗೆ ಜೇಬಿಗೆ ಕತ್ತರಿ!

ಉಚಿತ ವಾಹನ ಚಾಲನಾ ತರಬೇತಿ!

Leave a Comment