ರಿಪ್ಪನ್‌ಪೇಟೆ : ‘ಪ್ರತಿಯೋರ್ವರೂ ಸ್ವಧರ್ಮಾಚರಣೆಯನ್ನು ತ್ರಿಕರಣಪೂರ್ವಕ ಆಚರಿಸಬೇಕು. ಶ್ರದ್ಧಾಭಕ್ತಿಭಾವದ ಸದ್ಧರ್ಮಾಚರಣೆಯು ಜೈನ ಧರ್ಮದ ಸಿದ್ಧಾಂತವಾಗಿದೆ’ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ತಿಳಿಸಿದರು.
ಶಿರಹಟ್ಟಿ ಅಥಣಿ ಐನಾಪುರದಿಂದ 150 ಭಕ್ತರು ಪಾದಯಾತ್ರೆಯಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದರು. ಅವರನ್ನು ಉದ್ದೇಶಿಸಿ ‘ಜೀವನ ನಿರ್ವಹಣೆಯ ಅಡೆತಡೆಗಳ ನಿವಾರಣೆಗೆ ಶ್ರದ್ಧಾ ಭಕ್ತಿ ಭಾವದ ಸದ್ಧರ್ಮಾಚರಣೆಯೇ ಪರಿಹಾರ ಒದಗಿಸುತ್ತದೆ. ಸುಗಮ, ಸುರಕ್ಷಿತ ಜೀವನ ಸಾರ್ಥಕತೆ ಪಡೆಯಲು ಅತಿಶಯ ಶ್ರೀಕ್ಷೇತ್ರ ಹೊಂಬುಜ ದರ್ಶನಾರ್ಥಿಗಳಾಗಿ ಪ್ರತಿ ವರ್ಷವೂ ಆಗಮಿಸುತ್ತಿರುವುದು ಧರ್ಮಪ್ರಭಾವನೆಯ ಅಂಗವಾಗಿದೆ’ ಎಂದು ಉಪದೇಶಿಸಿದರು. ಸರ್ವರನ್ನೂ ಶ್ರೀಫಲ ಮಂತ್ರಾಕ್ಷತೆ ನೀಡಿ ಹರಸಿದರು.

ಶಿರಹಟ್ಟಿಯ ಮಿಲಿಂದ್ ಪಾಟೀಲ್, ರಾಜು ನಂದೇಶ್ವರ್ ಪಾದಯಾತ್ರೆ ತಂಡದಲ್ಲಿದ್ದು, ಶ್ರೀಗಳವರಿಗೆ ಭಕ್ತಿ ನಮನ ಸಲ್ಲಿಸಿದರು.
ಶ್ರೀಕ್ಷೇತ್ರದ ಎಲ್ಲಾ ಜಿನಮಂದಿರಗಳ ದರ್ಶನ ಮಾಡಿ, ಪ್ರಾರ್ಥನೆ ಸಲ್ಲಿಸಿದರು. ಅವರು ಅಂದಿನ ಪೂಜಾ ಹಾಗೂ ಭೋಜನ ಸೇವಾಕರ್ತೃಗಳಾಗಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.