ಹೊಸನಗರ

ಅಂಗವಿಕಲ ಯುವಕನ ಸೂರಿನ ಮೇಲೆ ಅರಣ್ಯ ಇಲಾಖೆ ಕಣ್ಣು: ಪೊಲೀಸರ ಭದ್ರತೆಯಲ್ಲಿ ತೆರವಿಗೆ ಯತ್ನ, ಸಿಡಿದೆದ್ದ ಗ್ರಾಮಸ್ಥರು

ಹೊಸನಗರ ತಾಲೂಕಿನ ಹಾಲಂದೂರು ಗ್ರಾಮದಲ್ಲಿ ವಸತಿಹೀನ ಅಂಗವಿಕಲ ಯುವಕ ವಾಸಿಸುತ್ತಿದ್ದ ಶೆಡ್ ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಮತ್ತು ಗ್ರಾಮಸ್ಥರ ಮಾತುಕತೆಯ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೂ, ವಿವಾದ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ.

InShot 20260905 215635902

ಹೊಸನಗರ : ತಾಲೂಕಿನ ಅಮೃತ (ಗರ್ತಿಕೆರೆ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಂದೂರು ಗ್ರಾಮದ ಸ.ನಂ.49ರಲ್ಲಿ ಬುಧವಾರ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ತೀವ್ರ ವಾಕ್ಸಮರ ಹಾಗೂ ಹೈಡ್ರಾಮಾ ನಡೆದಿದೆ. ವಸತಿಹೀನ ಅಂಗವಿಕಲ ಯುವಕನ ಆಶ್ರಯ ತಾಣವನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದೇ ಈ ಬಿಗುವಿನ ವಾತಾವರಣಕ್ಕೆ ಕಾರಣವಾಯಿತು.

WhatsApp Group Join Now
Telegram Group Join Now
Instagram Group Join Now

ಏನಿದು ಘಟನೆ ?

ವಿಕಲಚೇತನನ ಆಸರೆಗೆ ಕುತ್ತು :

📢 Stay Updated! Join our WhatsApp Channel Now →

ಹಾಲಂದೂರು ನಿವಾಸಿ ಲೋಕೇಶ್ ಎಂಬುವವರ ಮಗನಾದ ಅಂಗವಿಕಲ ಸುನೀಲ್ ಕುಮಾರ್, ಕಳೆದ 15 ವರ್ಷಗಳಿಂದ ಇಲ್ಲಿನ ಸಣ್ಣ ಜಾಗದಲ್ಲಿ ಶೆಡ್ ಹಾಕಿಕೊಂಡು ಜೀವನ ನಡೆಸುತ್ತಿದ್ದ.

ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ:

ಬುಧವಾರ ದಿಢೀರನೆ ಪೊಲೀಸ್ ಪಡೆಯೊಂದಿಗೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಈ ಶೆಡ್ ಅನ್ನು ಕೆಡವಿ ಆ ಜಾಗದಲ್ಲಿ ಸಸಿಗಳನ್ನು ನೆಡಲು ಮುಂದಾದರು.

ಗ್ರಾಮಸ್ಥರ ಪ್ರತಿಭಟನೆ:

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು, ಅಸಹಾಯಕ ಯುವಕನ ಪರ ನಿಂತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತೀವ್ರ ವಿರೋಧ ವ್ಯಕ್ತಪಡಿಸಿದರು.

ಅಧಿಕಾರಿಗಳ ತಾತ್ಕಾಲಿಕ ಭರವಸೆ:

ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ACF ಹಾಗೂ ಹೊಸನಗರ RFO ಅವರು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಯುವಕನಿಗೆ ಮನೆ ಕಟ್ಟಿಕೊಳ್ಳಲು ಸಾಕಷ್ಟು ಜಾಗ ಬಿಟ್ಟುಕೊಟ್ಟು, ಉಳಿದ ಪ್ರದೇಶದಲ್ಲಿ ಮಾತ್ರ ಸಸಿ ನೆಡುವುದಾಗಿ ಭರವಸೆ ನೀಡಿದರು. ಇದರಿಂದ ಜನರು ಕೊಂಚ ಶಾಂತರಾದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಅಧಿಕಾರಿಗಳ ‘ಯೂ-ಟರ್ನ್’ ಮತ್ತೆ ಮರುಕಳಿಸಿದ ಆಕ್ರೋಶ:

ಉಳಿದ ಜಾಗದಲ್ಲಿ ಸಸಿಗಳನ್ನು ನೆಟ್ಟ ಬಳಿಕ ಅಧಿಕಾರಿಗಳು ತಮ್ಮ ಭರವಸೆಯಿಂದ ಹಿಂದೆ ಸರಿದರು. “ಕಾನೂನಿನ ಪ್ರಕಾರ ಜಾಗ ಬಿಟ್ಟುಕೊಡಲು ನಮಗೆ ಅಧಿಕಾರವಿಲ್ಲ, ನೀವು ಮೇಲಾಧಿಕಾರಿಗಳನ್ನೇ ಕೇಳಿಕೊಳ್ಳಿ” ಎಂದು ಸಬೂಬು ಹೇಳಿದ್ದು ಗ್ರಾಮಸ್ಥರ ಆಕ್ರೋಶದ ಕಟ್ಟೆಯೊಡೆಯುವಂತೆ ಮಾಡಿತು. ರೊಚ್ಚಿಗೆದ್ದ ಜನರು ಅರಣ್ಯ ಇಲಾಖೆ ನೆಟ್ಟಿದ್ದ ಸಸಿಗಳನ್ನು ಕಿತ್ತೊಗೆಯಲು ಮುಂದಾದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಉದ್ರಿಕ್ತರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.

ಗ್ರಾಮಸ್ಥರ ಆಗ್ರಹ:

ಸದ್ಯಕ್ಕೆ ಯುವಕನ ಮನೆಗೆ ಜಾಗವನ್ನು ಉಳಿಸಲಾಗಿದ್ದು, ಮೇಲಾಧಿಕಾರಿಗಳೊಂದಿಗೆ ಚರ್ಚಿಸುವಂತೆ ಸೂಚಿಸಲಾಗಿದೆ. ಆದರೆ ಸ್ಥಳದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ಮುಂದುವರಿದಿದೆ. ಜಿಲ್ಲಾ ಅರಣ್ಯಾಧಿಕಾರಿಗಳು (DFO) ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಬೇಕು ಹಾಗೂ ಬಡ ವಿಕಲಚೇತನ ಯುವಕನಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಸ್ಥಳೀಯರ ಒಕ್ಕೊರಲ ಆಗ್ರಹವಾಗಿದೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]