
ಶಿವಮೊಗ್ಗ: ಬ್ಯಾಂಕ್ ನೌಕರರ ಪ್ರತಿಭಟನೆ: ಬಿ.ಹೆಚ್. ರಸ್ತೆಯಿಂದ ಗೋಪಿ ಸರ್ಕಲ್‌ವರೆಗೆ ಮೆರವಣಿಗೆ
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಕರೆ ನೀಡಿದ್ದ ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಶಿವಮೊಗ್ಗದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿ.ಹೆಚ್. ರಸ್ತೆಯ ಎಸ್‌ಬಿಐ ಶಾಖೆ ಎದುರು ಜಮಾಯಿಸಿದ 500ಕ್ಕೂ ಹೆಚ್ಚು ಬ್ಯಾಂಕ್ ನೌಕರರು ಗೋಪಿ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.









