Mahesha Hindlemane ಅವರ ಸುದ್ದಿಗಳು

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

ಹೊಸನಗರ

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಹೋರಾಟಕ್ಕೆ ಬೆಂಬಲವಾಗಿ ನಾವು ಭಾಗಿಯಾಗುತ್ತೇವೆ ; ಕಲಗೋಡು ರತ್ನಾಕರ್

ಹೊಸನಗರ ; ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಎಲ್ಲ ಕೆಲಸಗಳಲ್ಲಿಯೂ ಭಾಗಿಯಾಗುತ್ತಿದ್ದಾರೆ. ಆದರೆ ಸಂಬಳ ಕಡಿಮೆ ನೀಡುತ್ತಿದ್ದು ಅವರನ್ನು ಖಾಯಂ ನೌಕರರಾಗಿ ಪರಿಗಣಿಸಿ ಸಂಬಳ ಹೆಚ್ಚಳ ಮಾಡಲೂ ಅವರ ಎಲ್ಲ ಹೋರಾಟಗಳಿಗೂ ನಾವು ಬೆಂಬಲವಾಗಿ…

ಹೊಸನಗರ

ಪ್ರತಿಭಾವಂತ ಮಕ್ಕಳ ಸನ್ಮಾನ ಅಭಿವೃದ್ಧಿಯ ಸಂಕೇತ : ಕೆ.ವಿ. ಕೃಷ್ಣಮೂರ್ತಿ

ಹೊಸನಗರ ; ಯಾವುದೇ ಸಂಘ-ಸಂಸ್ಥೆಗಳಾಗಿರಲಿ ಅಥವಾ ಸರ್ಕಾರಗಳೇ ಆಗಿರಲಿ ಪ್ರತಿಭಾವಂತ ಮಕ್ಕಳನ್ನು ಗುರುತಿಸುವುದರಿಂದ ಮಕ್ಕಳ ಭವಿಷ್ಯ ಉಜ್ವಲವಾಗುವುದರ ಜೊತೆಗೆ ಸಮಾಜದ ವಿಕಾಸ ಹಾಗೂ ಅಭಿವೃದ್ಧಿಯ ಸಂಕೇತ ಎಂದು ಮಲೆನಾಡು ಅಡಿಕೆ ಮಾರಾಟದ ಸಹಕಾರ…

ಭದ್ರಾವತಿ

ಅಡಿಕೆ ತೋಟದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದ ರೀತಿಯಲ್ಲಿ ಪತ್ತೆಯಾಯ್ತು ಉಪನ್ಯಾಸಕನ ಮೃತದೇಹ !

ಭದ್ರಾವತಿ ; ಕಾಲೇಜು ಉಪನ್ಯಾಸಕನ ಮೃತದೇಹ ಅಡಿಕೆ ತೋಟದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಹನುಮಂತಾಪುರದಲ್ಲಿ ನಡೆದಿದೆ. ಸುರೇಶ್ (58) ಮೃತ…

Ripponpete

ರಿಪ್ಪನ್‌ಪೇಟೆ ಸುಶೀಲಮ್ಮರಿಗೆ ಶಿವಶರಣೆ ಅಕ್ಕಮ್ಮ ರಾಜ್ಯ ಪ್ರಶಸ್ತಿ ಪ್ರದಾನ

ರಿಪ್ಪನ್‌ಪೇಟೆ ; ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸಂಘಟನೆ ಮತ್ತು ಸಮಾಜ ಸೇವೆಯನ್ನು ಗುರುತಿಸಿ ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಮುಡಾಗ್ರೆ ಸುಶೀಲಮ್ಮ ಕೆ. ಇವರಿಗೆ ಶಿವಶರಣೆ ಅಕ್ಕಮ್ಮ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರು…

ಹೊಸನಗರ

ಮಾ.31ರಂದು ಸಿ.ಡಿ.ಎಸ್ ಸಮುದಾಯ ಭವನದಲ್ಲಿ ಮತದಾರರ ಪಟ್ಟಿ ಮ್ಯಾಪಿಂಗ್ ಕ್ಯಾಂಪ್ ; ಹೊಸನಗರ ತಹಸೀಲ್ದಾರ್ ಭರತ್‌ರಾಜ್

ಹೊಸನಗರ ; ರಾಜ್ಯಾದ್ಯಂತ ಮತದಾರ ಪಟ್ಟಿಯ ಮ್ಯಾಪಿಂಗ್ ನಡೆಯುತ್ತಿದ್ದು ಹೊಸನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮತಗಟ್ಟೆಗಳಲ್ಲಿ ಪ್ರಗತಿ ಕಡಿಮೆಯಾಗಿದ್ದು ಬಾಕಿ ಉಳಿದಿರುವ ವ್ಯಾಪಿಂಗ್ ಪೂರ್ಣಗೊಳಿಸುವ ಉದ್ದೇಶದಿಂದ ಹಾಗೂ ಪ್ರಗತಿ ಸಾಧಿಸಲು…

ಹೊಸನಗರ

ಹೊಸನಗರ ಸಾರ್ವಜನಿಕ ಆಸ್ಪತ್ರೆಯ ಪ್ರಧಾನ ಆಡಳಿತಾಧಿಕಾರಿಯಾಗಿ ಡಾ. ಹೇಮಂತ್ ನೇಮಕ

ಹೊಸನಗರ : ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಪ್ರಧಾನ ಆಡಳಿತಾಧಿಕಾರಿಯಾಗಿ ಸುಮಾರು 5 ವರ್ಷಗಳಿಂದ ಸರ್ಜನ್ ಹಾಗೂ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಎಸ್.ಎನ್ ಹೇಮಂತ್‌ರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಪ್ರಧಾನ…

ಶಿವಮೊಗ್ಗ

ತಂದೆ ಸಾವಿನ ನೋವಲ್ಲೂ SSLC ಪರೀಕ್ಷೆ ಬರೆದ ವಿದ್ಯಾರ್ಥಿ !

ಶಿವಮೊಗ್ಗ ; ವಿದ್ಯಾರ್ಥಿಯೋರ್ವ ತಂದೆ ಸಾವಿನ ದುಃಖದಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಘಟನೆ ನಡೆದಿರುವುದು ಶಿವಮೊಗ್ಗದಲ್ಲಿ ನಡೆದಿದೆ. ಹೌದು, ಇಂದು ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ಇತ್ತು. ಈ ನಡುವೆ ಶಿವಮೊಗ್ಗ ತಾಲ್ಲೂಕಿನ ಮಂಡಘಟ್ಟ ಪ್ರೌಢಶಾಲೆಯ ವಿದ್ಯಾರ್ಥಿ…

ಹೊಸನಗರ

ಗ್ರಾಮೀಣ ಭಾಗದ ಶಾಲೆಗಳ ಸಮಗ್ರ ಅಭಿವೃದ್ಧಿಯಲ್ಲಿ ಸಂಘ-ಸಂಸ್ಥೆಗಳ ಪಾತ್ರ ನಿರ್ಣಾಯಕ ; ಡಾ. ಬಿ.ಆರ್. ಅಂಬೇಡ್ಕರ್ ಆದಿಜಾಂಬವ ಸಮಿತಿ ರಾಜ್ಯಾಧ್ಯಕ್ಷ ಎನ್. ಪ್ರಕಾಶ್

ಹೊಸನಗರ ; ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಂಘ-ಸಂಸ್ಥೆಗಳ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಅಲ್ಲದೆ, ಹಳೇ ವಿದ್ಯಾರ್ಥಿಗಳು, ದಾನಿಗಳು, ಮೇಲ್ವಿಚಾರಣಾ ಸಮಿತಿಗಳ ಮೂಲಕ ಮೂಲ ಸೌಕರ್ಯ ಕಲ್ಪಿಸುವುದು, ಗುಣಮಟ್ಟದ ಶಿಕ್ಷಣಕ್ಕೆ ಬೆಂಬಲ…

ಹೊಸನಗರ

ಹೊಸನಗರ ಕೋಟೆಗಾರ್ ಯುವಕ ಸಂಘದಿಂದ ರಾಮನವಮಿ ಆಚರಣೆ | ಸಮಾಜದ ಜನರನ್ನು ಒಂದುಗೂಡಿಸಲು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರಬೇಕು ; ಶಶಿಧರ್ ನಾಯ್ಕ್

ಹೊಸನಗರ ; ಸಮಾಜದ ಜನರನ್ನು ಒಂದು ಗೂಡಿಸುವ ಸಲುವಾಗಿ ಧಾರ್ಮಿಕ ಕಾರ್ಯಕ್ರಮ ಮಾಡುವುದರಿಂದ ಸಾಧ್ಯ ಎಂದು ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿಧರ್‌ನಾಯ್ಕ್ ಹೇಳಿದರು. ಕೋಟೆಗಾರ್ ಯುವಕ ಸಂಘ, ಕೋಟೆಗಾರ್ ವಿದ್ಯಾವರ್ಧಕ ಸಂಘ…

Ripponpete

ರಿಪ್ಪನ್‌ಪೇಟೆ ; ಲಕ್ಕಿ ಡಿಪ್ ಪೂಜಾರಪ್ಪಗೆ ಒಲಿದ ಅದೃಷ್ಟ

ರಿಪ್ಪನ್‌ಪೇಟೆ ; ಕಲಾಕೌಸ್ತುಭ ಕನ್ನಡ ಸಂಘದವರು ಕಳೆದ ನವೆಂಬರ್ ಕನ್ನಡ ರಾಜ್ಯೋತ್ಸವ ಮತ್ತು ಕಲಾಕೌಸ್ತುಭ ಕನ್ನಡ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಕನ್ನಡಾಭಿಮಾನಿಗಳ ಮಿತ್ರ ಬಳಗದವರಿಗಾಗಿ ಲಕ್ಕಿ ಡಿಪ್ ಟಿಕೆಟ್ ಮಾರಾಟ ಮಾಡಲಾಗಿದ್ದು…