HOSANAGARA ; ತಾಲ್ಲೂಕಿನ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯನ್ನು ನಮ್ಮ ಸಮುದಾಯದ ಭಕ್ತ ಕುಟುಂಬವಾಗಿದ್ದು ಈ ದೇವಸ್ಥಾನದ ವಿಷಯದಲ್ಲಿ ನಾನು ದುಡ್ಡು ಹೊಡೆದುಕೊಂಡು ತಿಂದಿರುವ ಹಾಗೆ ದೇವಸ್ಥಾನ ವ್ಯವಸ್ಥಾಪವ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಿ.ಸ್ವಾಮಿರಾವ್‌ರವರು ಪತ್ರಿಕಾ ಹೇಳಿಕೆ ನೀಡುತ್ತಿದ್ದು ಮುಂದಿನ ದಿನದಲ್ಲಿ ಆ ತಾಯಿಯೇ ಅವರಿಗೆ ತಕ್ಕ ಶಿಕ್ಷೆ ನೀಡಲಿದ್ದಾರೆ. ದೇವಸ್ಥಾನದ ವಿಷಯದಲ್ಲಿ ನನ್ನ ತೇಜೋವಧೆ ಇನ್ನೂ ಮುಂದೆ ಸಹಿಸುವುದಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು 2012ರಿಂದ 2022ರವರೆಗೆ ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷನಾಗಿ ನಾನು ಸೇವೆ ಮಾಡಿದ್ದೇನೆ. ಸಾಕಷ್ಟು ಹಣವನ್ನು ಸರ್ಕಾರದಿಂದ ಹಾಗೂ ದೇಣಿಗೆಯ ರೂಪದಲ್ಲಿ ತಂದು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ನನ್ನ ಆಡಳಿತಾವಧಿಯಲ್ಲಿ ಯಾವುದೇ ಪಕ್ಷಪಾತ ಮಾಡದೇ ಎಲ್ಲ ಪಕ್ಷದವರನ್ನು ಎಲ್ಲ ಜಾತಿಯವರನ್ನು ಒಟ್ಟುಗೂಡಿಸಿಕೊಂಡು ದೇವಸ್ಥಾನದ ಏಳಿಗೆಗಾಗಿ ಕೆಲಸ ಮಾಡಿದ್ದೇನೆ. ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಬಳಿ 16 ಲಕ್ಷ ರೂ. ಇದೆ. ದೇವಸ್ಥಾನದ ಅಭಿವೃದ್ದಿಗೆ ಹಣ ನೀಡುತ್ತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಬಿ.ಸ್ವಾಮಿರಾವ್ ನಮ್ಮ ವಿರುದ್ಧ ದೂರಿದ್ದು ಆದರೆ ನಾವು ಇವರಿಗೆ ಹಣ ಕೊಡಲು ಬರುವುದಿಲ್ಲ. ನಾವು ಕಂದಾಯ ಇಲಾಖೆಯ ಖಜಾನೆಗೆ ಅಥವಾ ಶಾಸಕರಿಗೆ ಲೆಕ್ಕ ನೀಡಬೇಕೆ ಹೊರತು ಇವರು ಕೇಳಿದ ತಕ್ಷಣ ಹಣ ಕೊಡಲು ಬರುವುದಿಲ್ಲ ಎಂದರು.
10 ವರ್ಷಗಳಲ್ಲಿ ಎಷ್ಟು ಅಭಿವೃದ್ಧಿಯಾಗಿದೆ :
ನನ್ನ 10 ವರ್ಷಗಳ ಜೇನುಕಲ್ಲಮ್ಮ ದೇವಸ್ಥಾನ ಸಮಿತಿಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು ಈ ಅವಧಿಯಲ್ಲಿ ರೂ. 5.50 ಕೋಟಿಯಷ್ಟು ಕೆಲಸ ಮಾಡಿಸಿದ್ದೇವೆ. 3 ಕೋಟಿಯಷ್ಟು ಹಣವನ್ನು ಸರ್ಕಾರದಿಂದ ತಂದು ಉತ್ತಮ ರಸ್ತೆ ಮಾಡಿಸಿದ್ದೇವೆ. 70 ಲಕ್ಷದಷ್ಟು ಹಣ ವ್ಯಯ ಮಾಡಿ ದೇವಸ್ಥಾನ ಅಭಿವೃದ್ಧಿಪಡಿಸಿದ್ದೇವೆ. ಊಟದ ವ್ಯವಸ್ಥೆಗೆ ಹಾಲ್ ಇರಲಿಲ್ಲ ಸಾರ್ವಜನಿಕರಿಗೆ ಊಟದ ಕೊಠಡಿ ನಿರ್ಮಿಸಿದ್ದೇವೆ. ಈ ಜೇನುಕಲ್ಲಮ್ಮ ದೇವಸ್ಥಾನದ ಸರ್ವೆ ನಂಬರ್ 63ರ 27ಎಕರೆ ಪ್ರದೇಶ ಅರಣ್ಯ ಭೂಮಿಯಾಗಿದ್ದು ಮಾಜಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪನವರ ಕೃಪಕಟಾಕ್ಷದಿಂದ ಅರಣ್ಯ ಭೂಮಿಯ ಖಾತೆಯನ್ನು ಸರ್ಕಾರಿ ಭೂಮಿಯನ್ನಾಗಿ ಪರಿವರ್ತಿಸಿದ್ದೇವೆ. ನೀರಿನ ವ್ಯವಸ್ಥೆಗಾಗಿ ಬೋರ್‌ವೇಲ್‌ಗಳನ್ನು ತೆಗೆಸಲಾಗಿದೆ. ಒಂದು ಸುಂದರ ದೇವಸ್ಥಾನವನ್ನಾಗಿ ಮಾಡಲು ಶ್ರಮಿಸಿದ್ದೇವೆ. ನಮ್ಮ ಅವಧಿ 8 ಲಕ್ಷ ವೆಚ್ಚದಲ್ಲಿ ಹಳೆಯ ಚಿನ್ನವನ್ನು ತೆಗೆದು ದೇವಿಗೆ ಎರಡು ಚಿನ್ನದ ಸರವನ್ನು ಮಾಡಿಸಿದ್ದೇವೆ. ಅಂದು 28 ಲಕ್ಷ ಹಣವನ್ನು ಕಂದಾಯ ಇಲಾಖೆಯ ಖಜಾನೆಗೆ ಜಮಾ ಮಾಡಲಾಗಿದೆ. ಈ ದೇವಸ್ಥಾನವನ್ನು ಪ್ರವಾಸೋದ್ಯಮ ಮಾಡಬೇಕೆನ್ನುವ ಉದ್ದೇಶದಿಂದ ಹಾಗೂ ಕರ್ನಾಟಕ ರಾಜ್ಯದಲ್ಲಿಯೇ ಈ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಬಂದು ಪೂಜೆ ಸಲ್ಲಿಸುತ್ತಿರುವುದರಿಂದ ದೇವಸ್ಥಾನದ ಏಳಿಗೆಗಾಗಿ ಶ್ರಮಿಸಿದ್ದೇವೆಯೇ ಹೊರತು ದೇವಸ್ಥಾನದ ಗಂಟು ತಿನ್ನಲು ಎಂದು ಸಂಚು ಮಾಡಿಲ್ಲ ಎಂದರು.
ಶಾಸಕರಿಗೆ ಕಿಮ್ಮತ್ತಿಲ್ಲ :
ಈ ದೇವಸ್ಥಾನ ಕಮಿಟಿಯಲ್ಲಿ ಶಾಸಕರು ಗೌರವಾಧ್ಯಕ್ಷರಾಗಿರುತ್ತಾರೆ. ಆದರೇ ನಮ್ಮ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಶಾಸಕರಾಗಿ ಒಂದೂವರೆ ವರ್ಷ ಕಳೆಯುತ್ತಾ ಬಂದಿದ್ದು ಇಲ್ಲಿಯವರೆಗೆ ದೇವಸ್ಥಾನಕ್ಕೆ ಕರೆದು ಒಂದು ಶಾಲು ಹಾಕಿಲ್ಲ ಗೌರವಯುತವಾಗಿ ನಡೆದುಕೊಂಡಿಲ್ಲ. ಮುಂದಿನ ದಿನದಲ್ಲಿ ಶಾಸಕರಾದ ಬೇಳೂರು ಗೋಪಾಲಕ್ರಷ್ಣರವರು ತುರ್ತು ಸಭೆ ಕರೆಯಲಿದ್ದಾರೆ ಎಂದರು.
ಮೂರು ಗ್ರಾ.ಪಂ.ಗೆ ಒಂದೇ ದೇವಸ್ಥಾನ:
ಹೊಸನಗರ ತಾಲ್ಲೂಕಿನ ಜೇನುಕಲ್ಲಮ್ಮ ದೇವಸ್ಥಾನ ಮಾರುತಿಪುರ, ಮುಂಬಾರು ಹಾಗೂ ಕೋಡೂರು ಮೂರು ಗ್ರಾಮ ಪಂಚಾಯತಿಗೆ ಒಳಪಡುತ್ತದೆ. ಈ ಮೂರು ಗ್ರಾಮ ಪಂಚಾಯತಿಯ ಅದ್ಯಕ್ಷರು ಈ ದೇವಸ್ಥಾನದ ಸಮಿತಿಯ ಸದಸ್ಯರಾಗಿರುತ್ತಾರೆ ಆದರೇ ಸೌಜನ್ಯಕ್ಕೂ ಇವರನ್ನು ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ. ಇವರಿಗೆ ಬೇಕಾದವರಿಗೆ ಮಾತ್ರ ಆಹ್ವಾನ ನೀಡುತ್ತಾರೆ ಎಂದು ದೂರಿದರು.
ಮಾಜಿ ಶಾಸಕ ಹರತಾಳು ಹಾಲಪ್ಪನವರಿಂದ ಒಡಕು :
ಮಾಜಿ ಶಾಸಕರಾದ ಹರತಾಳು ಹಾಲಪ್ಪನವರು ಶಾಸಕರಾಗಿದ್ದಾಗ ನೂತನ ದೇವಸ್ಥಾನ ಕಮಿಟಿ ರಚಿಸಲಾಯಿತು. ಹಿಂದಿನ ಕಮಿಟಿಯಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಯಾವುದೇ ಜಾತಿಯತೆ ಪಕ್ಷ ಭೇದವಿಲ್ಲದೆ ಎಲ್ಲ ಗ್ರಾಮದ ಸದಸ್ಯರನ್ನು ಒಳಗೊಂಡ ಸಮಿತಿ ಇತ್ತು ಆ ಕಮಿಟಿಯನ್ನು ರದ್ದುಪಡಿಸಿದ ಶಾಸಕ ಹರತಾಳು ಹಾಲಪ್ಪನವರು 2012ರ ಕಮಿಟಿಯನ್ನು ರದ್ದುಪಡಿಸಿ ಹೊಸ ಕಮಿಟಿ ರಚಿಸಲಾಯಿತು. ಬಿ.ಸ್ವಾಮಿರಾವ್‌ರವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಆದರೆ ಅವರಿಗೆ ಬೇಕಾದವರನ್ನು ಮಾತ್ರ ಸಮಿತಿಯಲ್ಲಿ ಇಟ್ಟುಕೊಳ್ಳಲಾಯಿತು. ಇದಕ್ಕೆ ನಾವು ತಕರಾರು ಮಾಡಿದಾಗ 5 ಜನರ ಪಟ್ಟಿ ಕಳುಹಿಸಿಕೊಡಿ ಎಂದು ಹೇಳಿದರು ನಾವು ಐದು ಜನರ ಪಟ್ಟಿ ಕಳುಹಿಸಿಕೊಟ್ಟರೇ ಇಲ್ಲಿಯವರೆಗೂ ನೂತನ ಸಮಿತಿಯಲ್ಲಿ 5 ಜನರನ್ನು ಸೇರಿಸಿಕೊಳ್ಳದೇ ಹಳೆಯ ಸಮಿತಿಯವರನ್ನೇ ಮುಂದುವರೆಸಿದ್ದು ಇಷ್ಟೆಲ್ಲ ಜಂಜಾಟಕ್ಕೆ ಕಾರಣವಾಗಿದೆ ಎಂದರು.
ಕಟ್ಟಡಕ್ಕೆ ನಯಪೈಸೆ ಹಾಕಿಲ್ಲ :
ನೂತನ ಸಮಿತಿ ರಚನೆಯಾದ ತಕ್ಷಣ ನಾವು ಸರ್ಕಾರದಿಂದ ಆರು ಕೋಟಿ ರೂ. ಹಣ ತಂದು ದೇವಸ್ಥಾನ ಕಟ್ಟುತ್ತೇವೆ ಎಂದು ಹೇಳಿದವರು ಇಂದಿಗೂ ನಯಪೈಸೆ ಹಣ ಸರ್ಕಾರದಿಂದ ತಂದಿಲ್ಲ. ನಾವು ದೇಣಿಗೆ ರೂಪದ ಹಣ ಹಾಗೂ ಅಂದು ತಂದಿರುವ ಹಣದಲ್ಲಿ ದೇವಸ್ಥಾನದ ಕಟ್ಟಡ ಕಾಮಗಾರಿ ಕೆಲಸ ನಡೆಸುತ್ತಿದ್ದಾರೆ. ಮುಂದಿನ ದಿನದಲ್ಲಿ ನಮ್ಮ ಶಾಸಕರ ಮೂಲಕ ಸರ್ಕಾರದಿಂದ ಹಣ ತರುವ ವ್ಯವಸ್ತೆ ಮಾಡುತ್ತೇವೆ ಎಂದರು.
Author Profile

- ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.
Latest entries
HosanagaraMay 25, 2025ಎಸ್ಎಸ್ಎಲ್ಸಿ ಮರು ಮೌಲ್ಯಮಾಪನ : ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದ ವೈಷ್ಣವಿಗೆ ಸನ್ಮಾನ
RipponpeteMay 25, 2025ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ; SSLC ಮೌಲ್ಯಮಾಪಕರ ವಿರುದ್ಧ ಕ್ರಮ ಜರುಗಿಸಲು ಆಗ್ರಹ
Crime NewsMay 25, 2025ಮದುವೆಯಾಗುವಂತೆ ಅಪ್ರಾಪ್ತೆಗೆ ಒತ್ತಾಯಿಸಿ ಜೀವಬೆದರಿಕೆ ; ಯುವಕನ ಬಂಧನ !
Chikmagaluru NewsMay 25, 2025ಮಹಾಮಳೆಗೆ ಕಾಫಿನಾಡಿನಲ್ಲಿ ಮೂರನೇ ಬಲಿ ; ಆಟೋ ಮೇಲೆ ಮರ ಬಿದ್ದು ಚಾಲಕ ಸಾವು !