ರಿಪ್ಪನ್‌ಪೇಟೆ ; ಬಾಳೂರು ಗ್ರಾಮದಲ್ಲಿ ನಿರ್ಮಿಸಲಾಗಿರುವ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ಕಟ್ಟದ ನಿರ್ವಹಣೆಯಿಲ್ಲದೆ ಕಿಟಕಿ, ಬಾಗಿಲುಗಳು ಮುರಿದು ಉದುರಿ ಬೀಳುತ್ತಿವೆ.
ಹೌದು, ಪ್ರಾಥಮಿಕ ಆರೋಗ್ಯ ಉಪಕೇಂದ್ರ ಕಟ್ಟಡದ ಒಳಭಾಗದಲ್ಲಿನ ಒಳರೂಪ್ ಮರದ ಹಲಗೆಗಳು ಮತ್ತು ಹಿಂಬಾಗಿಲು ಮತ್ತು ನೀರಿನ ತೋಟಿ ಸಹ ಸಂಪೂರ್ಣವಾಗಿ ನಿರ್ವಹಣೆಯಿಲ್ಲದೆ ಉದುರಿ ಬೀಳುತ್ತಿವೆ. ಇನ್ನೂ ಈ ಪ್ರಾಥಮಿಕ ಉಪಕೇಂದ್ರ ವ್ಯಾಪ್ತಿಗೆ ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆವಟೂರು, ಕಾಳೇಶ್ವರ, ಹಾಲುಗುಡ್ಡೆ ಮಾದ್ಲಾರದಿಂಬ, ಬಾಳೂರು, ಕುಕ್ಕಳಲೆ, ನೇರಲುಮನೆ ಸೇರಿದಂತೆ ಮಜರೆ ಗ್ರಾಮಗಳ ಸುಮಾರು 8 ರಿಂದ 10 ಸಹಸ್ರ ಜನಸಂಖ್ಯೆ ಹೊಂದಿದ್ದು ಇಲ್ಲಿನ ಆರೋಗ್ಯ ಉಪಕೇಂದ್ರದಲ್ಲಿ ಸಮುದಾಯ ಆರೋಗ್ಯಾಧಿಕಾರಿ ಇಲ್ಲದೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಉಪಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಆರೋಗ್ಯಾಧಿಕಾರಿ ಹೇಳದ ಕೇಳದೆ ಹೋಗಿದ್ದು ಇದರಿಂದಾಗಿ ಆರೋಗ್ಯ ಕಾರ್ಯಕರ್ತೆಯೊಬ್ಬರೆ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ. ಒಂದು ಕಡೆ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ನಿಯೋಜಿಸುತ್ತಾರೆ ಮತ್ತು ಸರ್ಕಾರ ಇಲಾಖೆಯ ಮಾಹಿತಿಯನ್ನು ಪ್ರತಿ ಹಳ್ಳಿ-ಹಳ್ಳಿ ಸುತ್ತಿ ಪಡೆದು ಮಾಹಿತಿ ನೀಡುವುದು ಈ ಎಲ್ಲಾ ಕೆಸಲವನ್ನು ಮಾಡಿ ಸಾರ್ವಜನಿಕರಿಂದಲೂ ದೂರು ಬಾರದಂತೆ ಕರ್ತವ್ಯವನ್ನು ನಿರ್ವಿಘ್ನದಿಂದ ನಿರ್ವಹಿಸಿದರೂ ಕೂಡಾ ಗ್ರಾಮಸ್ಥರು, ಸಾರ್ವಜನಿಕರಿಂದ ಆರೋಪ ಕೇಳಿ ಬಂದ ಕಾರಣ ತೀವ್ರ ಆಸಮದಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ.