ಸಾಗರ :ಬಂಗಲಗಲ್ಲು–ಚದರವಳ್ಳಿ ರಸ್ತೆ ದುಸ್ಥಿತಿ: ಕೆಸರುಗದ್ದೆಯಂತಾದ ರಸ್ತೆ !

Written by Koushik G K

Published on:

ಸಾಗರ :ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಸೇತುವೆ-ವಿಮಾನ ನಿಲ್ದಾಣಗಳ ನಿರ್ಮಾಣವಾಗುತ್ತಿದ್ದರೂ, ಮಲೆನಾಡಿನ ಹಳ್ಳಿಗಳ ಮೂಲಸೌಕರ್ಯ ಸಮಸ್ಯೆಗಳು ಇನ್ನೂ ಬಗೆಹರಿಯುತ್ತಿಲ್ಲ. ಇದಕ್ಕೆ ಉದಾಹರಣೆಯೇ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗಲಗಲ್ಲು–ಚದರವಳ್ಳಿ ಸಂಪರ್ಕ ರಸ್ತೆ.

WhatsApp Group Join Now
Telegram Group Join Now
Instagram Group Join Now

ಶಾಸಕರು ಇತ್ತ ಗಮನ ಹರಿಸದೆ ಇದ್ದರೆ ಹೋರಾಟ ಅನಿವಾರ್ಯ ಎನ್ನುತ್ತಿದ್ದಾರೆ ಗ್ರಾಮಸ್ಥರು

📢 Stay Updated! Join our WhatsApp Channel Now →

ಸುಮಾರು 5 ಕಿಲೋಮೀಟರ್ ಉದ್ದದ ಈ ರಸ್ತೆ 75 ಕ್ಕೂ ಹೆಚ್ಚು ಮನೆಗಳಿಗೆ ಜೀವನಾಡಿಯಂತಿದ್ದರೂ, ಇಂದಿಗೂ ಡಾಂಬರಿನ ಸ್ಪರ್ಶ ಕಂಡಿಲ್ಲ. ಮಳೆಗಾಲದಲ್ಲಿ ಈ ದಾರಿ ಸಂಪೂರ್ಣ ನೀರು ಮತ್ತು ಕೆಸರಿನಿಂದ ಆವರಣಗೊಂಡು, ವಾಹನ ಸಂಚಾರವೇ ಅಸಾಧ್ಯವಾಗುತ್ತದೆ.ಶಾಲೆಯ ಮಕ್ಕಳು, ತುರ್ತು ಪರಿಸ್ಥಿತಿಯಲ್ಲಿ ಅಂಬ್ಯುಲೆನ್ಸ್ ಬರುವುದಕ್ಕೂ ದೊಡ್ಡ ಅಡಚಣೆಯಾಗುತ್ತಿದೆ.

ಗ್ರಾಮಸ್ಥರ ಪ್ರಕಾರ, “ಮಳೆ ಬಿದ್ದರೆ ರಸ್ತೆಯುದ್ದಕ್ಕೂ ಕೆಸರುಗದ್ದೆಯಂತಾಗುತ್ತದೆ.” ಹಲವು ಬಾರಿ ಸಂಬಂಧಿತ ಇಲಾಖೆಗೆ ಮನವಿ ಸಲ್ಲಿಸಿದರೂ, ಇನ್ನೂ ಅಭಿವೃದ್ಧಿ ಕಾರ್ಯ ಪ್ರಾರಂಭವಾಗಿಲ್ಲ. ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ, ಅನುದಾನ ದೊರೆತರೆ ರಸ್ತೆ ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ.ಗ್ರಾಮಸ್ಥರು ಸರ್ಕಾರದಿಂದ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ..

ಗ್ರಾಮ ಪಂಚಾಯತ್ ಸದಸ್ಯರು ಗೆದ್ದು 5 ವರ್ಷ ಕಳೆಯುತ್ತಾ ಬಂದರು ಬಂಗಲಗಲ್ಲು–ಚದರವಳ್ಳಿ ರಸ್ತೆಯ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಾಣದಿರುವುದು, ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೇವಲ ಭರವಸೆಗಳನ್ನೇ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೊಸನಗರ ಶಾಸಕರ ಶಾಲೆ ಸರ್ಕಲ್ ಕಲ್ಲುಗಳು !

Leave a Comment