ಸಾಗರ: ಬಂಗಾರಪ್ಪ ಜನ್ಮದಿನದ ಅಂಗವಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

Written by Koushik G K

Published on:

ಶಿವಮೊಗ್ಗ, : ರಾಜ್ಯ ರಾಜಕಾರಣದಲ್ಲಿ ಬಡವರ ಬಂಧು ಎಂದರೆ ಅದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಮಾತ್ರ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅವರು ಹೇಳಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಂದು ಸಾಗರದ ತಾಯಿಮಗು ಆಸ್ಪತ್ರೆಯಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ಎಸ್. ಬಂಗಾರಪ್ಪ ಅಭಿಮಾನಿಗಳ ವತಿಯಿಂದ ಎಸ್. ಬಂಗಾರಪ್ಪ ಅವರ 93ನೇ ಜನ್ಮದಿನದ ಅಂಗವಾಗಿ ಒಳರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್ ವಿತರಣೆ ಮಾಡುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು,

“ಎಸ್. ಬಂಗಾರಪ್ಪ ಅವರು ತಮ್ಮ ಮುಖ್ಯಮಂತ್ರಿಯಾದ ಅವಧಿಯಲ್ಲಿ ಬಡವರ ಪರವಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದರು. ಆಶ್ರಯ, ಅಕ್ಷಯ, ಆರಾಧನಾ, ವಿಶ್ವದಂತಹ ಯೋಜನೆಗಳು ಇಂದಿಗೂ ಜನರ ನೆನಪಿನಲ್ಲಿ ಉಳಿದಿವೆ. ಬಗರ್‌ಹುಕುಂ ಮೂಲಕ ಭೂಹೀನರಿಗೆ ಭೂಮಿಯನ್ನು ನೀಡಿ ಅವರ ಜೀವನಕ್ಕೆ ಬೆಳಕು ತಂದ ಬಂಗಾರಪ್ಪ ಅವರ ಶಿಷ್ಯನಾಗಿರುವುದು ನನಗೆ ಹೆಮ್ಮೆಯ ವಿಷಯ,” ಎಂದು ಹೇಳಿದರು.

ಅವರು ಮುಂದುವರೆದು, “ಗ್ರಾಮೀಣ ಕೃಪಾಂಕ ಯೋಜನೆಯ ಮೂಲಕ ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿದರು. ಇಂದಿಗೂ ಜನರು ಬಂಗಾರಪ್ಪ ಅವರ ಚಿತ್ರವನ್ನು ಪೂಜಿಸುತ್ತಾರೆ ಎಂಬುದೇ ಅವರ ಜನಪ್ರಿಯತೆಯ ಸಾಬೀತು. ಅವರು ಶಾಸಕರನ್ನು ತಯಾರಿಸಿದ ರಾಜಕೀಯ ಗುರುವಾಗಿದ್ದರು. ಅನೇಕ ಯುವ ಮುಖಂಡರಿಗೆ ಮಾರ್ಗದರ್ಶನ ನೀಡಿ ರಾಜಕೀಯ ರಂಗಕ್ಕೆ ಕರೆತಂದರು. ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ವಿಶೇಷ ಒತ್ತು ನೀಡಿ ಶಾಲಾ ಮಕ್ಕಳಿಗೆ ಪ್ರೋತ್ಸಾಹಧನ ನೀಡುವ ಕಾರ್ಯ ಪ್ರಾರಂಭಿಸಿದರು. ನನ್ನ ರಾಜಕೀಯ ಜೀವನದಲ್ಲಿ ಅವರು ಗುರುಗಳು ಮಾತ್ರವಲ್ಲ, ಸ್ಪೂರ್ತಿಯ ಶಕ್ತಿಯಾಗಿದ್ದಾರೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಮಂಡಗಳಲೆ ಗಣಪತಿ, ಮಧುಮಾಲತಿ, ಸರಸ್ವತಿ ನಾಗರಾಜ್, ಎಲ್. ಚಂದ್ರಪ್ಪ, ಸೋಮಶೇಖರ ಲ್ಯಾವಿಗೆರೆ, ರವಿಕುಮಾರ್, ಲಲಿತಮ್ಮ, ಸುರೇಶಬಾಬು, ಉಷಾ ಎನ್., ಗಿರೀಶ್ ಕೋವಿ, ಮಹಾಬಲ ಕೌತಿ, ವಿಲ್ಸನ್, ರವೀಂದ್ರ, ಡಿ. ದಿನೇಶ್, ಅನ್ವರ್ ಭಾಷಾ, ನಾರಾಯಣ ಅರಮನೆಕೇರಿ, ಯಶವಂತ ಪಣಿ ಮತ್ತಿತರರು ಹಾಜರಿದ್ದರು.

ಬಿಪಿಎಲ್ ಕಾರ್ಡ್ ರದ್ದುಪಡಿಸಲ್ಲ ; ಸಚಿವ ಕೆ.ಹೆಚ್. ಮುನಿಯಪ್ಪ

Leave a Comment