ಹೊಸನಗರ ; 12ನೇ ಶತಮಾನದಲ್ಲಿ ಬಸವಣ್ಣನೆಂದರೆ ಒಂದು ಸಂವಿಧಾನ ಒಂದು ತತ್ವಜ್ಞಾನ ಒಂದು ಪ್ರಯೋಗ ಶಾಲೆ ನಡೆ-ನುಡಿ ಎರಡು ಒಂದೇ ಆಗಿದ್ದ ಬಸವಣ್ಣನವರು ಇಡೀ ಪ್ರಪಂಚಕ್ಕೆ ಒಂದು ಚೇತನವಿದ್ದಂತೆ ಎಂದು ಹೊಸನಗರದ ತಹಶೀಲ್ದಾರ್ ರಶ್ಮಿ ಹಾಲೇಶ್ ಹೇಳಿದರು.
ಇಲ್ಲಿನ ತಾಲ್ಲೂಕು ಕಛೇರಿಯ ಆವರಣದಲ್ಲಿ ಬಸವಣ್ಣನವರ ಜಯಂತಿ ಆಚರಿಸಲಾಗಿದ್ದು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶರಣರು ವಿಚಾರಗಳು 11-12ನೇ ಶತಮಾನಕ್ಕೆ ಮಾತ್ರ ಸೀಮಿತವಲ್ಲ ಅವು ಅನಾದಿ ಅನಂತ ಜನರ ಬಾ಼ಷೆಯಲ್ಲಿ ತಮ್ಮ ಪ್ರಕರ ವಿಚಾರಗಳನ್ನು ಅಭಿವ್ಯಕ್ತಿಗೊಳಿಸಿದ ಬಸವಣ್ಣನವರು ಸಮಾಜದಲ್ಲಿದ್ದ ಕುರುಡು ನಂಬಿಕೆಗಳ ವಿರುದ್ಧ ವೈಚಾರಿಕ ಕಹಳೆ ಉದಿದವರು.
ಶರಣರು ತತ್ವಜ್ಞಾನಿಗಳು ದಾರ್ಶನಿಕರು ಸೇರಿದಂತೆ ಎಲ್ಲ ಬಗೆಯ ಸಾಧಕರು ಒಂದೆಡೆ ಸೇರಿ ಚಿಂತನ ಮಂಥನ ನಡೆಸುತ್ತಿದ್ದ ಅನುಭವ ಮಂಟಪದ ದೃಶ್ಯಗಳನ್ನು ವರ್ಣಿಸಲು ಅಸಾಧ್ಯ. ಕಾಯಕ ಸಂದೇಶ ಸಾರಿದ ಶರಣರು ಬಸವಧಿ ಶರಣರು ವಿಶ್ವಕ್ಕೆ ಕಾಯಕ ಸಂದೇಶ ನೀಡುವ ಮೂಲಕ ಜೀವಪರ ಕಾಳಗಿಯನ್ನು ತೋರಿಸಿದ್ದಾರೆ. ಜಗತ್ತಿನಲ್ಲಿ ಉದಯಿಸಿದ ಯಾರು ಕಾಯಕ ಸಂದೇಶ ನೀಡಿಲ್ಲ ಜನರಲ್ಲಿ ದುಡಿಮೆ ಬಗ್ಗೆ ಪೂಜ್ಯನೀಯ ಭಾವನೆ ಮೂಡುವಂತೆ ಮಾಡಿದ ಶರಣ ಬಸವಣ್ಣ ಯಾರಲ್ಲೂ ಭೇದ-ಭಾವ ಮಾಡದೇ ಶೋಷಿತರು ಸಮಾಜದಿಂದ ತುಳಿತಕ್ಕೆ ಒಳಗಾದವರನ್ನು ಶ್ರಮ ಸಮುದಯದೊಂದಿಗೆ ಗುರುತಿಸಿ ನಡೆ ನುಡಿ ಬಗ್ಗೆ ಕಲಿಸಿದ ಬಸವಣ್ಣನವರ ತತ್ವ ಸಿದ್ದಾಂತಗಳು ಇಂದಿಗೂ ಎಲ್ಲರೂ ಮೈಗೂಡಿಸಿಕೊಂಡು ಬರುತ್ತಿದ್ದು ಇಂದಿನ ಯುವಕರು ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಸಮಾಜದ ಏಳಿಗೆಗೆ ದುಡಿಯಬೇಕೆಂದರು.
ಈ ಬಸವಣ್ಣ ಜಯಂತಿಯಲ್ಲಿ ತಾಲ್ಲೂಕು ಕಛೇರಿಯ ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ಲೋಹಿತ್, ಸಿದ್ದಪ್ಪ, ಅಶೋಕ, ನಾಗಪ್ಪ, ಗಣೇಶ್, ಉಮೇಶ್, ಹೆಚ್.ಆರ್. ತೀಥೇಶ, ವಸಂತ ಮಹೇಶ್, ವೇದಾಂತಪ್ಪ ಗೌಡ, ಮಲ್ಲಿಕಾರ್ಜುನ, ವಸಂತ ಬಿ.ಎಂ, ಲೀಲಾಶಂಕರ್, ಶೋಭರಾಜ್, ಮಲ್ಲಿಕಾರ್ಜುನ ಎ. ವಿ, ಗೀತಾ, ಗಣಪತಿ ಗೌಡ, ಯಶೋದಮ್ಮ, ನಂದಸ್ವಾಮಿ, ಪ್ರತಿಭಾ ಪಾಲಕ್ಷ, ಪಾರ್ವತಿ ಲೋಕೆ, ವಾಣಿ ಶಿವಪ್ರಕಾಶ್ ಇನ್ನೂ ಮುಂತಾದ ವೀರಶೈವ ಮುಖಂಡರು ಉಪಸ್ಥಿತರಿದ್ದರು.
ಪ.ಜಾ. ಒಳಮೀಸಲಾತಿ ಸಮೀಕ್ಷಾ ಕಾರ್ಯಕ್ಕೆ ಸಹಕರಿಸಿ
ಹೊಸನಗರ : ಪರಿಶಿಷ್ಟ ಜಾತಿ ಒಳಮೀಸಲಾತಿ ಕುರಿತಂತೆ ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಏಕವ್ಯಕ್ತಿ ವಿಚಾರಣಾ ಆಯೋಗವನ್ನು ರಚಿಸಲಾಗಿದ್ದು ಈ ಆಯೋಗವನ್ನು ಪರಿಶಿಷ್ಟ ಜಾತಿಗಳ ವಿವಿಧ ಒಳಮೀಸಲಾತಿಗಳನ್ನು ವರ್ಗೀಕರಿಸಿ ಉಪವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶಗಳನ್ನು ಸಂಗ್ರಹಿಸಿ ಸಮೀಕ್ಷೆಯನ್ನು ಕೈ ಗೊಳ್ಳಲು ಉದ್ದೇಶಿಸಿರುತ್ತರೆ.
ಈ ಸಮೀಕ್ಷಾ ಕಾರ್ಯವನ್ನು ಮೇ 05 ರಿಂದ 17 ರವರೆಗೆ ಕೈಗೊಳ್ಳಲಾಗಿರುತ್ತದೆ. ಸಮೀಕ್ಷಾ ಸಮಯದಲ್ಲಿ ಮನೆ ಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸಲು ಪ್ರಯುಕ್ತ ಈ ಸಮೀಕ್ಷಾ ದಿನಾಂಕಗಳಲ್ಲಿ ಮನೆಯ ಹಿರಿಯ ಸದಸ್ಯರು ಹಾಜರಿದ್ದು, ಅಗತ್ಯ ದಾಖಲಾತಿಗಳೊಂದಿಗೆ ಕುಟುಂಬದ ಸಂಪೂರ್ಣ ಮಾಹಿತಿಯನ್ನು ಸಮೀಕ್ಷಾದಾರರಿಗೆ ನೀಡಿ ಸಹಕರಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್2 ಸಹಾಯಕ ನಿರ್ದೇಶಕಿ ಗೀತಾ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.