AJJAMPURA ; ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಶಿವನಿ ಆರ್.ಎಸ್. ನಲ್ಲಿ ಸೆ. 19ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಬಾಲಕಿ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮಗಳನ್ನು ತಾನೇ ಕೊಲೆ ಮಾಡಿರುವುದಾಗಿ ಮೃತಳ ತಂದೆ ಮಂಜುನಾಥ್ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದು ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪೊಲೀಸ್ ವಿಚಾರಣೆಯಲ್ಲಿ ಸತ್ಯ ಬಾಯ್ಬಿಟ್ಟ ಮಂಜುನಾಥ್ !
ಬೆಂಗಳೂರು ಮೂಲದ ಮಂಗಳಾ ಎಂಬುವರನ್ನು ಪ್ರೀತಿಸಿ 2018ರಲ್ಲಿ ಮದುವೆಯಾಗಿದ್ದೆ. ಪತ್ನಿ ನಡವಳಿಕೆ ಮೇಲೆ ಶಂಕೆ ಇತ್ತು. ಮಗಳು ವೇದಾ ನನಗೆ ಹುಟ್ಟಿಲ್ಲ ಎಂಬ ಅನುಮಾನ ಹೆಚ್ಚಾಗಿತ್ತು. ಇದೇ ವಿಷಯದಲ್ಲಿ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿತ್ತು. ಮಗಳು ಕೂಡಾ ನನ್ನ ವಿರುದ್ಧ ಮಾತಾಡುತ್ತಿದ್ದಳು. ಸೆ.19 ರಂದು ಮನೆಗೆ ಬಂದಾಗ, ಮಗಳು ವೇದಾಳಿಗೆ ಏನು ಮಾಡುತ್ತಿದ್ದೀಯಾ? ಎಂದು ಪ್ರಶ್ನಿಸಿದೆ, ಅವಳು ನೀನು ಯಾರು ಕೇಳೋದಕ್ಕೆ, ಕುಡಿದು ಮನೆಗೆ ಬಂದಿದ್ದೀಯಾ? ಎಂದಳು ಇದರಿಂದ ಸಿಟ್ಟಿಗೆದ್ದು ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದಾಗ ಆಕೆ ಮೃತಪಟ್ಟಳು ಎಂದು ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.
ಪ್ರಕರಣ ಭೇದಿಸಿದ ಡಿವೈಎಸ್ಪಿ ಹಾಲಮೂರ್ತಿ ರಾವ್, ಪಿಎಸ್‌ಐ ವಿರೇಂದ್ರ, ತಿಪ್ಪೇಶ್, ಶ್ರೀಧರ್ ನಾಯ್ಕ್, ಕೃಷ್ಣಾನಾಯ್ಕ, ಚಂದ್ರಮ್ಮ, ಸಿಬ್ಬಂದಿ ಗುರುಮೂರ್ತಿ, ಮಧು, ಒಂಕಾರಮೂರ್ತಿ, ಬಸವರಾಜಪ್ಪ, ಉಮೇಶ್, ಕಿರಣ್ ಕುಮಾರ್, ದಯಾ, ಮೇಘ, ಶಿವಾನಂದ್ ತಂಡವನ್ನು ಎಸ್ಪಿ ಜಿತೇಂದ್ರ ಕುಮಾರ್ ಅಭಿನಂದಿಸಿದ್ದಾರೆ.