ಹೊಸನಗರ

ಹೊಸನಗರ : ಶಿಕ್ಷಕರ ದಿನಾಚರಣೆ ಮುಂದೂಡಿಕೆಗೆ ಬಿಜೆಪಿ ಖಂಡನೆ – ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ತೀವ್ರ ವಾಗ್ದಾಳಿ

ಹೊಸನಗರ ; ದೇಶಾದ್ಯಂತ ಸಡಗರ ಸಂಭ್ರಮದಿಮದ ಆಚರಿಸುವ ಶಿಕ್ಷಕರ ದಿನಾಚರಣೆಯನ್ನು ಹೊಸನಗರದಲ್ಲಿ ಈ ವರ್ಷ ಸೆ.5ರ ಬದಲಾಗಿ ಸೆ.7ರಂದು ಆಚರಿಸಲು ಶಾಸಕ ಬೇಳುರು ಗೋಪಾಲಕೃಷ್ಣ ಸೂಚಿಸಿದ್ದಾರೆ. ಇದು ಇಡೀ ಶಿಕ್ಷಕ ಸಮುದಾಯಕ್ಕೆ ಹಾಗೂ...

InShot 20260906 175126053

ಹೊಸನಗರ ; ದೇಶಾದ್ಯಂತ ಸಡಗರ ಸಂಭ್ರಮದಿಮದ ಆಚರಿಸುವ ಶಿಕ್ಷಕರ ದಿನಾಚರಣೆಯನ್ನು ಹೊಸನಗರದಲ್ಲಿ ಈ ವರ್ಷ ಸೆ.5ರ ಬದಲಾಗಿ ಸೆ.7ರಂದು ಆಚರಿಸಲು ಶಾಸಕ ಬೇಳುರು ಗೋಪಾಲಕೃಷ್ಣ ಸೂಚಿಸಿದ್ದಾರೆ. ಇದು ಇಡೀ ಶಿಕ್ಷಕ ಸಮುದಾಯಕ್ಕೆ ಹಾಗೂ ಡಾ. ಎಸ್.ರಾಧಾಕೃಷ್ಣನ್ ಅವರಿಗೆ ತೋರಿರುವ ಅಗೌರವವಾಗಿದೆ ಎಂದು ಬಿಜೆಪಿ ಪಕ್ಷದ ಮಂಡಲದ ಅಧ್ಯಕ್ಷ ಎನ್.ಸತೀಶ ಆರೋಪಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಬಿಜೆಪಿ ಕಚೇರಿಯಲ್ಲಿ ಭಾನುವಾರ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದೇಶ ನಿರ್ಮಾಣದ ಮಹತ್ವದ ಕಾರ್ಯ ನಡೆಯುವುದು ಶಿಕ್ಷಕರಿಂದ. ಈ ಬಾರಿ ನಮ್ಮ ತಾಲೂಕಿನ ಶಿಕ್ಷಕಿಯೊಬ್ಬರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ದೊರತಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಸಂಭ್ರಮ ಸಡಗರದಿಂದ ಸೆ.5ರಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದೀನೋತ್ಸವವನ್ನು ಆಚರಸಿಬೇಕಿತ್ತು. ಆದರೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸೆ.5ರ ಬದಲಾಗಿ ಸೆ.7ಕ್ಕೆ ಆಚರಿಸಲು ಸೂಚಿಸಿದ್ದಾರೆ. ಇದಕ್ಕೆ ಬೆಜೆಪಿ ಪಕ್ಷ ತೀವ್ರ ಖಂಡನೆ ವ್ಯಕ್ತಪಡಿಸುತ್ತದೆ ಎಂದರು.

ಸೆ.5ರಂದು ಸಾಗರದಲ್ಲಿ ಆಚರಿಸಿದ ಶಿಕ್ಷಕರ ದಿನಾಚರಣೆಗೂ ಶಾಸಕ ಬೇಳೂರು ಗೈರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಗೈರಾಗಿದ್ದು, ತೀರ್ಥಹಳ್ಳಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇಂಥಹ ಬೇಜವಚಾಬಾರಿಯುತ ನಡೆಯನ್ನು ಕ್ಷೇತ್ರದ ಜನತೆ ನಿರೀಕ್ಷೆ ಮಾಡಿರಲಿಲ್ಲ ಎಂದರು.
ಸ್ವಾತಂತ್ರ್ಯೋತ್ಸವವನ್ನು ಆ.15ರಂದೇ ಆಚರಿಸಬೇಕು. ಗಣಪತಿ ಹಬ್ಬವನ್ನು ಹಬ್ಬದ ದಿನದಂದೇ ಆಚರಿಸಬೇಕು. ದಿನಾಚರಣೆಗಳನ್ನು ನಮಗೆ ಸಮಯ ಸಿಕ್ಕಾಗ ಆಚರಿಸುವುದು ಸರಿಯಲ್ಲ ಎಂದು ಆರೋಪಿಸಿದರು.

ಪ.ಪಂ.ಗೆ 10 ಪೈಸೆ ನೀಡಿಲ್ಲ : ಹಾಲಗದ್ದೆ ಉಮೇಶ್

ಹೊಸನಗರ ಪಟ್ಟಣ ಪಂಚಾಯತಿಗೆ ಸರ್ಕಾರದಿಂದ ₹ 5 ಕೋಟಿ ತಂದಿದ್ದೇವೆ ಅಭಿವೃದ್ಧಿ ಪಡಿಸುತ್ತೇವೆ ಎಂದು ಜನರಿಗೆ ಹರಕೆಯ ಉತ್ತರ ನೀಡಿ ಪ್ರಚಾರ ಪಡೆಯುತ್ತಿದ್ದು ನಾನು ಅಧ್ಯಕ್ಷರಾಗಿ ಕೆಲಸ ಮಾಡುವಾಗ ಹೊಸನಗರ 11 ವಾರ್ಡ್‌ಗಳ ಕಂದಾಯ ಹಣ, ನಲ್ಲಿ ನೀರಿನ ಹಣ, ವಾಣಿಜ್ಯ ಬಾಡಿಗೆಯಿಂದ ಬಂದ ಹಣದಲ್ಲಿ ಹೊಸನಗರದ ಬಸ್ ಸ್ಟ್ಯಾಂಡ್ ಮೇಲ್ಚಾವಣಿಗೆ ಸೀಟು ಹಾಗೂ ಚೌಡಮ್ಮ ರಸ್ತೆಯ ಪಟ್ಟಣ ಪಂಚಾಯತಿ ವಾಣಿಜ್ಯ ಮಳಿಗೆ ಮೇಲ್ಭಾಗಕ್ಕೆ ಮಳಿಗೆಗಳು ನಿರ್ಮಾಣವಾಗುತ್ತಿದೆ ಶಾಸಕರು ಅಬ್ಬರದ ಪ್ರಚಾರದೊಂದಿಗೆ ನಾವೇ ತಂದ ಹಣ ಎಂದು ಪ್ರಚಾರ ಪಡೆಯುತ್ತಿದ್ದಾರೆ ಮುಂದಿನ ದಿನದಲ್ಲಿಯಾದರೂ ದ್ವೇಷ ರಾಜಕಾರಣ ಬಿಟ್ಟು ಮುಖ್ಯಮಂತ್ರಿಗಳಿಂದ ಹಣ ತಂದು ಹೊಸನಗರ ಅಭಿವೃದ್ಧಿಪಡಿಸಲಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್‌ ಹೇಳಿದರು.

ಫುಡ್‌ಕೋಟ್ ಮಾಡಲು ಸಾಧ್ಯವಿಲ್ಲ ; ಎಂ.ಎಂ. ಸುಧಾಕರ್

ಹೊಸನಗರದ ಬೀದಿ ವ್ಯಾಪಾರಿಗಳಿಗೆ ಅನುಕೂಲಕರವಾಗಿ ಫುಡ್‌ಕೋರ್ಟ್ ನಿರ್ಮಿಸಿ ಕೊಡಲು ಶಾಸಕರ ಬಳಿ ನಿಯೋಗ ಹೋಗಿರುವುದು ಸತ್ಯ. ಆದರೆ ಶಾಸಕರು ಎನ್.ಹೆಚ್. ರಸ್ತೆಯಾದ ನೆಹರು ಮೈದಾನದ ಪಕ್ಕ ಫುಡ್‌ಕೋರ್ಟ್ ನಿರ್ಮಿಸಲು ಹೊರಟಿರುವುದು ಎಷ್ಟು ಸರಿಯೆಂದು? ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಎಂ.ಎನ್ ಸುಧಾಕರ್ ಪ್ರಶ್ನಿಸಿದ್ದು ನಾವು ಶಾಸಕರ ಬಳಿ ಹೋಗಿ ಎನ್.ಹೆಚ್ ರಸ್ತೆಯಿದೆ ಅದು ಅಲ್ಲದೇ ಸುಪ್ರೀಂಕೋರ್ಟ್ ಆದೇಶದನ್ವಯ ಮಧ್ಯ ರಸ್ತೆಯಿಂದ 40 ಮೀಟರ್ ಬಿಡಬೇಕಾಗಿದೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಈ ರಸ್ತೆಯಲ್ಲಿ ಓಡಾಟಕ್ಕೆ ತೊಂದರೆಯಾಗುತ್ತದೆ. ಸಾರ್ವಜನಿಕರಿಗೆ ಓಡಾಟ ನಡೆಸಲು ತೊಂದರೆಯಾಗುತ್ತದೆ ಎಂದು ಹೇಳಿದರೂ ಸರ್ಕಾರ ಹಣ ಫೋಲು ಮಾಡಿ ಪುಟ್‌ಕೋರ್ಟ್ ನಿರ್ಮಿಸಲು ಹೊರಟಿದ್ದು ನಾವು ಹೈಕೋರ್ಟ್‌ನಿಂದ ಸ್ಟೇ ತಂದಿದ್ದೇವೆ. ಆದರೆ ಶಾಸಕರು ನಮ್ಮನ್ನು ಪಾಪಿಗಳು ಎಂದು ಕರೆಯುವುದರ ಜೊತೆಗೆ ಸುಪ್ರೀಂಕೋರ್ಟ್‌ಗೆ ಹೋಗಿ ಅಲ್ಲೇ ಫುಟ್‌ಕೋರ್ಟ್ ನಿರ್ಮಿಸುತ್ತೇವೆ ಎಂದು ಬೀದಿಬದಿ ವ್ಯಾಪಾರಿಗಳಿಗೆ ಮೂಗಿಗೆ ತುಪ್ಪ ಸವರಿಸುತ್ತಿದ್ದಾರೆ. ಯಾವುದೇ ಕಾರಣದಿಂದಲ್ಲೂ ನ್ಯಾಶನಲ್ ಹೈವೆಯ ಪಕ್ಕ ಫುರ್ಡ್ ಕೋರ್ಟ್‌ ನಿರ್ಮಿಸಲು ಕೋರ್ಟ್‌ ಬಿಡುವುದಿಲ್ಲ. ಬೀದಿ ಬದಿ ವ್ಯಾಪಾರಿಗಳಿಗೆ ಮೂಗಿಗೆ ತುಪ್ಪ ಸವರುವುದನ್ನು ಬಿಟ್ಟು ಬೇರೆ ಜಾಗ ಕಲ್ಪಿಸಲಿ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಅಭಿವೃದ್ಧಿ ಕುಂಠಿತ ; ಸುರೇಶ್ ಸ್ವಾಮಿರಾವ್

ಹೊಸನಗರ ಸಾಗರ ಕ್ಷೇತ್ರದ ಶಾಸಕರು ಶಿಕ್ಷಕ ವೃಂದಕ್ಕೆ ಅಗೌರವ ತೋರಿದ್ದಾರೆ. ರಾಧಾಕೃಷ್ಣನ್ ಹುಟ್ಟಿದ ದಿನವನ್ನೇ ಬದಲಾಯಿಸಿ ಸೆಪ್ಟೆಂಬರ್ 7ಕ್ಕೆ ಮಾಡಿದ್ದಾರೆ. ಮುಂದಿನ ದಿನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಗಾಂಧಿ ಜಯಂತಿಯ ದಿನವು ಬದಲಾವಣೆಯಾದರೆ ಆಶ್ಚರ್ಯಪಡಬೇಕಾಗಿಲ್ಲ. ಸುಮಾರು ಮೂರೂವರೆ ವರ್ಷದಲ್ಲಿ ಹೊಸನಗರ ತಾಲ್ಲೂಕು ಯಾವುದೇ ಅಭಿವೃದ್ಧಿಪಡಿಸಿಲ್ಲ ಸುಮ್ಮನೆ ಶಂಕುಸ್ಥಾಪನೆ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇನ್ನೂ ಉಳಿದಿರುವುದು ಕೇವಲ ಒಂದೂವರೆ ವರ್ಷ ಅದರಲ್ಲಿಯಾದರೂ ಜನಪರ ಕೆಲಸ ಮಾಡಲಿ ಹೊಸನಗರ ತಾಲ್ಲೂಕು ಅಭಿವೃದ್ಧಿಪಡಿಸಲಿ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್‌ ಹೇಳಿದರು.

ಶಿಕ್ಷಕರಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಿ : ಎನ್.ಆರ್. ದೇವಾನಂದ್

ಶಿಕ್ಷಕರು ಭಾರತ ದೇಶದ ಆಸ್ತಿ. ಶಿಕ್ಷಕರಿಂದ ನಮ್ಮ ದೇಶ ಪ್ರಗತಿ ಹೊಂದುತ್ತಿದೆ. ಯಾವುದೇ ಕಾರಣಕ್ಕೂ ಶಿಕ್ಷಕ ವೃಂದಕ್ಕೆ ಚ್ಯುತಿ ಬಾರದಂತೆ ಶಾಸಕರು ಗೌರವದಿಂದ ಕಾಣುವಂತಾಗಲಿ ಎಂದು ಬಿಜೆಪಿ ಹಿರಿಯ ಮುಖಂಡ ಎನ್.ಆರ್ ದೇವಾನಂದ್‌ ಹೇಳಿದರು.

ಈ ಪ್ರತಿಕಾಘೋಷ್ಠಿಯಲ್ಲಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಿಕ್ಕನಕೊಪ್ಪ ಶ್ರೀಧರ್, ರಾಘವೇಂದ್ರ ಕಲ್ಲುಕೊಪ್ಪ, ಮಾರುತಿಪುರ ಗಣೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]