ಹೊಸನಗರ : ಕೇಂದ್ರ ಸರ್ಕಾರ ಜಾರಿಗೆ ತರಲು ಹೋರಾಟಿರುವ ರೈತ ವಿರೋಧಿ ಮಸೂದೆಯಾದ ಕಸ್ತೂರಿ ರಂಗನ್ ವರದಿಯ ವಿರುದ್ಧ ಸುಮಾರು 7 ಕಿ.ಮೀ. ಬಿಂತ್ಲಾ ಗ್ರಾಮದಿಂದ ತೀರ್ಥಹಳ್ಳಿಯವರೆಗಿನ ಪಾದಯಾತ್ರೆಗೆ ಕೇಂದ್ರ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡುತ್ತಿರುವುದರಿಂದ ಬಿಜೆಪಿ, ಜೆಡಿಎಸ್ ನಾಯಕರುಗಳಿಗೆ ಅವಕಾಶವಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಇಲ್ಲಿನ ಗಾಂಧಿ ಮಂದಿರ (ಕಾಂಗ್ರೆಸ್ ಕಛೇರಿ)ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಪಾದಯಾತ್ರೆಯಲ್ಲಿ ಕೇಂದ್ರದ ಬಿಜೆಪಿ ಕೇಂದ್ರ ಸರ್ಕಾರವೇ ಅಧಿಸೂಚನೆಯನ್ನು ಹೊರಡಿಸಿರುವುದರಿಂದ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಬೇಕಾದ ಅನಿವಾರ್ಯತೆ ಇರುವುದರಿಂದ ಹಾಗೂ ಮುಂದಿನ ದಿನದಲ್ಲಿ ಚುನಾವಣೆಗಳು ಸಾಲು-ಸಾಲು ಬರುತ್ತಿರುವುದರಿಂದ ಬಿಜೆಪಿಯವರು ಬಂದು ನಮ್ಮ ಜನರನ್ನು ದಾರಿ ತಪ್ಪಿಸುವುದರಿಂದ ಆ ಎರಡು ಪಕ್ಷದವರನ್ನು ಬಿಟ್ಟು ರೈತರು ಹಾಗೂ ಇತರೆ ಎಲ್ಲಪಕ್ಷದ ನಾಯಕರನ್ನು ಪಾದಯಾತ್ರೆಗೆ ಆಹ್ವಾನಿಸಲಾಗಿದೆ ಎಂದರು.
ಈ ಪಾದಯಾತ್ರೆ ಕಾಂಗ್ರೆಸ್ ಪಕ್ಷದ ವತಿಯಿಂದಲ್ಲೇ ಆರಂಭಿಸಲಾಗಿದ್ದು ಕಸ್ತೂರಿ ರಂಗನ್ ವರದಿ ಅನಿಷ್ಠಾನದಿಂದ ಮಲೆನಾಡಿನ ಜನತೆಗೆ ಆಗುವ ಅನ್ಯಾಯವನ್ನು ವಿರೋಧಿಸಿ ಈ ಪ್ರತಿಭಟನೆ ಹಾಗೂ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಕಾಡು ಪ್ರಾಣಿಗಳ ರಕ್ಷಣೆಗಾಗಿ ಮನುಷ್ಯರನ್ನು ಬಲಿಕೋಡುತ್ತಿರುವುದು ಯಾವ ನ್ಯಾಯ? ಪ್ರಾಣಿಗಳನ್ನು ರಕ್ಷಿಸಲು ಮನುಷ್ಯ ಪ್ರಾಣಿಯನ್ನು ಬಲಿ ಕೋಡುವ ಈ ವರದಿ ಜಾರಿ ಮಾಡುವುದು ಬೇಡ ಎಂದು ವರದಿ ಜಾರಿಯಾದರೇ ಅರಣ್ಯ ದಂಚಿನ ಜನರನ್ನು ಒಕ್ಕಲೆಬ್ಬಿಸಿ ಎಲ್ಲಿಗೆ ಕಳುಹಿಸುತ್ತಾರೆ ಎಂದು ಸರ್ಕಾರ ಸ್ವಷ್ಟ ಪಡಿಸಬೇಕು ಜೊತೆಗೆ ಕಸ್ತೂರಿ ರಂಗನ್ ಅವರು ಮೂಲತ ಶಿಕ್ಷಣ ತಜ್ಞರು ಅವರು ಪರಿಸರ ತಜ್ಞರಲ್ಲ ಎಂಬುದನ್ನು ಆರಿತುಕೊಳ್ಳಬೇಕು ಎಂದರು.
ಜನಸಂಖ್ಯೆ ಹೆಚ್ಚಳ:
1900ರ ಇಸವಿಯಲ್ಲಿ ಭಾರತದ ಜನಸಂಖ್ಯೆ ಸುಮಾರು ಅಂದಾಜು 20 ಕೋಟಿ ಇತ್ತು ಆದರೆ ಈಗ ಭಾರತ ದೇಶದ ಜನಸಂಖ್ಯೆ 140 ಕೋಟಿ ದಾಟಿದೆ. ಇಷ್ಟು ದೊಡ್ಡ ಜನಸಮೂಹಕ್ಕೆ ವಸತಿ ಉದ್ಯೋಗ ಅಗತ್ಯವಿದೆ. ಕೇವಲ ಗಾಳಿ-ನೀರಿನಲ್ಲಿ ಬದುಕಲು ಸಾಧ್ಯವಿಲ್ಲ. ಕಸ್ತೂರಿ ರಂಗನ್ ವರದಿ ಜಾರಿ ಮಾಡುವುದಕ್ಕಿಂತ ಮುಂಚೆ ಭಾರತ ದೇಶ ಜನರಿಗೆ ವಸತಿ ಹಾಗೂ ಉದ್ಯೋಗ ಕಲ್ಪಿಸಿ ಎಂದರು.
2013ರಲ್ಲಿ ಪ್ರಥಮ ಕರಡು ಬಂದಾಗ ಅಲ್ಲಿಂದ ಇಲ್ಲಿಯವರೆಗೆ ನಾವು ವಿರೋಧಿಸುತ್ತಾ ಬಂದಿದ್ದರೂ ಈಗ ಮತ್ತೆ ಕರಡು ಅಧಿಸೂಚನೆ ಹೊರಡಿಸಲಾಗಿದೆ ಮುಂಬರುವ ಮೂರು ದಿನಗಳ ಅಧಿವೇಶನದಲ್ಲಿ ಕನಿಷ್ಠ ಒಂದು ದಿನ ಈ ಬಗ್ಗೆ ಚರ್ಚಿಸಿ ಕೂಡಲೆ ವರದಿಯನ್ನು ಹಿಂಪಡೆಯಲಿ ಎಂದರು.

ಪಾದಯಾತ್ರೆ:
ಸೆಪ್ಟಂಬರ್ 7ನೇ ಸೋಮವಾರ ಕಸ್ತೂರಿ ರಂಗನ್ ವರದಿಯಡಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸುವ ತೀರ್ಥಹಳ್ಳಿಯ ಬಿಂತ್ಲಾ ಗ್ರಾಮದಿಂದ ತೀರ್ಥಹಳ್ಳಿಯವರೆಗೆ ಸೂಮಾರು 7. ಕಿ.ಮೀ. ನಡೆಯಲಿದೆ. ಇದರ ಚಾಲನೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಗಡೆಯವರು ಚಾಲನೆ ನೀಡಲಿದ್ದಾರೆ. ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಬಳಿ ಸಾರ್ವಜನಿಕರ ಸಭೆಯಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಸಭೆಯನ್ನು ಉದ್ಘಾಟಿಸಲಿದ್ದಾರೆ ಎಂದರು.
ಈ ಪಾದಯಾತ್ರೆಗೆ ಮಲೆನಾಡಿನ ಎಲ್ಲ ಜನರು ಆಗಮಿಸಿ ಯಶಸ್ವಿಗೊಳಿಸಿಕೊಡುವುದರ ಜೊತೆಗೆ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಕೈ ಜೋಡಿಸಿ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿಗೌಡ, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಎಂ.ಪಿ ಸುರೇಶ್, ಪ್ರಭಾಕರ್, ಅಶ್ವಿನಿಕುಮಾರ್, ಜಯನಗರ ಗುರು, ಗುರುರಾಜ್ ಸುಣಕಲ್ಲು, ಧರ್ಮರಾವ್, ಶುಭಾಕರ, ವಕೀಲ ಮೋಹನ್ ಶೆಟ್ಟಿ, ಇಕ್ಬಾಲ್ ಉಬೇದುಲ್ಲ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

